ಕೋಮಾರಪಂಥ ಸಮಾಜದ ನೂತನ ಅಧ್ಯಕ್ಷರಾಗಿ ವಿ.ವಿ. ನಾಯ್ಕ್ ಅವಿರೋಧ ಆಯ್ಕೆ
ಲೋಕದರ್ಶನ ವರದಿ
ದಾಂಡೇಲಿ 28 : ದಾಂಡೇಲಿ ಕ್ಷತ್ರೀಯ ಕೋಮಾರಪಂಥ ಸಮಾಜದ ನೂತನ ಅಧ್ಯಕ್ಷರಾಗಿ ಕಾಗದ ಕಾರ್ಖಾನೆಯ ನಿವೃತ್ತ ಅಧಿಕಾರಿ ವಿ.ವಿ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರದ ಟೌನಶಿಪ್ ನಲ್ಲಿರುವ ಕೋಮಾರಪಂಥ ಸಮಾಜದ ಸಭಾಭವನದಲ್ಲಿ ಅಧ್ಯಕ್ಷ ಆರ್.ಪಿ. ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ವಿ.ವಿ. ನಾಯ್ಕ ಅವರನ್ನು ಸರ್ವಾನುಮತದಿಂದ ಅಧ್ಯಕ್ಷರಾಗಿ ನೇಮಿಸಲಾಗಿದೆ.
ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿ ಮಾತನಾಡಿದ ಆರ್.ಪಿ. ನಾಯ್ಕ ಅವರು ಸಮಾಜದ ಒಳಿತಿಗಾಗಿ ರಚನಾತ್ಮಕ ಕಾರ್ಯಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ದಿವಾಕರ ನಾಯ್ಕ, ಮಹೇಶ ನಾಯ್ಕ, ಬೇಬಿ ನಾರಾಯಣ ರಾವ್, ಚಂದಾ ಎಮ್ ನಾಯ್ಕ ಸಂಜಯ ಮಾಳಸೇಕರ್, ನಾಗೇಶ ನಾಯ್ಕ ಉಪಸ್ಥಿತರಿದ್ದರು.