ಇಂಡಿ

ವಿವೇಕಾನಂದ ಸಂದೇಶಗಳು ಯುವಕರಿಗೆ ಇಂದಿಗೂ ಮಾದರಿ: ಬಸವರಾಜ

ವಿವೇಕಾನಂದ ಸಂದೇಶಗಳು ಯುವಕರಿಗೆ ಇಂದಿಗೂ ಮಾದರಿ: ಬಸವರಾಜ


ಇಂಡಿ12: ಒಂದು ಕುಟುಂಬಕ್ಕಾಗಿ ಒಬ್ಬ ವ್ಯಕ್ತಿಯನ್ನು, ಗ್ರಾಮದ ಒಳತಿಗಾಗಿ ಕುಟುಂಬವನ್ನು, ದೇಶದ ಒಳತಿಗಾಗಿ ಹಳ್ಳಿಯನ್ನು, ಮನುಕುಲದ ಒಳತಿಗಾಗಿ ದೇಶವನ್ನು, ಲೋಕದ ಒಳತಿಗಾಗಿ ಎಲ್ಲವನ್ನು ತ್ಯಜಿಸಬಹುದು ಎಂದು ಸ್ವಾಮಿ ವಿವೇಕಾನಂದ ನೀಡಿದ ಉಪನ್ಯಾಸ ನಮ್ಮ ಯುವಕರಿಗೆ ಇಂದಿಗೂ ಮಾದರಿ ಎಂದು ತಹಸೀಲ್ದಾರ ಬಸವರಾಜ ಐ.ಈ ಹೇಳಿದರು. 

ಅವರು ಬುಧವಾರ ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಸ್ವಾಮಿ ವಿವೇಕಾನಂದ ಯುವ ಶಕ್ತಿ ಸಂಘದಿಂದ ನಡೆದ ವಿವೇಕಾನಂದರ 159 ನೇ ಜಯಂತಿ ನಿಮಿತ್ಯ ನಡೆದ ಸಮಾರಂಭದಲ್ಲಿ ಮಾತನಾಡಿದರು. 

ಯುವ ಜನಾಂಗ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು, ಏಳಿ ಎದ್ದೇಳಿ ಯುವಕರೇ ಗುರಿ ಮುಟ್ಟುವ ತನಕ ಮುನ್ನುಗ್ಗಿ ಎಂದು ಯುವಕರನ್ನು ಸ್ವಾಮಿ ವಿವೇಕಾನಂದರು ಪ್ರೇರೇಪಿಸುತಿದ್ದರು ಎಂದರು. 

ಸ್ವಾಮಿ ವಿವೇಕಾನಂದ ಸಂಘದ ಅಧ್ಯಕ್ಷ ರಾಮಸಿಂಗ ಕನ್ನೊಳ್ಳಿ ಮಾತನಾಡಿ ವಿವೇಕಾನಂದರ ಯುವ ಶಕ್ತಿಗೆ ಸ್ಪೂರ್ತಿದಾಯಕ ಸಂದೇಶಗಳು ಯುವಕರಿಗೆ ಮಾದರಿ ಯಾಗಲಿವೆ ಎಂದರು. ಸತೀಶ ಕುಂಬಾರ, ಶ್ರೀಧರ ಕ್ಷತ್ರಿ ಮಾತನಾಡಿದರು. 

ಸೋಮು ನಿಂಬರಗಿಮಠ, ಮಹೇಶ ಕುಂಬಾರ, ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ಬುದ್ದುಗೌಡ ಪಾಟೀಲ, ಜಯರಾಮ ರಾಠೋಡ, ಬಸವರಾಜ ರಾವೂರ, ಸಂಜು ದಶವಂತ  ಮತ್ತಿತರಿದ್ದರು. 


ಸುದ್ದಿ ಓದಿ