ಓಷಧಿ ಸಿಗದೆ ಹಾವು ಕಡಿದು ಇಬ್ಬರ ಸಾವು: ವೈದ್ಯಾಧಿಕಾರಿ ಅಮಾನತ್ತಿಗೆ ರೈತ ಸಂಘದ ಆಗ್ರಹ
ರಾಣೇಬೆನ್ನೂರು ಜೂ 13 ಸಾರ್ವಜನಿಕ ಸರ್ಕಾರ ಆಸ್ಪತ್ರೆಯಲ್ಲಿ ಹಾವು ಕಡಿತಕ್ಕೆ ಸಿಗಬೇಕಾದ ಓಷಧಿ ಸಿಗದೇ ಇಬ್ಬರ ಸಾವಿಗೆ ಕಾರಣವಾದ ಆಸ್ಪತ್ರೆಯ ವೈದ್ಯಾಧಿಕಾರಿ ಅಮಾನತ್ತಿಗೆ ಆಗ್ರಹಿಸಿದ ರೈತ ಸಂಘದ ಮುಖಂಡರು ಸೂಕ್ಷ್ಮ ಪ್ರತಿಭಟನೆ ನಡೆಸಿದರು.
ಹಾವೇರಿ ಜಿಲ್ಲೆಯಲ್ಲಿ ಬಹು ದೊಡ್ಡ ತಾಲೂಕ ಕೇಂದ್ರ ರಾಣೇಬೆನ್ನೂರು ವಾಣಿಜ್ಯ ನಗರದ ಪ್ರಮುಖ ಕೇಂದ್ರ ಸ್ಥಾನದ್ಲಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹ ಅಘಾತಕಾರಿ ಘಟನೆಗಳಿಗೆ ಸಂಬಂಧಿಸಿದಂತೆ ಓಷಧಿ ಇರದೇ ಇರುವದರಿಂದ ಇಲ್ಲಿನ ವೈದ್ಯಾಧಿಕಾರಿಗಳು ಇಬ್ಬರ ಸಾವಿಗೆ ಕಾರಣರಾಗಿದ್ದಾರೆ. ಕೂಡಲೇ ಅವರನ್ನು ಅಮಾನತ್ತು ಮಾಡಬೇಕು ಎಂದು ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರ ಗೌಡ ಪಾಟೀಲ್ ಅವರು ತಾಲೂಕಾ ಆಡಳಿತಕ್ಕೆ ಆಗ್ರಹಿಸಿದರು.
ಹಾವು ಕಡಿತದ ಪ್ರಕರಣ ಘಟನೆಯಲ್ಲಿ ತಾಲೂಕಿನ ಹನುಮಾಪುರ್ ಗ್ರಾಮದ ರೈತ ದಾದಾ ಖಲಂದರ್ ಮುಲ್ಲಾ ಸಾಬ್ ನದಾಫ್ (45) ಎಂಬಾತನಿಗೆ ಹಾವು ಕಳೆದಿದ್ದು ತಕ್ಷಣವೇ ಹೊನ್ನತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತರಲಾಗಿದೆ ಆದರೆ ಅಲ್ಲಿಯೂ ಸಹ, ಓಷಧಿ ಇಲ್ಲವೆಂದು ಹೇಳಿದ ನರ್ಸ್ ಓರ್ವರ, ಬೇಜವಾಬ್ದಾರಿತನದಿಂದ, ಸಕಾಲಕ್ಕೆ ಓಷಧಿ ಸಿಗದೆ, ಸರಿಯಾದ ಮಾಹಿತಿಯು ತಿಳಿಸದ ಕಾರಣ ಅನಕ್ಷರಸ್ಥ ಬಡಪಾಯಿ ದಾದಾ ಖಲಂದರ್ ಸಾವು ಕಂಡಿದ್ದಾನೆ.
ಮರುದಿನ ಕಜ್ಜರಿ ಗ್ರಾಮದ 45 ವರ್ಷದ ಫಕೀರ್ಪ ಶಿವಪ್ಪ ಅರಳಿಕಟ್ಟಿ ಎಂಬಾತನು ಪ್ರಾಥಮಿಕ ಕಜ್ಜ ರಿ ಆರೋಗ್ಯ ಕೇಂದ್ರಕ್ಕೆ ಹೋದರೆ ಅಲ್ಲಿಯೂ ಸಹ ಓಷಧಿ ಇಲ್ಲವೆಂಬ ಉತ್ತರ ಪಡೆದ ಕುಟುಂಬಸ್ಥರು, ರಾಣೇಬೆನ್ನೂರು ಸರ್ಕಾರಿ ಆಸ್ಪತ್ರೆಗೆ ಬರುವ ಮಾರ್ಗ ಮಧ್ಯದಲ್ಲಿ ಫಕಿರ್ಪನೂ ಸಹ ಸಾವು ಕಂಡಿದ್ದಾನೆ ಇವರಿಬ್ಬರ ಸಾವಿಗೆ ನೇರವಾಗಿ ಸರ್ಕಾರವೇ ಹೊಣೆ ಹೊರಬೇಕು ಎಂದು ಪಾಟೀಲ್ ಹೇಳಿದರು. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾಯಕದಿಂದ ತಮ್ಮ ಬದುಕನ್ನು ಕಟ್ಟಿಕೊಂಡಿದ್ದ.ಈ ಇಬ್ಬರೂ ರೈತರ ಸಾವಿನಿಂದ ಕುಟುಂಬಗಳು ಅಕ್ಷರಸ ಅನಾಥರಾಗಿದ್ದಾರೆ ಸರ್ಕಾರ ಇವರ ಕುಟುಂಬಕ್ಕೆ ತಲಾ ಹತ್ತು ಲಕ್ಷ ರೂಗಳ ಪರಿಹಾರವನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ಮತ್ತು ಸರ್ಕಾರ ಬೇಜವಾಬ್ದಾರಿ ತೋರಿದೆ, ವೈದ್ಯಾಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಓಷಧಿಯನ್ನು ಸಂಗ್ರಹಿಸಿಕೊಳ್ಳಲೇಬೇಕು, ಸಾವಿಗೆ ನೇರ ಹೊಣೆಯಾದ ತಾಲೂಕ ವೈದ್ಯಾಧಿಕಾರಿ, ಸಂಬಂಧಿಸಿದ ವೈದ್ಯರನ್ನು ತಕ್ಷಣವೇ ಅಮಾನತುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಪಾಟೀಲ್ ಅವರು ಜಿಲ್ಲಾಡಳಿತಕ್ಕೆ ಗ್ರಹಿಸಿದ್ದಾರೆ