ಬೈಲಹೊಂಗಲ

ಪರಿಸರ ಸ್ನೇಹಿ ಪ್ಯಾಕೇಜಿಂಗ್ ಸಾಮಗ್ರಿಗಳ ಬಳಕೆ ಮಾಡಿ: ವಿರೇಶ ಹಸಬಿ

ಪರಿಸರ ಸ್ನೇಹಿ ಪ್ಯಾಕೇಜಿಂಗ್ ಸಾಮಗ್ರಿಗಳ ಬಳಕೆ ಮಾಡಿ: ವಿರೇಶ ಹಸಬಿ

ಬೈಲಹೊಂಗಲ 27: ಪ್ಲಾಸ್ಟಿಕ್ ಮುಕ್ತ ಅಭಿಯಾನದಲ್ಲಿ ಎಲ್ಲರೂ ಭಾಗವಹಿಸಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಉತ್ತೇಜಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ  ವಿರೇಶ ಹಸಬಿ  ಹೇಳಿದರು. 

ಅವರು ನಾಗರಿಕ ಮಿತ್ರ ಸೇವಾ ಸಂಸ್ಥೆ, ಧಾರವಾಡ ಇವರ ಸಹಯೋಗದೊಂದಿಗೆ ಸ್ವಚ್ಛ ಭಾರತ ಮಿಷನ್ ಅಭಿಯಾನದ ಐಇಸಿ ಚಟುವಟಿಕೆಗಳಡಿ ಘನತ್ಯಾಜ್ಯ ವಸ್ತು ನಿರ್ವಹಣೆ ಕುರಿತಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನದ ಭಾಗವಾಗಿ ಬೈಲಹೊಂಗಲ ಪಟ್ಟಣದ ಶಾಲಾ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಗೆ ಏರಿ​‍್ಡಸಲಾದ ಚಿತ್ರಕಲೆ, ಪ್ರಬಂಧ ಮತ್ತು ಭಾಷಣ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ ಎಲ್ಲರೂ ಪರಿಸರ ಸ್ನೇಹಿ ಪ್ಯಾಕೇಜಿಂಗ್ ಮತ್ತು ಸಾಮಗ್ರಿಗಳ ಬಳಕೆಯನ್ನು ಮಾಡಲು ಸಲಹೆ ನೀಡಿದರು.  

ಈ ಸಂದರ್ಭದಲ್ಲಿ ಶಿವಕುಮಾರ ಆರ್‌. ಹಳ್ಳೂರ ಕಂದಾಯ ಅಧಿಕಾರಿ, ಎಸ್‌. ಎನ್‌. ಪಾಟೀಲ ಕಿರಿಯ ಆರೋಗ್ಯ ನೀರೀಕ್ಷಕರು, ನಾಗರಿಕ ಮಿತ್ರ ಸೇವಾ ಸಂಸ್ಥೆಯ ಎಸ್‌.ಎಮ್‌.ಮುಲ್ಲಾ, ಸಂತೋಷ ಪತ್ತಾರ ಮತ್ತು ಶಾಲಾ ಶಿಕ್ಷಕ, ಶಿಕ್ಷಕಿಯರು ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಜರಿದ್ದರು 


ಸುದ್ದಿ ಓದಿ