ರಾಣೇಬೆನ್ನೂರು ನಗರದಲ್ಲಿ ಮಾ. 15 ರಿಂದ ವಿಶ್ವಧರ್ಮ ಪ್ರವಚನ
ರಾಣೇಬೆನ್ನೂರ ಮಾ 8 ನಗರದ ಸರ್ವಧರ್ಮ ಪ್ರವಚನ ಸಮಿತಿಯು ಮಾ. 15 ರಿಂದ ಬರುವ ಏಪ್ರಿಲ್5 ರವರೆಗೆ 21 ದಿವಸಗಳ ಕಾಲ ವಿಶ್ವಧರ್ಮ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ವಾಸುದೇವ. ಪಿ.ಲದ್ವಾ ಹೇಳಿದರು. ಅವರು ಸೋಮವಾರ ಕೆಎಚ್ಬಿ ಕಾಲೋನಿ ಕುಂದಾಪುರ ಸಭಾಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಪಕ್ಷಾತೀತ ಜಾತ್ಯಾತೀತವಾಗಿ ಪ್ರವಚನ ಆಯೋಜಿಸಲಾಗಿದ್ದು, ಸರ್ವ ಸಮಾಜದ ಬಾಂಧವರು ಇದರಲ್ಲಿ ಇದ್ದಾರೆ. ಇದೊಂದು ವಿಶ್ವ ವಿಷಯ ದರ್ಶನ ಪ್ರವಚನವಾಗಿದೆ. ಮಾರ್ಚ್ 15ರಿಂದ ಪ್ರತಿನಿತ್ಯ ಸಂಜೆ 6 ಗಂಟೆಯಿಂದ ರಾತ್ರಿ 8 ರವರೆಗೆ ಪ್ರವಚನ ನಡೆಯಲಿದೆ, ವಾಣಿಜ್ಯ ನಗರದ ನಗರಸಭಾ ಕೀಡಾಂಗಣದಲ್ಲಿ ಪ್ರವಚನ ಆಯೋಜಿಸಲಾಗಿದೆ. ಬೆಳಗಾವಿ ಜಿಲ್ಲೆ ಕಿತ್ತೂರ ತಾಲೂಕಿನ ಬೈಲೂರ ನಿಷ್ಕಲ ಮಂಟಪ ಹಾಗೂ ಮುಂಡರಗಿ ಶ್ರೀ ತೋಂಟದಾರ್ಯ ಮಠದ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳವರು ಪ್ರವಚನ ನೀಡುವರು. ಎಂದು ತಿಳಿಸಿದರು. ಮಾಧ್ಯಮಗೋಷ್ಠಿಯಲ್ಲಿ ವಿಶ್ವಧರ್ಮ ಪ್ರವಚನ ಸಮಿತಿಯ ಗೌರವಾಧ್ಯಕ್ಷ ವಾಸುದೇವ ಗುಪ್ತಾ, ಅಧ್ಯಕ್ಷ ಎಂ.ಜಿ.ಪಾಟೀಲ್, ಉಪಾಧ್ಯಕ್ಷ ಅನ್ನದಾನಪ್ಪ ಅಸುಂಡಿ, ಕೋಶಾಧ್ಯಕ್ಷ ರತ್ನಾಕರ ಕುಂದಾಪುರ, ಸಲಹಾ ಸಮಿತಿ ಸದಸ್ಯರಾದ ಎಸ್ ಜಿ.ಹಿರೇಮಠ, ಶಂಭುಲಿಂಗಪ್ಪ ಬೆನ್ನೂರ್, ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.