ಇಂಡಿ

ವಿಶ್ವಕರ್ಮ ಜಯಂತಿ ಅದ್ದೂರಿಯಾಗಿ ಆಚರಣೆ

ವಿಶ್ವಕರ್ಮ ಜಯಂತಿ ಅದ್ದೂರಿಯಾಗಿ ಆಚರಣೆ

ಇಂಡಿ17 : ನಗರದ ತಹಶೀಲ್ದಾರ ಕಚೇರಿ ಆವರಣದಲ್ಲಿ ವಿಶ್ವಕರ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಬೆಳಗ್ಗೆ   ವಿಶ್ವಕರ್ಮ ಭಾವಚಿತ್ರಕ್ಕೆ ಇಂಡಿ ಗ್ರೇಡ್ 2 ತಹಶೀಲ್ದಾರ ಧನಪಾಲಶೇಟ್ಟಿ ದೇವೂರ ಅವರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು ವಿಶ್ವಕರ್ಮ ದಿನವೂ ಹಿಂದೂ ಸಮುದಾಯದಲ್ಲಿ ಗಮನಾರ್ಹ ಪ್ರಾಮುಖ್ಯತೆಯನ್ನು ಹೊಂದಿದೆ. ದೈವಿಕ ಸೃಷ್ಟಿಕರ್ತ ಎಂದು ಗೌರವಿಸಲ್ಪಡುವ ಭಗವಾನ್ ವಿಶ್ವಕರ್ಮನಿಗೆ ಗೌರವ ಸಲ್ಲಿಸುವುದು ಮತ್ತು ಆಚರಿಸಲು ಸಮರ​‍್ಿತವಾದ ಹಬ್ಬವಾಗಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಇಂಡಿ ತಾಲೂಕು ಪಂಚಾಯತಿ ಇಲಾಖೆಯ ಅಧಿಕಾರಿ ಮುರುಗೇಶ್ ನಾರಾಯಪೂರ, ಕಂದಾಯ ಇಲಾಖೆ ಶೀರಸದ್ದಾರ ಎಸ್ ಎಚ್ ಮುಜಗೊಂಡ, ಬಸವರಾಜ ರಾವೂರ, ಮೋಗಿ, ಬಳ್ಳೊಳ್ಳಿ ಕಂದಾಯ ನೀರೀಕ್ಷಕರಾದ ಎಚ್ ಎಸ್ ಗುನ್ನಾಪೂರ, ಎಮ್ ಪಿ ಕೋಡತೆ, ಉಮೇಶ್ ಲಮಾಣಿ, ಪಿ ಎಚ್ ಕಾಂಬಳೆ, ಬಸವರಾಜ ಕಟಾಯಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು 


ಸುದ್ದಿ ಓದಿ