ಬೈಲಹೊಂಗಲ

ಬೈಲವಾಡ ಪಿಕೆಪಿಎಸ್‌ಗೆ ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ

ಬೈಲವಾಡ ಪಿಕೆಪಿಎಸ್‌ಗೆ ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ

ಬೈಲಹೊಂಗಲ 10: ಸಮೀಪದ ಬೈಲವಾಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅದ್ಯಕ್ಷರಾಗಿ ಬಸಪ್ಪ ಬ. ಬೋಳಗೌಡರ ಹಾಗೂ ಉಪಾಧ್ಯಕ್ಷರಾಗಿ ರಮೇಶ ಶಿ. ಗಾಡದ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಎಂ. ಎಂ. ಬಸರಿಗಿಡದ ಕಾರ್ಯನಿರ್ವಹಿಸಿದರು.   

ಬುಧವಾರ ಗ್ರಾಮದ ಸಂಘದ ಕಾರ್ಯಾಲಯದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದ್ದು ಸಂಘದ ನಿರ್ಧೇಶಕರಾಗಿ ಬಸಪ್ಪ ಕರೀಕಟ್ಟಿ, ಈರನಗೌಡಾ ಗಿರೆಪ್ಪಗೌಡರ, ರುದ್ರ​‍್ಪ ಹೊಸೂರ, ಶಿವಪುತ್ರ ಮದ್ನಳ್ಳಿ, ಪ್ರಕಾಶಗೌಡಾ ಮುದುಕನಗೌಡರ, ನಿಂಗಪ್ಪ ಕುರಬರ, ಈರ​‍್ಪ ಶಿವಬಸನ್ನವರ, ಮಹಾದೇವಿ ಬೋಳಗೌಡ್ರ, ಭಾರತಿ ಹಿರೇಬಸಪ್ಪಗೌಡ್ರ ಆಯ್ಕೆಯಾಗಿದ್ದಾರೆ.  

ಕಿತ್ತೂರಿನ ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಬಿಜೆಪಿ ಮುಖಂಡ ಪ್ರಕಾಶ ಮೂಗಬಸವ ಉಪಸ್ಥಿತರಿದ್ದರು. 


ಸುದ್ದಿ ಓದಿ