ಇಂಡಿ

ಇಂದು ಅಭಿನವ ರಾಚೋಟೇಶ್ವರ ಶಿವಾಚಾರ್ಯರ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ

ಇಂದು ಅಭಿನವ ರಾಚೋಟೇಶ್ವರ ಶಿವಾಚಾರ್ಯರ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ
ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರ ಭಾವಚಿತ್ರ.

ಇಂಡಿ: ಡಿ.25 ಮತ್ತು 26 ರಂದು ತಾಲೂಕಿನ ತಡವಲಗಾ ಹಿರೇಮಠದ ಲಿಂ.ರಾಚೋಟೇಶ್ವರ ಶಿವಾಚಾರ್ಯರ ಪುಣ್ಯಸ್ಮರಣೋತ್ಸವ ಹಾಗೂ ಪ್ರಸ್ತುತ ಶ್ರೀಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಹಾಗೂ ಜಾತ್ರಾ ಮಹೋತ್ಸವ ನಿಮಿತ್ಯ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

25 ರಂದು ಬೆಳಿಗ್ಗೆ ಪ್ರಾರ್ತಕಾಲ 6:00 ಘಂಟೆಗೆ ಪಂಚಾಚಾರ್ಯ ಧ್ವಜಾರೋಹಣ, ನಂತರ ಕತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಹೋಮ ಹವನಾದಿ ಪೂಜಾ, ಲಿಂಗ ಧೀಕ್ಷೆ ಅಯ್ಯಾಚಾರ ಕಾರ್ಯಕ್ರಮ ಜರುಗಲಿದೆ. 

ಅದೇದಿನ ಸಾಯಂಕಾಲ 6:00 ಘಂಟೆಗೆ ಸುಮಂಗಲೆಯರಿಗೆ ಉಡಿತುಂಬುವ ಕಾರ್ಯಕ್ರಮ ಹಾಗೂ ಧರ್ಮಸಭೆ ನಡೆಯಲಿದೆ. 

ಡಿ.26 ರಂದು ಬೆಳಿಗ್ಗೆ 9:00 ಘಂಟೆಗೆ ಶ್ರೀಗುರು ರಾಚೋಟೇಶ್ವರ ಪಲ್ಲಕ್ಕಿ ಉತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಭ-ಕಳಸ, ಆರತಿ, ಪುರವಂತರ ಸೇವೆ ಹಾಗೂ ಸಕಲ ವಾಧ್ಯ ವೈಭವಗಳೊಂದಿಗೆ ಸಂಚರಿಸಿ ಶ್ರೀಮಠಕ್ಕೆ ಮರಳಲಿದೆ. ಅದೇ ದಿನ ಸಾಯಂಕಾಲ 6:00 ಘಂಟೆಗೆ ವಿಜಯಪುರದ ನ್ಯೂ ಗೋಲ್ಡನ್ ಮೆಲೋಡಿಸ್, ಸಂತೋಶ ವಾಲೀಕಾರ ಕಲಾತಂಡದಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಇರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎರಡೂ ದಿನದ ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರೀಮಠದ ಪ್ರಕಟಣೆ ತಿಳಿಸಿದೆ. 


ಸುದ್ದಿ ಓದಿ