ಇಂಡಿ

ಪೌರ ಕಾರ್ಮಿಕರ ವೃತ್ತಿ ಕೂಡ ಗೌರವಯುತವಾದ ವೃತ್ತಿ: ಗಡದೆ

ಪೌರ ಕಾರ್ಮಿಕರ ವೃತ್ತಿ ಕೂಡ ಗೌರವಯುತವಾದ ವೃತ್ತಿ: ಗಡದೆ


ಇಂಡಿ: ಮ್ಯಾನುವೆಲ್ ಸ್ಕಾವೆಂಜರ್ ನಿಯೋಜನೆ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013 ರ ಕಾಯ್ದೆ ಹಾಗೂ ನಿಯಮಗಳನ್ನು ಅಧಿಕಾರಿಗಳು ತಿಳಿದು ಕಾರ್ಯ ನಿರ್ಯಹಿಸಬೇಕು ಎಂದು ಕಂದಾಯ ಉಪವಿಬಾಗಾಧಿಕಾರಿ ರಾಮಚಂದ್ರ ಗಡದೆ ಹೇಳಿದರು.  

ಅವರು ಬುಧವಾರ ಪಟ್ಟಣದ ತಾಲೂಕುಆಡಳಿತ ಸೌಧದ ಕಂದಾಯ ಉಪವಿಬಾಗಾಧಿಕಾರಿಗಳ ಕಚೇರಿಯಲ್ಲಿ ವಿಭಾಗಮಟ್ಟದ ಪೌರ ಅಧಿಕಾರಿಗಳ ತ್ರೈಮಾಸಿಕ ಸಭೆಯಲ್ಲಿ ಮಾತನಾಡುತ್ತಿದ್ದರು.  

ಪೌರ ಕಾರ್ಮಿಕರ ವೃತ್ತಿ ಕೂಡ ಗೌರವಯುತವಾದ ವೃತ್ತಿ. ಅವರನ್ನು ಗೌರವಿಸಿ, ಒಂದು ದಿನದ ಸ್ವಚ್ಛತೆ ಮಾಡುವ ಕೆಲಸ ನಿಲ್ಲಿಸಿದರೆ ಎಲ್ಲರಿಗೂ ತೊಂದರೆ ಯಾಗುತ್ತದೆ. ಪೌರಕಾರ್ಮಿಕರನ್ನು ಅಮಾನವೀಯವಾಗಿ ನಡೆದುಕೊಳ್ಳಬಾರದು ಎಂದರು.  

ಪೌರಕಾರ್ಮಿಕರಿಗೆ ಅವರ ಕುಟುಂಬಕ್ಕೂ ಆರೋಗ್ಯ ವಿಮೆ ಒದಗಿಸಬೇಕು. ಎಲ್ಲ ಪೌರ ಕಾರ್ಮಿಕರಿಗೆ ಭೀಮಾ ಸುರಕ್ಷಾ ಯೋಜನೆ ಮತ್ತು ಆಯುಷ್ಯಮಾನ ಯೋಜನೆ ನೊಂದಾಯಿಸಲು ಎಲ್ಲ ಪೌರ ಕಾರ್ಮಿಕ ಸಿಬ್ಬಂದಿ ರೂ 300 ತುಂಬಿದರೆ 2 ಲಕ್ಷ ರೂ ಈ ಯೋಜನೆ ಹಣ ಪುರಸಭೆ, ಪಟ್ಟಣ ಪಂಚಾಯತ ಖಾಯಂ ಕಾರ್ಮಿಕರಿಗೆ ಅನುಷ್ಠಾನಗೊಳ್ಳಲಿದೆ ಎಂದರು. ಸ್ಕಾವೆಂಜರ್ ಕೆಲಸದವರಿಗೆ ಹ್ಯಾಂಡ್ ಗ್ಲೌಜ್ ಸೇರಿದಂತೆ ಪರಿಕರ ಒದಗಿಸಬೇಕೆಂದು ಕೇಳಿಕೊಂಡರು.  

 ಪೌರಕಾರ್ಮಿಕರಿಗೆ ನೀಡಲಾಗುತ್ತಿರುವ ಪಿ.ಎಫ್, ಹಾಗೂ ಇತರೆ ಸೌಲಭ್ಯಗಳು ಪಾವತಿಯಾಗುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಂಡ ನಂತರ ಏಜನ್ಸಿಗಳಿಗೆ ಬಿಲ್ ಪಾವತಿ ಮಾಡಬೇಕು. ಪ್ರತಿಮಾಹೆ ಅವರಿಗೆ ನೀಡಲಾಗುತ್ತಿರುವ ವೇತನದ ಒಂದು ಪ್ರತಿ ಒದಗಿಸುವಂತೆ ತಿಳಿಸಿದರು.    

ಸಭೆಯಲ್ಲಿ ಇಂಡಿಯ ತಹಶೀಲ್ದಾರ ಸಿ.ಎಸ್‌. ಕುಲಕರ್ಣಿ, ಆರ್‌.ಎಸ್‌. ರೇವಡಿಗಾರ, ಚಡಚಣದ ಸುರೇಶ ಚಾವರ, ದೇವರ ಹಿಪ್ಪರಗಿ ತಹಶೀಲ್ದಾರ ಗುಡದಿನ್ನಿ , ಸಿಂದಗಿಯ ಪ್ರಕಾಶ, ದೇವರ ಹಿಪ್ಪರಗಿಯ ಪಂಚಾಯತಿ ಅಧಿಕಾರಿ ಮುಲ್ಲಾ, ಹಾದಿಮನಿ, ತಾ.ಪಂ ನಂದೀಶ ರಾಠೋಡ ಮತ್ತಿತರಿದ್ದರು. 


ಸುದ್ದಿ ಓದಿ