ಸುಕ್ಷೇತ್ರ ಯರನಾಳ ಕಾಳಿಕಾದೇವಿ ಯಾತ್ರಾ ಮಹೋತ್ಸವ
ಯರನಾಳ 17 : ಹುಕ್ಕೇರಿ ತಾಲೂಕಿನ ಸುಕ್ಷೇತ್ರ ಯರನಾಳ ಗ್ರಾಮದ ಆಂದ್ರ, ಗೋವಾ , ಮಹಾರಾಷ್ಥ ಹಾಗೂ ಕರ್ನಾಟಕ ರಾಜ್ಯಗಳ ಶೃದ್ಧಾ ತಾಣವೆಂದು ಗುರುತಿಸಲ್ಪಡುವ ಮಹಾಮಾತೆ ಕಾಳಿಕಾದೇವಿಯ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ರವಿವಾರ ದಿನಾಂಕ 22 ರಿಂದ ಬುಧವಾರ 24 ನವ್ಹಂಬರ ವರೆಗೆ ಅದ್ಧೂರಿಯಾಗಿ ಜರುಗಲಿದೆ. ಜಾತ್ರಾ ನಿಮಿತ್ವವಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ
ರವಿವಾರ ದಿನಾಂಕ 22 ರಂದು ಪ್ರಕೃತಿ ವಿಕೋಪ ಹಾಗೂ ವಿಶ್ವ ಶಾಂತಿಗಾಗಿ ಪ್ರಾತ:ಕಾಲ 6 ಗಂಟೆಗೆ ಗಣಹೋಮ, ಬುವರಾಹ ಹಾಗೂ ವನಸ್ಪತಿ ಹೋಮ ಹವನ ನಡಯಲಿವೆ.. ರಾತ್ರಿ 8 ಗಂಟೆಗೆ ತುಳಸಿ ವಿವಾಹ 9 ಗಂಟೆಗೆ ಭಜನಾ ಹಾಗೂ ಮನರಂಜನೆ ಕಾರ್ಯಕ್ರಮಗಳು ಜರುಗಲಿವೆ. ಸೋಮವಾರ ದಿನಾಂಕ 23 ರಂದು ಮುಂಜಾನೆ 6 ಗಂಟೆಗೆ ಗಾಯಿತ್ರಿ ವಿಶ್ಪಮಂಗಲ ಚಂಡಿಕಾ ಮತ್ತು ಕಾಮೆಷ್ಟಿ ಯಾಗ, ಪೂಜೆ, ಹೋಮ ಹವನ ನಡೆಯಲಿವೆ.5 ಗಂಟೆಗೆ ಸಮೂಹ ನೃತ್ಯ ಸ್ಪರ್ಧೆ ವಿಜೇತರಿಗೆ 1) ರೂ..21001 2) ರೂ. 15001 3) ರೂ. 10001 ಬಹುಮಾನ ನೀಡಲಾಗುವದು. .ರಾತ್ರಿ 9 ಗಂಟೆಗೆ ಭಜನಾ ಹಾಗೂ ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ.
ಮಂಗಳವಾರ ದಿನಾಂಕ 24 ರಂದು ಮುಂಜಾನೆ 5 ರಿಂದ 9 ಗಂಟೆ ವರೆಗೆ ಶ್ರೀ ಮಹಾಮಾತಾ ಕಾಳಿಕಾ ದೇವಿ ಹಾಗೂ ಸುತ್ತಮುತ್ತಲಿನ ಎಲ್ಲ ದೇವರಿಗೆ ಪಂಚಾಮೃತ ಅಭಿಷೇಕ ನಂತರ 9 ರಿಂದ 12 ಗಂಟೆ ವರೆಗೆ ದೇವಿಗೆ ಉಡಿ ತುಂಬುವ ಕಾರ್ಯಕ್ರಮ.
12 ಗಂಟೆಗೆ ಪೂರ್ಣಾಹುತಿ. 1 ಗಂಟೆಗೆ ಹರಗುರು ಚರಮೂರ್ತಿಗಳಿಂದ ಶಿವಾನುಭವ ಪ್ರವಚನ. 2 ಗಂಟೆಗೆ ರಥೋತ್ಸವ, ಕುಂಭೋತ್ಸವ ಹಾಗೂ ಪಾಲಕಿ ಉತ್ಸವದೊಂದಿಗೆ ಜಾತ್ರೆ ಮಂಗಲಗೊಳ್ಳುವದಾಗಿ ಉತ್ತರಾಧಿಕಾರಿ ಮುಕುಂದ ಮಠದ ಅವರು ತಿಳಿಸಿದ್ಧಾರೆ.