ಅಥಣಿ

ನನ್ನ-ಶಾಸಕ ಮಹೇಶ ಕುಮಠಳ್ಳಿ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ ; ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಹೇಳಿಕೆ: ಪುರಸಭಾ ಸದಸ್ಯೆ ಮೃಣಾಲಿನಿ ದೇಶಪಾಂಡೆ ಭೂಮಿ ಪೂಜೆ

ನನ್ನ-ಶಾಸಕ ಮಹೇಶ ಕುಮಠಳ್ಳಿ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ ; ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಹೇಳಿಕೆ: ಪುರಸಭಾ ಸದಸ್ಯೆ ಮೃಣಾಲಿನಿ ದೇಶಪಾಂಡೆ ಭೂಮಿ ಪೂಜೆ

ಲೋಕದರ್ಶನ ವರದಿ 


ಅಥಣಿ 05: ವಿಧಾನ ಸಭಾ ಚುನಾವಣೆಯ ನಂತರವೂ ಕೂಡ ಅಥಣಿ ಮತಕ್ಷೇತ್ರದಲ್ಲಿ ಒಬ್ಬರು ಶಾಸಕರು ಮತ್ತೊಬ್ಬರು ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸುತ್ತೇವೆ ಆದರೆ ಯಾರು ಶಾಸಕರಾಗಬೇಕು, ಯಾರು ವಿಧಾನ ಪರಿಷತ್ ಸದಸ್ಯರಾಗಿರಬೇಕು ಎನ್ನುವುದನ್ನು ಪಕ್ಷದ ರಾಷ್ಟ್ರೀಯ ನಾಯಕರು, ವರೀಷ್ಠರು, ಉಸ್ತುವಾರಿಗಳು ನಿರ್ಧರಿಸುತ್ತಾರೆ ನನ್ನ ಹಾಗೂ ಶಾಸಕ ಮಹೇಶ ಕುಮಠಳ್ಳಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಹೇಳಿದರು.  

ಅವರು ಅಥಣಿ ಪಟ್ಟಣದ 27 ವಾರ್ಡಗಳಲ್ಲಿ ನಗರೋತ್ಥಾನ ಯೋಜನೆಯಡಿ 3 ಕೋಟಿ 60 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.  

     ಚುನಾವಣೆಗಳು 5 ವರ್ಷಗಳಿಗೊಮ್ಮೆ ಬರುತ್ತವೆ ಆದರೆ ಪಕ್ಷದ ವರೀಷ್ಠರು ಮುಂದಾಲೋಚನೆ, ದೂರದೃಷ್ಟಿ ಇಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಮೇ ತಿಂಗಳಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ 140 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಗುರಿ ಇಟ್ಟುಕೊಂಡ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಚುನಾವಣಾ ಉಸ್ತೂವಾರಿಗಳನ್ನಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ, ಸಹ ಉಸ್ತುವರಾಗಳನ್ನಾಗಿ ತಮಿಳು ನಾಡಿನ ಬಿಜೆಪಿ ಅಧ್ಯಕ್ಷರಾದ ಐಪಿಎಸ್ ಅಣ್ಣಾಮಲೈ ಇವರನ್ನು ರಾಷ್ಟ್ರೀಯ ನಾಯಕರು ನೇಮಕ ಮಾಡಿದ್ದು, ಈ ನಾಯಕರೊಂದಿಗೆ ಮತ್ತಿಷ್ಟು ಅನುಭವಿ ನಾಯಕರನ್ನು ರಾಜ್ಯಕ್ಕೆ ನೇಮಕ ಮಾಡುವ ಕುರಿತು ಚಿಂತನೆ ನಡೆದಿದ್ದು, ಆ ಪ್ರಕ್ರಿಯೆ ಕೂಡ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.  

     ನಾನು ಹಾಗೂ ಶಾಸಕರಾದ ಮಹೇಶ ಕುಮಠಳ್ಳಿಯವರು ಸೇರಿಕೊಂಡು 3 ಕೋಟಿ 60 ಲಕ್ಷ ಅನುದಾನದಲ್ಲಿ ಅಥಣಿ ಪುರಸಭಾ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಎಲ್ಲ 27 ವಾರ್ಡಗಳಲ್ಲಿ ಅವಶ್ಯಕತೆ ಅನುಸಾರ ಚಾಲನೆ ನೀಡಿದ್ದೇವೆ. ಅನುದಾನ ಹಂಚಿಕೆಯಲ್ಲಿ ಎಲ್ಲ ವಾರ್ಡಗಳಿಗೂ ಆದ್ಯತೆ ನೀಡಿದ್ದೇವೆ ಇದರಲ್ಲಿ ಪಕ್ಷ ಭೇದ ಮಾಡಿಲ್ಲ.  ಸರಕಾರದ ಅನುದಾನ ಇಡೀ ಪಟ್ಟಣದ ಅಭಿವೃದ್ಧಿಗೆ ಪೂರಕವಾಗಬೇಕು ಎನ್ನುವುದೇ ನನ್ನ ಹಾಗೂ ಮಹೇಶ ಕುಮಠಳ್ಳಿ ಇವರ ಉದ್ದೇಶವಾಗಿದೆ ಎಂದ ಅವರು ಸಿಡಿ ಪ್ರಕರಣ ಸಿಬಿಐ ಒಪ್ಪಿಸಬೇಕೋ ಅಥವಾ ಬೇಡವೋ ಎನ್ನುವುದನ್ನು ದೇಶದ ಗೃಹ ಸಚಿವರು ನಿರ್ಧರಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  

      ಸತ್ತಿ ರಸ್ತೆಯಲ್ಲಿರುವ ಸಾಯಿ ಮಂದಿರದ ಹತ್ತಿರ ಪ್ರಾರಂಭಗೊಂಡ ಗುದ್ದಲಿ ಪೂಜೆ ಮಧ್ಯಾಹ್ನದವರೆಗೂ ಎಲ್ಲ 27 ವಾರ್ಡಗಳಲ್ಲಿ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹಾಗೂ ಶಾಸಕ ಮಹೇಶ ಕುಮಠಳ್ಳಿ, ಪುರಸಭಾ ಮುಖ್ಯಾಧಿಕಾರಿ ಈರಣ್ಣಾ ದಡ್ಡಿ, ಬಿಜೆಪಿ ಯುವ ಧುಋಈಣ ಚಿದಾನಂದ ಸವದಿ,  ಪುರಸಭೆಯ ಎಲ್ಲ ಸದಸ್ಯರು ಸೇರಿದಂತೆ ಅಥಣಿ ಪಟ್ಟಣದ ಪ್ರಮುಖರು, ಹಿರಿಯರು ನೆರವೇರಿಸಿದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ದೀಲೀಪ ಲೋಣಾರೆ, ಮಲ್ಲೇಶ ಹುದ್ದಾರ, ದತ್ತಾ ವಾಸ್ಟರ್, ರಾವಸಾಹೇಬ ಐಹೊಳೆ, ರಾಜಶೇಖರ ಗುಡೋಡಗಿ, ಕಲ್ಲೇಶ ಮಡ್ಡಿ, ಮೃಣಾಲಿನಿ ದೇಶಪಾಂಡೆ, ವೀಲೀನ ಯಳಮಲೆ,  ರಾಜು ಬುಲಬುಲೆ ಗುತ್ತಿಗೆದಾರ ಮೆಹಬೂಬ ತರಡೆ, ಧುರೀಣರಾದ ಆನಂದ ದೇಶಪಾಂಡೆ, ಡಾ. ರವಿ ಸಂಕ, ವಾದಿರಾಜ ಜಂಬಗಿ, ಸುಧೀಂದ್ರ ಬಾದರಾಯಣಿ, ನಿಂಗಪ್ಪ ನಂದೇಶ್ವರ, ಅನೀಲ ಸೌದಾಗರ, ರವಿ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ