ಬೈಲಹೊಂಗಲ

ಸಮರ್ಪಕ ಬಸ್ ವ್ಯವಸ್ಥೆಗೆ ಒತ್ತಾಯಿಸಿ ಸಂಚಾರ ತಡೆ ಪ್ರತಿಭಟನೆ

ಸಮರ್ಪಕ ಬಸ್ ವ್ಯವಸ್ಥೆಗೆ ಒತ್ತಾಯಿಸಿ ಸಂಚಾರ ತಡೆ ಪ್ರತಿಭಟನೆ

ಬೈಲಹೊಂಗಲ 05: ತಾಲೂಕಿನ ಯರಡಾಲ ಗ್ರಾಮದಲ್ಲಿ ಸಮರ​‍್ಕವಾದ ಸಾರಿಗೆ ವ್ಯವಸ್ಥೆ ಇಲ್ಲದಿರುವ ಕಾರಣ ಶಾಲಾ ಕಾಲೇಜ್‌ಗಳ ವಿದ್ಯಾರ್ಥಿಗಳು, ಪಾಲಕರು ಹಾಗೂ ಊರಿನ ಹಿರಿಯರು ಸುಮಾರು ಎರಡು  ಘಂಟೆಗಳ ಕಾಲ ಬಸ್ ತಡೆಗಟ್ಟಿ ಸಂಚಾರ ತಡೆ ನಡೆಸಿ ಪ್ರತಿಭಟನೆ ಮಾಡಿದರು.  

ಸರಕಾರದ ಶಕ್ತಿ ಯೋಜನೆಯಿಂದಾಗಿ ರಾಜ್ಯಾದ್ಯಂತ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದ್ದು, ಶಾಲಾ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಿಪರೀತ ತೊಂದರೆ ಅನುಭವಿಸುವಂತಾಗಿದೆ. ಹಳ್ಳಿಗಳಿಗೆ ಸಮರ​‍್ಕವಾದ ಸಾರಿಗೆ ವ್ಯವಸ್ತೆ ಇಲ್ಲದಿರುವುದು ಹಾಗೂ ನಿಗದಿತ ನಿಲ್ದಾನಗಳಲ್ಲಿ ಸರಿಯಾಗಿ ಬಸ್‌ಗಳನ್ನು ನಿಲ್ಲಿಸದ ಕಾರಣ ವಿದ್ಯಾರ್ಥಿ-ವಿದ್ಯಾರ್ಥಿನೀಯರು ಸಮಯಕ್ಕೆ ಸರಿಯಾಗಿ ತರಗತಿಗೆ ಹೋಗಲಾಗುತ್ತಿಲ್ಲ. ಸುಮಾರು 80 ವಿದ್ಯಾರ್ಥಿಗಳು ಬೈಲಹೊಂಗಲ ಹಾಗೂ ನೇಗಿನಹಾಳ ಪ್ರೌಢಶಾಲೆಗೆ ಪ್ರತಿನಿತ್ಯ ಹೋಗುವುದರಿಂದ, ಮುಂಜಾನೆ 10 ಘಂಟೆ ಹಾಗೂ ಸಾಯಂಕಾಲ 5 ಘಂಟೆಗೆ ಬೈಲಹೊಂಗಲದಿಂದ ನೇಗಿನಹಾಳ ಗ್ರಾಮಕ್ಕೆ, ವಿದ್ಯಾರ್ಥಿಗಳಿಗೋಸ್ಕರ ಸರಿಯಾದ ಬಸ್ ವ್ಯವಸ್ಥೆ ಮಾಡಿ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡಿದರು. 

ನಂತರ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳ ಹಾಗೂ ಪಾಲಕರ ಮನವೊಲಿಸಿ, ಘಟಕ ವ್ಯವಸ್ಥಾಪಕರಿಗೆ ಕರೆ ಮಾಡಿ ಸಮರ್ಪಕವಾದ ಸಾರಿಗೆ ವ್ಯವಸ್ತೆ ್ಥಕಲ್ಪಿಸುವಂತೆ ತಿಳಿಸಿ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟು ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬಳಿಕ ಉಪವಿಭಾಗಾಧಿಕಾರಿಗಳು, ಸಿಪಿಐ ಮತ್ತು ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿದರು. 


ಸುದ್ದಿ ಓದಿ