‘ಕೊರೊನಾ ಸಮಯದಲ್ಲಿ ವೈದ್ಯರ ಸೇವೆ ಅವಿಸ್ಮರಣೀಯ’
ಲೋಕದರ್ಶನ ವರದಿ
ಬೈಲಹೊಂಗಲ 07: ತಮ್ಮ ಜೀವವವನ್ನು ಲೆಕ್ಕಿಸದೆ ಕೊರೊನಾ ವಿರುದ್ಧ ಹೋರಾಟ ನಡೆಸಿ ಜನತೆಯ ಜೀವರಕ್ಷಕರಾಗಿ ಕಾರ್ಯ ಮಾಡಿದ ವೈದ್ಯರ ಸೇವೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಮುನವಳ್ಳಿ ಸೋಮಶೇಖರ ಮಠದ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಹಳೆಯ ಹನುಮಂತ ದೇವರ ದೇವಸ್ಥಾನದ ಬಳಿಯ ಡಾ.ಸಾಧುನವರ ಅವರ ಪ್ರೇರಣಾ ಶಾಲೆಯ ಹಳೆಯ ಕಟ್ಟಡದಲ್ಲಿ ಚಿದಂಬರ ಚೈತನ್ಯ ಆಸ್ಪತ್ರೆಯ ಉದ್ಘಾಟನೆ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿ, ಹಲವಾರು ವರ್ಷಗಳಿಂದ ನಾಡಿನ ಜನತೆಯ ಸೇವೆಯಲ್ಲಿರುವ ಡಾ.ಚಿದಂಬರ ಕುಲಕರ್ಣಿ ಅವರು ಜನತೆಯ ಆರೋಗ್ಯ ರಕ್ಷಣೆಗಾಗಿ ಅವಶ್ಯಕತೆ ಇದ್ದ ಎಲ್ಲ ರೋಗಗಳ ಸಮೂಹದ ಆಸ್ಪತ್ರೆ ತೆರೆದಿದ್ದು ನಾಡಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಕೆಎಲ್ಇ ಸಂಸ್ಥೆಯ ನಿರ್ದೇಶಕ ಡಾ.ವಿ.ಎಸ್. ಸಾಧುನವರ ಮಾತನಾಡಿ, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಉಚಿತ ಆರೋಗ್ಯ ಶಿಬಿರ ಏರಿ್ಡಸಿದ ಡಾ. ಚಿದಂಬರ ಕುಲಕರ್ಣಿ ಅವರು ನುರಿತ ತಜ್ಞರ ತಂಡದ ಆಸ್ಪತ್ರೆ ತೆರೆದಿರುವದು ಶ್ಲಾಘನೀಯ ಎಂದರು.
ಆಸ್ಪತ್ರೆಯ ಮುಖ್ಯಸ್ಥ ಡಾ. ಚಿದಂಬರ ಕುಲಕರ್ಣಿ ಮಾತನಾಡಿ, ಬಡ ಜನತೆಯ ಆರೋಗ್ಯ ದೃಷ್ಠಿಯಿಂದ ತಜ್ಞ ವೈದ್ಯರ ಆಸ್ಪತ್ರೆ ಆರಂಭಿಸಲಾಗಿದೆ ಎಂದರು. ಹೃದ್ರೋಗ ವೈದ್ಯ ಡಾ.ಬಸವರಾಜ ಮಹಾಂತಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುರಗೋಡ ನೀಲಕಂಠ ಸ್ವಾಮೀಜಿ, ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ನಯಾನಗರದ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಬಳ್ಳಾರಿ ಅಜ್ಜನವರು, ಹೊಸೂರ ಮಡಿವಾಳೇಶ್ವರಮಠದ ಗಂಗಾಧರ ಸ್ವಾಮೀಜಿ, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ದೊಡವಾಡದ ಶಿವಾಚಾರ್ಯ ಸ್ವಾಮೀಜಿ, ಶಿವಾನಂದಮಠದ ಮಹಾದೇವ ಸರಸ್ವತಿ ಸ್ವಾಮೀಜಿ, ಕೆಂಗೇರಿಯ ಶಿವಚಿದಂಬರೇಶ್ವರ ಮೂಲಪೀಠದ ದಿವಾಕರ ದೀಕ್ಷಿತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಚಿತ್ರನಟ ಶಿವರಂಜನ ಬೋಳಣ್ಣವರ, ಉದ್ಯಮಿ ವಿಜಯ ಮೆಟಗುಡ್ಡ, ಡಾ.ರವಿರಾಜ ಘೋರೆ್ಡ, ಈಶ್ವರ ಹೋಟೆ, ಸೋಮೇಶ್ವರ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ರಾಜು ಕುಡಸೋಮಣ್ಣವರ, ರಾಜಶ್ರೀ ಕುಲಕರ್ಣಿ, ಡಾ.ಸಾಗರ ಕುಲಕರ್ಣಿ, ಡಾ.ಅಪೂರ್ವಾ ಬೆಳಗಾಂವಕರ, ರಾಜು ಸೊಗಲ, ಸೋಮನಾಥ ಸೊಪ್ಪಿಮಠ, ಶಿವಾನಂದ ಬಡ್ಡಿಮನಿ, ಅಮಿತ ಕುಲಕರ್ಣಿ, ಡಾ.ಮಂಜುನಾಥ ಮುದಕನಗೌಡರ, ಡಾ. ಶರಣಕುಮಾರ ಅಂಗಡಿ, ಪಾಟೀಲ, ಮಹಾಂತೇಶ ಜಿಗಜಿನ್ನಿ, ಡಾ.ಪ್ರಭುರಾಜ ಬಾಳಿ, ಸಂಜಯ ಮೆಟಗುಡ್, ನಾಗೇಶ ಮರಕುಂಬಿ, ನಾಗೇಶ ಯಕ್ಕುಂಡಿ, ಡಾ.ರಾಜು ಬಡ್ಡಿ, ಡಾ.ನಾಗರಾಜ ಹಲಸು, ಶ್ರೀಧರ ಲೋಕೂರ, ಡಾ.ಮಂಜುನಾಥ ಮುರಗೋಡ, ಡಾ. ರತನ್ ಕುಡಚಿ, ಡಾ. ರಾಘವೇಂದ್ರ ಕುಲಕರ್ಣಿ, ಡಾ.ಅಶೋಕ ದೊಡವಾಡ, ವೀರೇಶ ಕಿವಡಸಣ್ಣವರ, ಡಾ. ಮಹೇಶ ಪಾಟೀಲ, ಹಿರಗಣ್ಣವರ ಹಾಗೂ ಡಾ.ಶಿವಕುಮಾರ ಹಾಗೂ ಸಾರ್ವಜನಿಕರು ಇದ್ದರು.
ಮುತ್ತುರಾಜ ಮತ್ತಿಕೊಪ್ಪ ನಿರೂಪಿಸಿದರು.