ಬೈಲಹೊಂಗಲ

ಜಾತ್ರಾ ಮಹೋತ್ಸವ, ಸಿದ್ದರಾಮೇಶ್ವರ ಮೂರ್ತಿ ಪ್ರತಿಷ್ಠಾಪನೆ

ಜಾತ್ರಾ ಮಹೋತ್ಸವ, ಸಿದ್ದರಾಮೇಶ್ವರ ಮೂರ್ತಿ ಪ್ರತಿಷ್ಠಾಪನೆ

ಲೋಕದರ್ಶನ ವರದಿ 


ಬೈಲಹೊಂಗಲ 30: ತಾಲೂಕಿನ ಬೆಳವಡಿ ಗ್ರಾಮದಲ್ಲಿ ದಿ.31 ರಿಂದ  ಎಪ್ರಿಲ 2 ವರೆಗೆ  ಸಿದ್ದರಾಮೇಶ್ವರ ಯುವಕ ಸಂಘ, ಸ್ವಾತಂತ್ರ ಸೇನಾನಿ ವಡ್ಡರ ಯಲ್ಲಣ್ಣ ಸಮಿತಿಯ ಆಶ್ರಯದಲ್ಲಿ ಸಿದ್ದರಾಮೇಶ್ವರ ಮೂರ್ತಿ ಪ್ರತಿಷ್ಠಾಪನಾ ಹಾಗೂ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಜರುಗಲಿದೆ ಎಂದು ಬೋವಿ ಸಮಾಜದ ಮುಖಂಡ ಹಣಮಂತ ಸಾಲಹಳ್ಳಿ ಹೇಳಿದರು. 

    ಅವರು ಬುಧವಾರ  ಪಟ್ಟಣದ ಪತ್ರಿಕಾ ಭವನದಲ್ಲಿ ಜಾತ್ರಾ ಮಹೋತ್ಸವದ ಪೊಸ್ಟರ ಬಿಡುಗಡೆಗೊಳಿಸಿ ಮಾತನಾಡಿ,  ಮಾರ್ಚ 31 ರಂದು  ಮುಂಜಾನೆ 9 ಘಂಟೆಗೆ ಸಿದ್ದರಾಮೇಶ್ವರರ ಮೂರ್ತಿಯನ್ನು ಸಹಸ್ರ ಕುಂಭಮೇಳ, ಸಕಲ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮೂಲಕ ಕರೆತರಲಾಗವುದು. 

      ದಿ.1 ರಂದು ಸಂಜೆ 7 ಘಂಟೆಗೆ ಸಂಗೀತ ಸೇವೆ, ಸಂಓಷಕುಮಾರ ಕಂಠಿರವ ಅವರಿಂದ 7.30 ರಿಂದ ಸಿದ್ದರಾಮೇಶ್ವರ ಕುರಿತು ಪ್ರವಚನ, ದಾನಿಗಳ ಸನ್ಮಾನ, ಮಹಾಪ್ರಸಾದ ಜರುಗಲಿದೆ. 

    ದಿ.2 ರಂದು ಪ್ರಾಥಕಾಲ 5 ಗಂಟೆಗೆ ಸಿದ್ದರಾಮೇಶ್ವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಲ ಕಾರ್ಯ ಶ್ರೀಗಳ ಸಮ್ಮೂಖದಲ್ಲಿ ಅದ್ದೂರಿಯಾಗಿ ಜರುಗಲಿದೆ. ಮಂಜಾನೆ 10 ಗಂಟೆಗೆ ಧರ್ಮಸಭೆ ಜರುಗಲಿದೆ.  ಸಾನಿಧ್ಯವನ್ನು  ಚಿತ್ರದುರ್ಗ ಬೋವಿವಡ್ಡರ ಗುರುಪೀಠದ ಸಿದ್ದರಾಮೇಶ್ವರ ಸ್ವಾಮಿಜಿ, ಹೂಲಿಯ ಹಿರೇಮಠ ಸಂಸ್ಥಾನದ ರಾಜ ಗುರು ಶಿವಮಹಾಂತ ಶಿವಾಚಾರ್ಯ ಸ್ವಾಮಿಜಿ, ಶಿರಕೋಳ ಗುರುಸಿದ್ದೇಶ್ವರ ಸ್ವಾಮಿಜಿ, ದೊಡವಾಡ ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ,  ತಪಸಿ ಸುರೇಶ್ವರ ಮಹಾರಾಜರು ಸಾನಿಧ್ಯ ವಹಿಸುವರು. 

  ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಶಂಕರ ಮಾಡಲಗಿ, ಈರಣ್ಣ ಕರೀಕಟ್ಟಿ,  ಅಮೃತಾ ಕಕ್ಕಯ್ಯನವರ,  ರೇಣುಕಾ ಕುರಿ,  ಡಾ.ಆರ್‌.ಬಿ.ಪಾಟೀಲ, ಯ.ರು.ಪಾಟೀಲ,  ಸಿ.ಎಸ್‌.ಚಿಕ್ಕನಗೌಡ್ರ,  ಬಸವರಾಹ ಬಂಡಿವಡ್ಡರ, ರಾಜೇಂದ್ರ ಪವಾರ, ಕಾಂತಯ್ಯ ಕಾರಿಮನಿ, ಮಹಾಂತೇಶ ಉಪ್ಪಿನ ಹಾಗೂ ಬೋವಿ ವಡ್ಡರ ಸಮಾಜದ ಗುರುಹಿರಿಯರು ಆಗಮಿಸುವರು ಕಾರಣ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾತ್ರಾ ಉತ್ಸವವನ್ನು ಯಶಸ್ವಿಗೊಳಿಸಬೇಕಂದು ಮನವಿ ಮಾಡಿದರು. 

  ಗೋಷ್ಠಿಯಲ್ಲಿ ಬಾಲು ದೊಡಮನಿ, ನಾಗೇಶ ಬೆಳ್ಳಿಕಟ್ಟಿ, ಯಾಸೀನ ಕಿತ್ತೂರ, ಬಸವರಾಜ ನರೇಗಲ್ಲ, ಮಲ್ಲಿಕಾರ್ಜುನ ವಡ್ಡರ, ವೀರೇಶ ಯಕ್ಕೇರಿ ಇದ್ದರು. 


ಸುದ್ದಿ ಓದಿ