ಸಿರಿಯಾದಲ್ಲಿರುವ ಐಸಿಸ್ ಉಗ್ರರ ನೆಲೆಗಳ ಮೇಲೆ ಅಮೆರಿಕ ದಾಳಿ
US attack on ISIS bases in Syria
ಡಮಾಸ್ಕಸ್ 09: ಸಿರಿಯಾ ರಾಜಧಾನಿ ಡಮಾಸ್ಕಸ್ ಬಂಡುಕೋರರ ತೆಕ್ಕೆಗೆ ಬೀಳುತ್ತಿದ್ದಂತೆಯೇ ಅಧ್ಯಕ್ಷ ಬಶರ್ ಅಸಾದ್ ದೇಶ ಬಿಟ್ಟು ರಷ್ಯಾಕ್ಕೆ ಪರಾರಿಯಾದ ಬೆನ್ನಲ್ಲೇ ಅಮೆರಿಕ ಸಿರಿಯಾದಲ್ಲಿರುವ ಐಸಿಸ್ ಉಗ್ರರ ನೆಲೆಗಳನ್ನು ಗುರಿಯಾಗಿರಿಸಿ ದಾಳಿ ಮಾಡಿದೆ.
ಸಿರಿಯಾದಲ್ಲಿ ನೆಲೆಯೂರಿರುವ ಐಸಿಸ್ ಭಯೋತ್ಪಾದಕ ಗುಂಪಿನ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಅಮೆರಿಕ ನಿರ್ಗಮನ ಅಧ್ಯಕ್ಷ ಜೋ ಬೈಡೆನ್ ಸೋಮವಾರ(ಡಿ.09) ತಿಳಿಸಿದ್ದು,
ಸಿರಿಯಾದಲ್ಲಿನ ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆಯಲು ಅಮೆರಿಕ ಪ್ರಯತ್ನಿಸಲಿದೆ ಎಂದು ಬೈಡೆನ್ ಘೋಷಿಸಿದ್ದಾರೆ. ಭಾನುವಾರ ಅಮೆರಿಕ ಸಿರಿಯಾದೊಳಗೆ ಐಸಿಸ್ ನೆಲೆ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಯುದ್ಧವಿಮಾನಗಳು ಎಲ್ಲೆಡೆ ಸುತ್ತುವರಿದಿರುವುದಾಗಿ ಅಮೆರಿಕದ ಮಿಲಿಟರಿ ಪಡೆ ಖಚಿತಪಡಿಸಿರುವುದಾಗಿ ವರದಿ ವಿವರಿಸಿದೆ.
ಸಿರಿಯಾದಲ್ಲಿ ಐಸಿಸ್ ವಿರುದ್ಧ ಅಮೆರಿಕದ 900 ಪಡೆಗಳು ಹೋರಾಡುತ್ತಿವೆ. ದೀರ್ಘಕಾಲದಿಂದ ಸಿರಿಯಾ ಜನರು ಸರ್ವಾಧಿಕಾರದಿದ ರೋಸಿ ಹೋಗಿದ್ದು, ಇದೀಗ ಸರ್ವಾಧಿಕಾರದ ವಿರುದ್ಧ ಹೋರಾಡಲು ಐತಿಹಾಸಿಕ ಅವಕಾಶವೊಂದು ಲಭಿಸಿರುವುದಾಗಿ ಅಮೆರಿಕ ಹೇಳಿದೆ.
ಐದು ದಶಕಗಳ ಕಾಲದ ಸರ್ವಾಧಿಕಾರದ ವಿರುದ್ಧ ಜಯ ಸಾಧಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದು, ಇದೊಂದು ನನ್ನ ಸಹೋದರರಿಗೆ ದೊರೆತ ವಿಜಯವಾಗಿದೆ ಎಂದು ಬಂಡುಕೋರ ನಾಯಕ ಅಬು ಮೊಹಮ್ಮದ್ ಅಲ್ ಗೋಲಾನಿ ಡಮಾಸ್ಕಸ್ ನಲ್ಲಿ ನೆರೆದಿದ್ದ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ್ದ.
2011ರಿಂದ ಸಿರಿಯಾದಲ್ಲಿ ಸರ್ವಾಧಿಕಾರದ ವಿರುದ್ಧ ನಾಗರಿಕ ಯುದ್ಧ ಆರಂಭಗೊಂಡಿದ್ದು, ಅಂದಿನಿಂದ ಈವರೆಗೆ ಸಿರಿಯಾದಲ್ಲಿ 5 ಲಕ್ಷಕ್ಕೂ ಅಧಿಕ ಜನರು ಸಾವಿಗೀಡಾಗಿದ್ದು, ಲಕ್ಷಾಂತರ ಜನರು ಸಿರಿಯಾ ಬಿಟ್ಟು ವಲಸೆ ಹೋಗಿರುವುದಾಗಿ ವರದಿ ತಿಳಿಸಿದೆ.
ಪದಚ್ಯುತಗೊಂಡ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಮತ್ತು ಕುಟುಂಬ ಸದಸ್ಯರು ಮಾಸ್ಕೋಗೆ ಪಲಾಯನಗೊಂಡಿದ್ದು, ರಷ್ಯಾ ಅಸ್ಸಾದ್ ಕುಟುಂಬಕ್ಕೆ ನೆಲೆಯೂರಲು ರಾಜತಾಂತ್ರಿಕ ಮನ್ನಣೆ ನೀಡಿರುವುದಾಗಿ ವರದಿ ತಿಳಿಸಿದೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 