ವಚನಗಳು ಬಾಳಿಗೆ ದಾರೀದೀಪ: ಗಂಗೂಬಾಯಿ ಗಲಗಲಿ
ಇಂಡಿ18: 12ನೇ ಶತಮಾನದಲ್ಲಿ ಬಸವಾದಿ ಶರಣರ ವಚನಗಳಿಂದ ಪರಸ್ಪರ ಪ್ರೇಮ ಸಹಕಾರ, ಸಹಬಾಳ್ವೆ, ಕರುಣೆ, ತ್ಯಾಗ ಅಳವಡಿಸಿಕೊಂಡಿದ್ದರು. ಹೀಗಾಗಿ ವಚನಗಳು ಮನುಷ್ಯನ ಬಾಳಿಗೆ ದಾರೀದೀಪವಾಗಿವೆ ಎಂದು ಕದಳಿ ವೇದಿಕೆಯ ಅಧ್ಯಕ್ಷೆ ಗಂಗೂಬಾಯಿ ಗಲಗಲಿ ಹೇಳಿದರು.
ಬುಧವಾರ ತಾಲೂಕಿನ ಹಿರೇಬೇವನೂರ ಎಂಪಿಎಸ್ ಶಾಲೆಯಲ್ಲಿ ಕದಳಿ ವೇದಿಕೆ ಸಹಯೋಗದಲ್ಲಿ ನಡೆದ ವಚನಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶಿಕ್ಷಕಿ ಸರೋಜಿನಿ ಮಾವಿನಮರ ಮಾತನಾಡಿ ಭವಿಷ್ಯದ ಜೀವನಕ್ಕೆ ವಚನಗಳು ಸ್ಪರ್ಶಮಣಿಗಳಿದ್ದಂತೆ ಎಂದರು.
ಶಶಿಕಲಾ ಬೇಟಗೇರಿ, ಸುಮಂಗಲಾ ನಿಂಬಾಳ, ಎನ್.ಎನ್.ಹಚಡದ, ದಶರಥ ಕೋರಿ ಮಾತನಾಡಿದರು.
ಆರ್.ಸಿ.ರಾಠೋಡ, ಮುಖ್ಯ ಗುರುಗಳು ಕೆ. ಕಾಂಬಳೆ, ಯು.ಬಿ.ಭಜಂತ್ರಿ, ಎಸ್.ಎಸ್. ನಿಪ್ಪಾಣಿ, ಪಿ.ಎಸ್.ವಾಡಿ. ಎಸ್.ಆರ್.ಕಟ್ಟಿಮನಿ, ಆರ್.ಎಚ್.ರೋಡಗಿ ಮತ್ತಿತರಿದ್ದರು.