ವಿಜೃಂಭಣೆಯಿಂದ ವಿಠ್ಠಲ ರುಕ್ಮೀಣಿ ದೇವಸ್ಥಾನದ ಜಾತ್ರೆ
ಬೈಲಹೊಂಗಲ 16: ಪಟ್ಟಣದ ಜವಳಿ ಖೂಟದಲ್ಲಿರುವ ವಿಠ್ಠಲ ರುಕ್ಮೀಣಿ ದೇವಸ್ಥಾನದ ಜಾತ್ರಾ ಮಹೋತ್ಸವ ಮತ್ತು ಸಂತ ಶಿರೋಮಣಿ ನಾಮದೇವ ಮಹಾರಾಜರ 673 ನೇ ಪುಣ್ಯತಿಥಿ ಶನಿವಾರ ಅದ್ದೂರಿಯಾಗಿ ಜರುಗಿತು.
ಪುತಿಸ್ಥಾಪನೆ ಕಾರ್ಯಕ್ರಮ ಕಾಕಡ ಆರತಿ, ವಿಶೇಷ ಪೂಜೆ, ಪ್ರವಚನ, ಕಿರ್ತನೆಯೊಂದಿಗೆ ಪ್ರಾರಂಭಗೊಂಡು ವಿಠ್ಠಲ ರುಕ್ಮೀಣಿ ಭಾವಚಿತ್ರದ ಮೆರವಣಿಗೆ, ಪಾಲಕಿ ಉತ್ಸವ ಸಂತರ ಭಜನೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ದೇವಸ್ಥಾನಕ್ಕೆ ತಲುಪಿತು.
ಮೆರವಣಿಗೆಯುದ್ದಕ್ಕೂ ಅಬಂಗ ಗೀತೆ, ಪುರುಷ, ಮಹಿಳೆಯರ ಪುಗಡಿ ಆಟ ನೋಡುಗರ ಗಮನ ಸೆಳೆದವು. ವಿಶೇಷವಾಗಿ ಮಹಿಳೆಯರು ಕೈ ಕೈ ಹಿಡಿದು ಬುಗರಿಯಂತೆ ತಿರುಗಿ ಸಂತಸ ಪಟ್ಟರು. ಪಾಲಿಕಿಗೆ ಮಹಿಳೆಯರು ನೀರು ಹಾಕಿ ತಮ್ಮ ಭಕ್ತಿ ಭಾವ ಮೆರೆದರು, ಪುಷ್ಪಮಳೆ ಗೈದರು. ನಂತರ ಮಹಾಪ್ರಸಾದ ಜರುಗಿತು.
ನಾಮದೇವ ಶಿಂಪಿ ಸಮಾಜ ಅಧ್ಯಕ್ಷ ಅಣ್ಣಪ್ಪ ಜೊಂಜಾಳೆ, ನಾಮದೇವ ಮಿತ್ರ ಮಂಡಳ ಅಧ್ಯಕ್ಷ ಸುಹಾಸ ಬೊಂಗಾಳೆೆ, ಅಶೋಕ ಮಿರಜಕರ, ಮನೋಹರ ಬೋಂಗಾಳೆೆ, ಪಂಡರೀನಾಥ ಮಾಳೋದೆ, ಸುರೇಶ ಕಾಮಕರ, ಉದಯ ಕೊಳೇಕರ, ವಿಠಲ ಬೊಂಗಾಳೆ, ಶಂಕರ ಬಡ್ಲಿ, ರವೀಂದ್ರ ಜೊಂಜಾಳೆ, ಮಂಜುನಾಥ ಬಗಾಡೆ, ಅಭಿಷೇಕ ಬೊಂಗಾಳೆ, ಧನಂಜಯ ಮಾಳೋದೆ, ರವಿ ಇಟಗಿಕರ, ಶ್ರೀಧರ ಇಟಗಿಕರ, ಪುಂಡಲೀಕ ಖಟಾವಕರ, ರಾಹುಲ ಜೊಂಜಾಳೆ, ಕಿಷ್ಣಾ ಭಸ್ಮೆ, ರಾಜು ಬೊಂಗಾಳೆ, ವಿಜಯಕುಮಾರ ಕೊಳೇಕರ, ದೀಪಕ ಬುಲಬುಲೆ, ನಾಗಪ್ಪ ರೇಣಕೆ, ವಿಠ್ಠಲ ರೇಣಕೆ, ರವಿ ರೇಣಕೆ, ಪುಂಡಲೀಕ ಖಟಾವಕರ, ದೇವಸ್ಥಾನ ಅರ್ಚಕ ವಿಠ್ಠಲ ಜೊಂಜಾಳೆ, ಸತೀಶ ಕಾಕಡೆ, ಪ್ರಕಾಶ ಗಾಂಡೊಳ್ಳಿ, ರುಕ್ಮೀಣಿ ಮಹಿಳಾ ಮಂಡಳದ ಅಧ್ಯಕ್ಷೆ ಮಂಗಲಾ ಕೊಳೇಕರ, ಜಯಶ್ರೀ ಜೊಂಜಾಳೆ, ನೀತಾ ಮಾಳೋದೆ, ಶೋಭಾ ಕೋರೆ್ಡ, ಅಂಜನಾ ಬೋಂಗಾಳೆ, ಅಮೃತಾ ಬೋಂಗಾಳೆ, ಸವಿತಾ ಕೊಳೇಕರ, ಸ್ವರೂಪಾ ಗಾಂಡೊಳ್ಳಿ, ರಶ್ಮಿ ಕೊಳೇಕರ, ಹರ್ಷತಾ ಜೊಂಜಾಳೆ, ಲತಾ ಕೋರೆ್ಡ, ಐಶ್ವರ್ಯ ಕೊಳೇಕರ, ಗಾಯತ್ರಿ ಬೋಂಗಾಳೆ ಇದ್ದರು.