ಬೈಲಹೊಂಗಲ

ಸೊಸಾಯಿಟಿ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧವಾಗಿ ಆಯ್ಕೆ

ಸೊಸಾಯಿಟಿ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧವಾಗಿ ಆಯ್ಕೆ

ಬೈಲಹೊಂಗಲ 26: ಪಟ್ಟಣದ ಕೆ ಎನ್ ಪಿ ಎಸ್ ದಿ. ಹಿಂದೂಸ್ಥಾನ ಮೈನಾರಿಟಿ ಮಲ್ಟಿಪರ​‍್ಸ ಕೊ. ಅಪ್ ಸೊಸೈಟಿಗೆ ಅಧ್ಯಕ್ಷರಾಗಿ ಮಹಮ್ಮದಸಾಹೇಬ ನದಾಫ, ಉಪಾಧ್ಯಕ್ಷರಾಗಿ ಅಬ್ದುಲಕಲಾಂ ಆಜಾದ ನದಾಫ ಅವಿರೋಧವಾಗಿ ಆಯ್ಕೆಯಾದರು.       

ಸೊಸೈಟಿಯ ಚುನಾವಣೆ ಜುಲೈ 12 ರಂದು ಜರುಗಿತ್ತು. ಮಂಗಳವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜರುಗಿತು.   ನಿರ್ದೇಶಕರಾಗಿ ಇರ್ಷಾದಅಹ್ಮದ ಪಾಟೀಲ, ಶೌಕತಅಲಿ ಬುಡ್ರಕಟ್ಟಿ, ಪಕ್ರುಸಾಬ ನದಾಫ,ಶಫಿಅಹಮದ ಮುಲ್ಲಾ, ಶಮಶೂದ್ದಿನ್ ಮದಲಮಟ್ಟಿ, ಇಮಾಮಸಾಬ ನದಾಫ, ಮೆಹಬೂಬಸುಭಾನಿ ನದಾಫ, ಈರ​‍್ಪ ಹುಣಶೀಕಟ್ಟಿ, ಮಕ್ತುಮಸಾಬ ನದಾಫ, ಇಜಾಜ ಅಹ್ಮದ ನದಾಫ, ರುಮಾನ ನದಾಫ, ಮಹಾಬೂಬಿ ನದಾಫ, ನಗೀನಾ ಮದಲಮಟ್ಟಿ ಆಯ್ಕೆಯಾದರು. ಆರ್‌.ಆರ್‌.ಗೋವನಕೊಪ್ಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.  ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ, ಉಪಾಧ್ಯಕ್ಷರನ್ನು ಸತ್ಕರಿಸಲಾಯಿತು. ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ ಇದ್ದರು. 


ಸುದ್ದಿ ಓದಿ