ಅಥಣಿ

ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ಸತ್ಯಕ್ಕೆ ದೂರವಾದದ್ದು

ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ಸತ್ಯಕ್ಕೆ ದೂರವಾದದ್ದು

ಅಕ್ರಮದ ದಾಖಲೆಗಳನ್ನು ಕೊಡಿ, ಇಲ್ಲಾ ಪ್ರಕರಣ ಎದುರಿಸಿ ಲ್ಯಾಂಡ್ ಡೆವಲಪರ್ ಆರ್‌.ಎಮ್‌.ಡಾಂಗೆ ಎಚ್ಚರಿಕೆ 

ವೆಂಕಟೇಶ ದೇಶಪಾಂಡೆ 

ಅಥಣಿ 10: ಆರ್‌.ಎಮ್‌.ಡಾಂಗೆ ಲ್ಯಾಂಡ್ ಡೆವಲಪರ್ ಮತ್ತು ಬಿಲ್ಡರ‌್ಸ ವಿರುದ್ಧ ಸತ್ಯಕ್ಕೆ ದೂರವಾದ ಸುದ್ದಿಯನ್ನು ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದು, ಇದರಿಂದ ನನಗೆ ವ್ಯಯಕ್ತಿಕವಾಗಿ ಮಾನ ಹಾನಿಯಾಗಿದೆ ಹೀಗಾಗಿ ಪತ್ರಿಕೆ ವಿರುದ್ಧ ನ್ಯಾಯಾಲಯದಲ್ಲಿ ಮಾನ ಹಾನಿ ಮೊಕದ್ದಮೆ ಹಾಗೂ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ಲ್ಯಾಂಡ್ ಡೆವಲಪರ್ ಆರ್‌.ಎಮ್‌.ಡಾಂಗೆ ಹೇಳಿದರು.  

ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು ಕಳೆದ 20 ವರ್ಷಗಳಿಂದ ಅಥಣಿ ಹಾಗೂ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಲ್ಯಾಂಡ್ ಡೆವಲಪರ್ ಆಗಿ ಕಾರ್ಯನಿರ್ವಹಿಸುತ್ತಿರುವ ನಾನು ಇವತ್ತಿನವರೆಗೂ ತನ್ನ ಗ್ರಾಹಕರೊಂದಿಗೆ ಅಥವಾ ಭೂ ಮಾಲಿಕರೊಂದಿಗೆ ಅವ್ಯವಹಾರ ನಡೆಸಿರುವ ದಾಖಲೆ ಇಲ್ಲ. ಇಷ್ಟಾದರೂ ಕೂಡ ನನ್ನ ಬೆಳವಣಿಗೆ ಸಹಿಸದ ಕೆಲವರ ದುರುದ್ದೇಶದಿಂದ ದಿನಪತ್ರಿಕೆಯೊಂದರಲ್ಲಿ ಸತ್ಯಕ್ಕೆ ದೂರವಾದ ಸುದ್ದಿಯೊಂದು ಪ್ರಕಟವಾಗಿದೆ. ಸುದ್ದಿಯಲ್ಲಿ ನಾನು ಸರಕಾರಿ ಭೂಮಿಯನ್ನು ಅಕ್ರಮವಾಗಿ ವಶಪಡೆಸಿಕೊಂಡಿರುವೆ ಎಂದು ಪ್ರಕಟವಾಗಿದೆ ಇಲ್ಲಿಯವರೆಗೂ ನಾನು ಸರಕಾರಿ ಜಾಗ ಆಗಲಿ ಅಥವಾ ಖಾಸಗಿ ಸ್ಥಳವನ್ನೂ ಸಹ ಮೋಸದಿಂದ ಅಕ್ರಮವಾಗಿ ವಶಪಡೆಸಿಕೊಂಡಿರುವ ದಾಖಲೆ ಇಲ್ಲ ಎಂದ ಅವರು ಅಥಣಿಯಲ್ಲಿ ಎಲ್ಲ ಜಾತಿ, ಜನಾಂಗ, ಧರ್ಮ ಎನ್ನದೆ ಎಲ್ಲರೊಂದಿಗೂ ಭಾವೈಕ್ಯತಾ ಭಾವದಿಂದ ಹೊಂದಿಕೊಂಡಿರುವ ನಾನು ಮಠ, ಮಂದಿರಗಳಿಗೂ ದಾನ ನೀಡುತ್ತಲೇ ಬಂದಿದ್ದೇನೆ. ಆದರೂ ಕೂಡ ನನ್ನ ಬೆಳವಣಿಗೆ ಸಹಿಸದೆ ಕೆಲವರು ಮಾನಹಾನಿಕರ ಸುದ್ದಿ ಪ್ರಕಟಿಸಿದ್ದಾರೆ ಎಂದು ಹೇಳಿದರು.  

     ಮಾನಹಾನಿಕರ ಸುದ್ದಿ ಪ್ರಕಟಿಸಿದ ಪತ್ರಿಕೆ ಹಾಗೂ ಸುಳ್ಳು ವರದಿಗೆ ಸಹಕರಿಸಿದ ಎಲ್ಲರಿಗೂ ಪತ್ರಿಕೆಯಲ್ಲಿ ಪ್ರಕಟಿಸಿದಂತೆ ಅಕ್ರಮದ ದಾಖಲೆಗಳನ್ನು ಎರಡು ದಿನಗಳಲ್ಲಿ ಬಿಡುಗಡೆಗೊಳಿಸಬೇಕು. ಇಲ್ಲದೇ ಹೋದಲ್ಲಿ ನಾನು ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ಹಾಗೂ ನ್ಯಾಯಾಲಯದಲ್ಲಿ 10 ಕೋಟಿ ರೂ.ಗಳ ಮಾನ ನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಹೇಳಿದ ಅವರು ನಾನು ಲ್ಯಾಂಡ್ ಡೆವಲಪರ​‍್ಸ‌ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿಯೂ ನನ್ನನ್ನು ನಾನು ಕಳೆದ 10 ವರ್ಷಗಳಿಂದ ತೊಡಗಿಸಿಕೊಂಡು ಬಂದಿದ್ದೇನೆ ಆದರೆ ಈ ರೀತಿ ಸುಳ್ಳು ಸುದ್ದಿ ಪ್ರಕಟಿಸಿರುವುದು ನನ್ನ ಮನಸ್ಸಿಗೆ ನೋವಂನ್ನುಂಟು ಮಾಡಿದೆ ಎಂದರು.  

   ಇಂದಿನವರೆಗೂ ಕೆಲವು ವಿಷಯಗಳ ಬಗೆಗೆ ಪ್ರಚಾರ ಬಯಸಿಲ್ಲ ನಾನು ಅನೇಕ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ವೆಚ್ಚದ ಕೆಲ ಭಾಗವನ್ನು ನಾನೇ ಭರಿಸುತ್ತೇನೆ ಜೊತೆಗೆ ಅಥಣಿ ಪಟ್ಟಣದಲ್ಲಿ ರಾಯಲ್ ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವೆ ಆದರೂ ಕೂಡ ಇಂತಹ ಅರೋಪ ನನ್ನ ಮೇಲೆ ಬಂದಿದ್ದು, ಇದನ್ನು ನಾನು ಸಹಿಸುವುದಿಲ್ಲ ದಾಖಲೆಗಳನ್ನು ಕೊಡಬೇಕು ಇಲ್ಲದಿದ್ದರೆ ಪ್ರಕರಣ ಎದರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. 


ಸುದ್ದಿ ಓದಿ