ನನ್ನ ಸವದಿಯವರ ಮಧ್ಯೆ ಯಾವುದೇ ಒಪ್ಪಂದವಾಗಿಲ್ಲ ; ಮಹೇಶ ಕುಮಠಳ್ಳಿ ಸ್ಪಷ್ಟ : ಜಲಜೀವನ್ ಮಿಶನ್, ರಸ್ತೆ ಕಾಮಗಾರಿಗೆ ಭೂಮಿ ಪೂಜೆ
ಲೋಕದರ್ಶನ ವರದಿ
ಅಥಣಿ 16: ಬಿಜೆಪಿ ಪಕ್ಷದ ತತ್ವ, ಸಿದ್ಧಾಂತದೊಂದಿಗೆ ಒಪ್ಪಂದ ಮಾಡಿಕೊಂಡು ಬಿಜೆಪಿ ಸೇರೆ್ಡಯಾಗಿರುವೆ ಹೊರತು ಯಾರು ಶಾಸಕರಾಗಬೇಕು ಯಾರು ಎಮ್ಎಲ್ಸಿ ಆಗಬೇಕು ಎನ್ನುವುದಕ್ಕೆ ಯಾರೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ ಎಂದು ಶಾಸಕ, ಕೊಳಗೇರಿ ನಿಗಮದ ಅಧ್ಯಕ್ಷ ಮಹೇಶ ಕುಮಠಳ್ಳಿ ಸ್ಪಷ್ಟಪಡಿಸಿದರು.
ಅವರು ಅಥಣಿ ಗ್ರಾಮೀಣ ಗ್ರಾಮ ಪಂಚಾಯತ ವ್ಯಾಪ್ತಿಯ ಶಿವಯೋಗಿ ನಗರ, ಸಂಕೋನಹಟ್ಟಿಯಲ್ಲಿ ಜಲಜೀವನ್ ಮೀಶನ್ ಕಾಮಗಾರಿಗೆ ಹಾಗೂ ವಡ್ರಟ್ಟಿಯಲ್ಲಿ ವಡ್ರಟ್ಟಿ ಶಿನ್ನಾಳ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ಅಥಣಿ ಮತಕ್ಷೇತ್ರದಿಂದ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ನಾನು ಮತ್ತು ಲಕ್ಷ್ಮಣ ಸವದಿಯವರು ಆಕಾಂಕ್ಷಿಗಳಾಗಿದ್ದು, ನಮ್ಮಿಬ್ಬರಲ್ಲಿ ಯಾರು ಸ್ಪರ್ಧೆ ಮಾಡಬೇಕು ಎನ್ನುವುದನ್ನು ಬಿಜೆಪಿ ಹೈ ಕಮಾಂಡ ನಿರ್ಧರಿಸುತ್ತದೆ ನಮ್ಮಿಬ್ಬರಲ್ಲಿ ಯಾರೊಬ್ಬರಿಗೂ ಟಿಕೆಟ್ ಸಿಗಲಿ ನಾವಿಬ್ಬರು ಪಕ್ಷದ ಗೆಲುವಿಗಾಗಿ ಪ್ರಯತ್ನ ಮಾಡುತ್ತೇವೆ ಎಂದ ಅವರು ನನ್ನ ಮತ್ತು ಲಕ್ಷ್ಮಣ ಸವದಿಯವರ ಮಧ್ಯೆ ಯಾವುದೇ ಒಪ್ಪಂದ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಪ್ರತಿ ಗ್ರಾಮದ ಎಲ್ಲ ಮನೆಗಗಳಿಗೂ ನಲ್ಲಿಗಳ ಮೂಲಕ ಶುದ್ಧ ಕುಡಿಯುವ ನೀರು ಒದಗಿಸುವ ಜಲ ಜೀವನ್ ಮೀಶನ್ ಯೋಜನೆ ಅನುಷ್ಠಾನಗೊಳ್ಳುತ್ತಿದೆ ಎಂದರು. ಗ್ರಾಮೀಣ ಭಾಗದ ತಾಯಂದಿರು ಕುಡಿಯುವ ನೀರಿಗಾಗಿ ಅಲೆದಾಟ ಮಾಡಬಾರದು ಎನ್ನುವ ಕಾರಣದಿಂದ ಈ ಯೋಜನೆ ಇಡೀ ದೇಶದ ಎಲ್ಲ ಗ್ರಾಮಗಳಲ್ಲಿಯೂ ಅನುಷ್ಠಾನಗೊಳ್ಳುತ್ತಿದೆ ಎಂದ ಅವರು ನನ್ನ ಅಧಿಕಾರವಧಿಯಲ್ಲಿ ಅಥಣಿ ಮತಕ್ಷೇತ್ರದಲ್ಲಿ ಶೈಕ್ಷಣಿಕ, ನೀರಾವರಿ, ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಜನಪರ, ಅಭಿವೃದ್ಧಿ ಪರ ಯೋಜನೆಗಳನ್ನು ಅನುಷ್ಠಾನಗೊಳಿಸಿರುವೆ ಎಂದು ಹೇಳಿದರು.
ಶಾಸಕ ಮಹೇಶ ಕುಮಠಳ್ಳಿ ಶಿವಯೋಗಿ ನಗರದಲ್ಲಿ 3 ಕೋಟಿ 50 ಲಕ್ಷ ವೆಚ್ಚದಲ್ಲಿ, ಸಂಕೋನಹಟ್ಟಿಯಲ್ಲಿ 1 ಕೋಟಿ 65 ರೂ ವೆಚ್ಚದ ಜಲಜೀವನ್ ಮತ್ತು 75 ಲಕ್ಷ ವೆಚ್ಚದ ಮಲ ಹೂಳುವ ಸಂಸ್ಕರಣಾ ಘಟಕದ ಹಾಗೂ 1 ಕೋಟಿ 5 ಲಕ್ಷ ವೆಚ್ಚದ ವಡ್ರಟ್ಟಿ ಶಿನ್ನಾಳ ರಸ್ತೆ ಕಾಮಗಾರಿಗೆ ಮತ್ತು ತಂಗಡಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 24 ಲಕ್ಷ ವೆಚ್ಚದ ಕೊಠಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಗುತ್ತಿಗೆದಾರರಾದ ಡಿ.ಸಿ.ನಾಯಿಕ, ಸಂತೋಷ ಕಕಮರಿ, ಮಲ್ಲಿಕಾರ್ಜುನ ಕುಂಬಾರ, ದೀಲೀಪ ಕಾಂಬಳೆ, ನಿಂಗಪ್ಪ ಪೂಜಾರಿ, ಶಿವಾನಂದ ದಿವಾನಮಳ, ಸದಾಶಿವ ಕೊಂಪಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.