ಇಂಡಿ

ಸಮಯ ಪ್ರಜ್ಞೆ ಮರೆತ ಅಧಿಕಾರಿಗಳು: ಆಕ್ರೋಶಗೊಂಡ ಸಾರ್ವಜನಿಕರು

ಸಮಯ ಪ್ರಜ್ಞೆ ಮರೆತ ಅಧಿಕಾರಿಗಳು: ಆಕ್ರೋಶಗೊಂಡ ಸಾರ್ವಜನಿಕರು

ಇಂಡಿ05: ಸರಕಾರಿ ಕಚೇರಿಯ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗದೆ ಬೇಜವ್ದಾರಿತನ ಪ್ರದರ್ಶಿಸುತ್ತಿದ್ದು ಸಾರ್ವಜನಿಕರು ಹಾಗೂ ರೈತಾಪಿ ವರ್ಗದವರಿಗೆ ತೊಂದರೆಯಾಗುತ್ತಿದೆ. 

ಪ್ರತಿ ದಿನ ನೂರಾರು ರೈತರು ಭೂ ಮಾಪನ ಇಲಾಖೆಯ ಕೆಲಸಕ್ಕೆ ಬರುತ್ತಾರೆ. ಇಲಾಖೆಯಲ್ಲಿ ಒಬ್ಬ ಸಹಾಯಕ ನಿರ್ದೇಶಕರು ಸೇರಿದಂತೆ 23 ಸರ್ವೇಯರರು ಮತ್ತು 6 ಜನ ಸಿಬ್ಬಂದಿ ಕೆಲಸ ನಿರ್ವಹಿಸುತಿದ್ದು ಬೆಳಿಗ್ಗೆ 11: 30 ಘಂಟೆಯಾದರೂ ಕಚೇರಿಗೆ ಬರುತ್ತಿಲ್ಲವಾದ್ದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಪಟ್ಟಣದಲ್ಲಿ ಭೂ ಮಾಪನ ಇಲಾಖೆಯ ಸಿಬ್ಬಂದಿಗಳು ಬರುವದು ಮಧ್ಯಾಹ್ನ 11 ಗಂಟೆಯ ನಂತರವೇ ಅವರು ಮತ್ತೆ ಹೋಗುವದು ಸಂಜೆ 4 ಗಂಟೆಯ ಮುಂಚೆಯೇ. ಕೆಲವೊಂದು ದಿನವಂತೂ ಬರುವದೇ ಇಲ್ಲ.  ರೈತರು ಕೇಳಿದರೆ ಸಾಹೇಬರು ವಿಜಯಪೂರ ಮೀಟಿಂಗಿಗೆ ಹೋಗಿದ್ದಾರೆ ಇಲ್ಲವೆ ಸರ್ವೇ ಕಾರ್ಯಕ್ಕೆ ಹೋಗಿದ್ದಾರೆ ಎಂಬ ಹಾರಿಕೆ ಉತ್ತರ ಮಾತ್ರ ಪ್ರತಿ ದಿನ ದೊರೆಯುತ್ತದೆ.  

ಸಹಾಯಕ ನಿರ್ದೇಶಕರು ಬಹುತೇಕ ದಿನಾಲು ಬರುವದು 11.30 ರ ನಂತರವೇ ಎಂಬುದು ರೈತರ ಅಳಲು. ಕೆಲವೊಮ್ಮೆ ಬರುವದೇ ಇಲ್ಲ. ಕಚೇರಿಯಲ್ಲಿದ್ದರೆ ಮಾತ್ರ ಮೋಬೈಲನಲ್ಲಿ ದೊರೆಯುತ್ತಾರೆ. ಇಲ್ಲದಿದ್ದರೆ ಮೋಬೈಲ್ ಸಹ ಸ್ವೀಚ್ ಆಫ್ ಆಗಿರುತ್ತದೆ. 

ಗ್ರಾಮಸ್ಥರು ಪ್ರತಿ ದಿನ ನೂರಾರು ರೂ ಹಣ ಖರ್ಚು ಮಾಡಿ ಕೆಲಸವಾಗದೆ ಮರಳಿ ಮನೆಗೆ ಹೋಗುವದು ರೂಢಿಯಾಗಿದೆ.  

ಭೂಮಾಪನ ಇಲಾಖೆಯ ವಾಹನ ಕಳೆದ ನಾಲ್ಕು ವರ್ಷದಿಂದ ಬಳಸಿಯೇ ಇಲ್ಲ. ಅದಲ್ಲದೆ ಅಧಿಕಾರಿಗಳು ಖಾಸಗಿ ವಾಹನ ಬಳುಸುತ್ತಿದ್ದು ಲಕ್ಷಾಂತರ ರೂ. ಖರ್ಚು ಮಾಡಿ ಇಲಾಖೆಯಿಂದ ಪಡೆದ ವಾಹನ ಮಿನಿ ವಿಧಾನಸೌಧದಲ್ಲಿ ಹಾಗೆಯೇ ನಿಂತಿರುವದು ಅಧಿಕಾರಿಗಳ ಕಾರ್ಯವೈಖರಿ ತೋರಿಸುತ್ತದೆ.  

ಬಾಕ್ಸ-1: 

ಭೂಮಾಪನ ಇಲಾಖೆಗೆ ಬಂದರೆ ಅಧಿಕಾರಿಗಳು ಸೇರಿದಂತೆ ಇನ್ನೀತರ ಸಿಬ್ಬಂದಿ ರೈತರಿಗೆ ಸಿಗುವದೇ ಕಷ್ಟ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಮೇಲಾಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಳ್ಳಬೇಕು.  

ಲಿಂಬಾಜಿ ರಾಠೋಡ. ಪುರಸಭೆ ಸದಸ್ಯ ಇಂಡಿ.  

ಬಾಕ್ಸ- 

ವಿಜಯಪುರದಲ್ಲಿ ಬೆಳಿಗ್ಗೆ 10:30 ಕ್ಕೆ ಇಲಾಖೆಯ ಮೀಟಿಂಗ್ ಇತ್ತು. ತದನಂತರ ಮೀಟಿಂಗ್ ರದ್ದುಪಡಿಸಿದ್ದಾಗಿ ಸಂದೇಶ ಬಂತು ಮತ್ತೆ ಮದ್ಯಹ್ನ 1:00 ಘಂಟೆಗೆ ಗೂಗಲ್ ಮೀಟ್ ಇದೆ ಎಂಬ ಸಂದೇಶ ಬಂತು ಬಸ್‌ನಲ್ಲಿ ಗೂಗಲ್ ಮೀಟ್ ಸರಿಯಾಗಿ ಕೇಳಿಸಲ್ಲ ಎಂಬ ಕಾರಣಕ್ಕೆ ವಿಜಯಪುರದಲ್ಲೇ ನಿಂತು ಗೂಗಲ್ ಮೀಟ್ ಮುಗಿಸಿ ಇಂಡಿ ಕಚೇರಿಗೆ ಬರುವುದು ತಡವಾಗಿದೆ. 

ಎಸ್‌.ಎಸ. ಲೋಣಿ ಭೂಮಾಪನ ಇಲಾಖೆಯ ತಾಲೂಕಾ ಅಧಿಕಾರಿ.  


ಸುದ್ದಿ ಓದಿ