ಇಂಡಿ

ವಿದ್ಯುತ್ ತಂತಿಗಳು ಇಳಿಬಿದಿದ್ದು ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೆ ಆಗ್ರಹಿಸಿ ಮನವಿ

ವಿದ್ಯುತ್ ತಂತಿಗಳು ಇಳಿಬಿದಿದ್ದು ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೆ ಆಗ್ರಹಿಸಿ ಮನವಿ
ಪಟ್ಟಣದ ಉಪವಿಭಾಗೀಯ ವಿದ್ಯುತ್ ಸರಬರಾಜ ಇಲಾಖೆಯ ಅಧಿಕಾರಿಗಳಿಗೆ ಜೆಡಿಎಸ್ ತಾಲೂಕಾ ಅಧ್ಯಕ್ಷ ಬಿ.ಡಿ.ಪಾಟೀಲ ಮನವಿ ಸಲ್ಲಿಸಿ

ಇಂಡಿ: ತಾಲೂಕಿನಾದ್ಯಂತ ಸುಮಾರು ವರ್ಷಗಳಿಂದ ಹಳೆಯ ವಿದ್ಯುತ್ ತಂತಿಗಳು ಇಳಿಬಿದಿದ್ದು ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಜೆಡಿಎಸ್ ತಾಲೂಕಾ ಅಧ್ಯಕ್ಷ ಬಿ.ಡಿ. ಪಾಟೀಲ ಇಂಡಿ ಉಪವಿಭಾಗಿ ಅಧಿಕಾರಿ ಸಂಗಮೇಶ ಮೇಡೆದಾರ ಅವರಿಗೆ ಮನವಿ ಸಲ್ಲಿಸಿದರು. 

ಅವರು ಶನಿವಾರ ಪಟ್ಟಣದ ಉಪವಿಭಾಗಿ ವಿದ್ಯುತ್ ಸರಬರಾಜ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು. ತಾಲೂಕಿನ ಹಲವಾರು ಗ್ರಾಮಗಳಲ್ಲಿ ಹಳೆಯ ವಿದ್ಯುತ್ ತಂತಿಗಳು ಜೋತುಬಿದ್ದು ಸಾರ್ವಜನಿಕರಿಗೆ ಹಾಗೂ ರೈತರ ಕಬ್ಬಿನ ಗಾಡಿಗಳಿಗೆ ತಂತಿಗಳು ಸಿಕ್ಕು ಅನಾಹುತಗಳಾಗುತ್ತಲಿವೆ. ಆಗುವ ಅನಾಹುತ ತಪ್ಪಿಸಬೇಕು. ಅಧಿಕಾರಿಗಳು ಶೀಘ್ರದಲ್ಲೇ ಸರ್ವೇ ಮಾಡಿಸಿ ಸಮಸ್ಯೆಗಳು ಆಗದಂತೆ ನೋಡಿಕೊಳಬೇಕು. ತಾಲೂಕಿನಾದ್ಯಂತ ಇಳುಬಿದ್ದ ತಂತಿಗಳು ಮೇಲಕ್ಕೆ ಎತ್ತಿ ಮುಂದಿನ ಅನಾಹುತವನ್ನು ತಪ್ಪಿಸಬೇಕೆಂದು ಆಗ್ರಹಿಸಿದರು. 

ಸಿದ್ದು ಡಂಗಾ, ಅಯೂಬ ನಾಟೀಕಾರ, ಶ್ರೀಕಾಂತ ಪಾಟೀಲ, ಶ್ರೀಶೈಲಗೌಡ ಪಾಟೀಲ. ರಾಜು ಮುಲ್ಲಾ, ಮಹಿಬೂಬ ಬೇವನೂರ, ಮಾಳಪ್ಪ ಹಿರೇಕುರಬರ, ನಿಯಾಝ್ ಅಗರಖೇಡ, ಇರ​‍್ಾನ ಅಗರಖೇಡ, ಪ್ರಭಗೌಡ ಪಾಟೀಲ, ನಿಂಗಪ್ಪ ಕಂಠಿಕರ, ಹಣಮಂತ ಕಂಠಿಕರ ಅನೇಕರು ಉಪಸ್ಥಿತರಿದ್ದರು ಇದ್ದರು. 

ಸುದ್ದಿ ಓದಿ