ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಪ್ರಯತ್ನಿಸಿ ರಾಚೋಟೇಶ್ವರ ಶ್ರೀ
ಇಂಡಿ 25: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾಗೂ ಇಂಡಿ ಘಟಕ ಸಹಯೋಗದಲ್ಲಿ 1827 ನೇ ಮಧ್ಯವರ್ಜನ ಶಿಬಿರ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮವನ್ನು ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಆರ್ಶಿವಚನ ನೀಡಿ ಮಾತನಾಡಿದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಮಾದಕ ವ್ಯಸನ ಎನ್ನುವುದು ಒಂದು ದೊಡ್ಡ ಸಮಸ್ಯೆ ಎನ್ನುವುದನ್ನು ಪ್ರತಿಯೊಬ್ಬರು ಒಪ್ಪಿಕೊಳ್ಳಬೇಕಾಗಿದೆ. ಅದನ್ನು ಸಮಸ್ಯೆ ಎನ್ನುವುದನ್ನು ಅರಿತು ಅದರ ದುಷ್ಪರಿಣಾಮದ ವಿರುದ್ದ ಕೆಲಸ ಮಾಡಿದಾಗ ನಮ್ಮ ಯುವಶಕ್ತಿ ಉತ್ತಮ ದಾರಿಯತ್ತ ಸಾಗಲು ಸಾಧ್ಯವಿದೆ. ಸಮಾಜದಲ್ಲಿ ಮಾದಕ ವ್ಯಸನಕ್ಕೆ ಮಕ್ಕಳು, ಯುವಕರು ತುತ್ತಾಗದಂತೆ ಇರಬೇಕಾದರೆ ಪೋಷಕರು, ಶಾಲೆ, ಕಾಲೇಜುಗಳಲ್ಲಿ ಶಿಕ್ಷಕರು ಸಮಾಜದಲ್ಲಿ ನಾಗರಿಕರು ಹೆಚ್ಚಿನ ಪಾತ್ರ ವಹಿಸಬೇಕಾಗುತ್ತದೆ. ಕಾನೂನಿನ ಮೂಲಕ ಒಂದು ಕಡೆಯಿಂದ ಇದರ ನಿರ್ಮೂಲನೆ ಸಂಪೂರ್ಣವಾಗಿ ಆಗುವುದು ಕಳವಳಕಾರಿ ವಿಷಯವಾಗಿದೆ. ಈ ನಿಟ್ಟಿನಲ್ಲಿ ತಂದೆ -ತಾಯಿಯಂದಿರರು ವಿದ್ಯಾರ್ಥಿಗಳಿಗೆ ಅವರ ಮಾನಸಿಕ, ದೈಹಿಕ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕಾಗುತ್ತದೆ. ಅವರ ಬದುಕಿನಲ್ಲಿ ಸೋಲು, ವೈಫಲ್ಯದ ಸಂದರ್ಭದಲ್ಲಿ ಅವರ ಮೇಲಿನ ಒತ್ತಡ ನಿವಾರಣೆಗೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಆಗಬೇಕಾಗಿದೆ.ಆವಾಗ ಮಾತ್ರ ಸಮಾಜದಲ್ಲಿ ಮಾದಕ ವ್ಯಸನ ಹೋಗಲಾಡಿಸುವುದು ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆಯಾಗಬೇಕಾಗಿದೆ. ಎಂದು ಹೇಳಿದರು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ ಅವರು ಮಾತನಾಡಿ ಸಮಾಜದಲ್ಲಿ ಮಾದಕ ದ್ರವ್ಯ ಸೇವನೆಯಿಂದ ಬದುಕು ಹಾಳಾಗುತ್ತಿದೆ, ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಜಾಗೃತಿ ಮೂಡಬೇಕಿದೆ.ಖಿನ್ನತೆಯಿಂದ ಮಾನಸಿಕ ದುಃಖ ಉಂಟಾಗಿ ವ್ಯಕ್ತಿಯ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾ ನಿರ್ದೇಶಕರಾದ ಸಂತೋಷ್ ಕುಮಾರ್ ಅವರು ನಮ್ಮ ಸಂಘದಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಆ ಎಲ್ಲಾ ಯೋಜನೆಗಳನ್ನು ಈ ಸಮಾಜದ ಕಡು ಬಡವರಿಗೆ ತಲುಪಿಸಲು ನಮ್ಮ ಸಂಘಟನೆ ಕಾರ್ಯಕರ್ತರು ಮಾಡುತ್ತಾರೆ ಎಂದು ಹೇಳಿದರು.ಈ ಉಪಸ್ಥಿತರಿದ್ದ ಧನ್ನಕುಮಾರ ಶಾಹ,ಪ್ರಕಾಶಗೌಡ ಬಿರಾದಾರ, ಅನೀಲಗೌಡ ಬಿರಾದಾರ, ಸೇರಿದಂತೆ ಅನೇಕರು ಮಾತನಾಡಿದರು. ಈ ಪ್ರಜಾವಾಣಿ ವರದಿಗಾರಾದ ಎ ಸಿ ಪಾಟೀಲ್, ಭೀಮರಾಯ ಬಡಿಗೇರ, ಭಾರತೀ ವಾಲಿ, ಶಶಿಕಲಾ ಬೆಟಗೇರಿ, ಜಯಶ್ರೀ ಪತ್ತಾರ,ಭಾರತಿ ಮಾಳಬಾಗಿ, ಅಹೀಬೂ ನಾಟಿಕಾರ, ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಸಂಯೋಜಕರಾದ ನಟರಾಜ ಹಾಗೂ ವಿವಿಧ ಸಂಘದ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.