ಸೌಂದತ್ತಿ

ವೀರಭದ್ರೇಶ್ವರ ಜಯಂತ್ಯೋತ್ಸವ ಅದ್ದೂರಿಯಿಂದ ಆಚರಣೆ

ವೀರಭದ್ರೇಶ್ವರ ಜಯಂತ್ಯೋತ್ಸವ ಅದ್ದೂರಿಯಿಂದ ಆಚರಣೆ

ಸವದತ್ತಿ 26: ಸ್ಥಳೀಯ ಗುರ್ಲಹೊಸೂರಿನ ತಾಲೂಕು ಕ್ರೀಡಾಂಗಣದ ಹತ್ತಿರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರದಂದು ವೀರಭದ್ರೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಿಂದ ಆಚರಿಸಲಾಯಿತು. 

 ಗುರುಪಾದಯ್ಯಶಾಸ್ತ್ರಿಗಳು ಲೋಳಸೂರಮಠ ಇವರ ವೈದಿಕತ್ವದಲ್ಲಿ ವೀರಭದ್ರೇಶ್ವರ ದೇವರಿಗೆ ರುದ್ರಾಭಿಷೇಕ ಹಾಗೂ ಮಹಾ ರುದ್ರಹೋಮ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನದಂತೆ ನೆರವೇರಿಸಲಾಯಿತು. 

ಗುರ್ಲಹೊಸೂರಿನ ವಿವಿಧ ಗಲ್ಲಿಗಳಲ್ಲಿ ಸುಮಂಗಲಿಯರಿಂದ ಕುಂಭ ಮೇಳ ಹಾಗೂ ವೀರಭದ್ರೇಶ್ವರ ದೇವರ ಭಾವಚಿತ್ರದ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಯಲ್ಲಿ ಸಂಬಾಳ ಮೇಳ ಮತ್ತು ಜಾನಪದ ಕಲಾವೃಂದದಿಂದ ಬಲಭೀಮ ದಟ್ಟಿ ಕುಣಿತ ಹಾಗೂ ಕರಡಿಮಜಲು, ಚರಮೂರ್ತೇಶ್ವರ ಭಜನಾ ಮಂಡಳಿಯವರ ಸಕಲ ವಾದ್ಯಗಳೊಂದಿಗೆ ಉತ್ಸವವು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನವನ್ನು ತಲುಪಿತು. 

ಜಾತ್ರಾ ಉತ್ಸವದಲ್ಲಿ ನಾರಾಯಣ ಪೋತದಾರ, ಸುರೇಶ ಕರೀಕಟ್ಟಿ, ಅರುಣ ಸುತಗಟ್ಟಿ, ಮಲ್ಲಿಕಾರ್ಜುನ ಪಟಗುಂದಿ, ಸದಾಶಿವ ಪೋತದಾರ, ನೆಹರು ಕರೀಕಟ್ಟಿ, ವಿಠ್ಠಲ ಪವಾರ, ಡಾ.ಮೋನೇಶ ಪೋತದಾರ, ಶಿವಾನಂದ ಜೇವೂರ, ಮಹಾಂತೇಶ ಕವಲಾಪುರ, ಈರ​‍್ಪ ಹುಲಕೋಟಿ, ಮಹಾಂತೇಶ ಬಟಕುರ್ಕಿ, ರುದ್ರ​‍್ಪ ಮಲ್ಲಾಪುರ, ಹಾಗೂ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ