ಕೂಡಿ ಬಾಳುವುದರಲ್ಲಿ ಸಾಮರಸ್ಯವಿದೆ : ಶ್ರೀಗಳು
ಇಂಡಿ 28: ಮಾನವ ಜನ್ಮ ದೊಡ್ಡದು ಸರ್ವ ಜನಾಂಗ ಶಾಂತಿಯ ತೋಟ ನಾವೆಲ್ಲರೂ ಕೂಡಿ ಬಾಳುವುದರಲ್ಲಿ ಸಾಮರಸ್ಯವಿದೆ ಎಂದು ಪರಮಪೂಜ್ಯ ಶ್ರೀ ಜಗದೇವ ಮಲ್ಲಿ ಬ್ರಹ್ಮಯ್ಯ ವಿರಕ್ತಮಠ ಆಲಮೇಲ ಹೇಳಿದರು.
ಇಂಡಿ ನಗರದ ವಿಶ್ವ ಹಿಂದೂ ಪರಿಷದ , ಬಜರಂಗದಳ ಹಾಗೂ ಸಿವಿ ರಾಮನ್ ಪದವಿ ಪೂರ್ವ ವಿದ್ಯಾಲಯದಲ್ಲಿ ಇಂಡಿ ಇವರ ಸಹಯೋಗದಲ್ಲಿ ಕೃಷ್ಣ ಜನ್ಮಾಷ್ಟಮಿ ದಿನಾಚರಣೆ ಮತ್ತು ಪರಿಷದ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಮುಖ್ಯ ವಕ್ತಾರರಾಗಿ ಆಗಮಿಸಿದ ಶ್ರೀಯುತ ಸೂರ್ಯನಾರಾಯಣಜಿ ಕ್ಷತ್ರಿಯ ವಿಶ್ವ ಹಿಂದೂ ಪರಿಷತ್ ಬೆಂಗಳೂರು ಇವರು ಮಾರ್ಮಿಕವಾಗಿ ದೇಶ ದೊಡ್ಡದು ದೇಶಕ್ಕಾಗಿ ನಾವೆಲ್ಲರೂ ದುಡಿಯೋಣ ದೇಶವಿದ್ದರೆ ನಾವು ಅನವ ಭಾವನೆಯನ್ನು ಯುವಕರು ತುಂಬಿಕೊಳ್ಳಬೇಕೆಂದು ಹೇಳಿದರು ಇದೇ ಸಂದರ್ಭದಲ್ಲಿ ಸಂಸ್ಥೆ ಸಂಸ್ಥಾಪಕರಾದ ಶಿವಾನಂದ್ ಕಾಮಗೊಂಡ್ ಮಾತನಾಡಿ ಮಾನವ ಧರ್ಮ ದೊಡ್ಡದು ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಶ್ರೀಮಂತ ದುದ್ದಗಿ ಅವರು ಕೃಷ್ಣನ ಜನ್ಮ ಚರಿತ್ರೆ ಹೇಳಿದರು.ಇದೇ ಸಂದರ್ಭದಲ್ಲಿ ಮಾಯಕ್ಕ ಚೌದರಿ ಶಾಂತಿ ಸಂದೇಶದ ಮಂತ್ರಗಳನ್ನು ಪಡಿಸಿದರು.ಸುನಿಲ್ ಜಮಖಂಡಿ ಪ್ರಕಾಶಗೌಡ ಬಿರಾದರ ವಿಠೋಲ ಹೊಸಮನಿ , ಮಲ್ಲಿಕಾರ್ಜುನ್ ಬಿರಾದರ ,ನೇತಾಜಿ ಪವಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮ ಯಶಸ್ವಿಯಾಗಲು ಪ್ರಮುಖ ಪಾತ್ರವಹಿಸಿದರು. ಐವತ್ತಕ್ಕೂ ಹೆಚ್ಚು ಮಕ್ಕಳು ಕೃಷ್ಣನ ವೇಷ ಧರಿಸಿ ಜನ್ಮಾಷ್ಟಮಿಯಲ್ಲಿ ಪಾಲ್ಗೊಂಡಿದ್ದರು ಮಕ್ಕಳಿಗೆ ಬಹುಮಾನ ವಿತರಿಸುವ ಮೂಲಕ ಮಕ್ಕಳ ಸಂತೋಷ ಇಮ್ಮಡಿಗೊಳಿಸಿದ್ದರು ಸಂಸ್ಥೆಯ ನಿರ್ದೇಶಕರಾದ ಮಹಾವೀರ್ ವರ್ಧಮಾನ್, ಸಮ್ಮತಿ ಹಳ್ಳಿ, ಶೈಲೇಶ್ ಬಿಳಗಿ, ಪ್ರಸನ್ನ ಕುಮಾರ್ ನಾಡಗೌಡ ಉಪಸ್ಥಿತರಿದ್ದರು.