ಬೆಳಗಾವಿ

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸದಸ್ಯರಾಗಿ ಆಯ್ಕೆಯಾದ ನಿಂಗಪ್ಪ ಅರಕೇರಿ ಸನ್ಮಾನ

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸದಸ್ಯರಾಗಿ ಆಯ್ಕೆಯಾದ ನಿಂಗಪ್ಪ ಅರಕೇರಿ ಸನ್ಮಾನ
Felicitation of Ningappa Arakeri, who was selected as a member of the Ambedkar Development Corporat

           ನೇಸರಗಿ 17: ಡಾ.ಬಿ.ಆರ್‌.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸದಸ್ಯರಾಗಿ ಆಯ್ಕೆಯಾದ ನಿಂಗಪ್ಪ ಅರಕೇರಿಯನ್ನು ಗ್ರಾಮದ ವೇದಾಂತ್ ಆಸ್ಪತ್ರೆಯಲ್ಲಿ ವೈದ್ಯ ಡಾ.ಪ್ರಕಾಶ ಹಲ್ಯಾಳ ಸತ್ಕರಿಸಿ ಗೌರವಿಸಿದರು. ಡಾ.ಪ್ರಕಾಶ ಹಲ್ಯಾಳ ಮಾತನಾಡಿ, ರಾಜಕೀಯವಾಗಿ ಒಳ್ಳೆಯ ಹೆಸರು ಮಾಡಿರುವ ನಿಂಗಪ್ಪ ಅರಕೇರಿಯವರು ಜನಸೇವೆಯಿಂದ ಮುಂದೆ ಬಂದಿದ್ದಾರೆ.

                  ಅವರ ಸೇವೆಯನ್ನು ಗುರುತಿಸಿ ಸರಕಾರ ನಿಗಮದ ಸದಸ್ಯರನ್ನಾಗಿ ಮಾಡಿರುವದು ಶ್ಲಾಘನೀಯ ವೆಂದರು. ಉದ್ಯಮಿ ನಾಗರಾಜ ತುಬಾಕಿ ಮಾತನಾಡಿ, ನಿಂಗಪ್ಪ ಅರಕೇರಿಯವರು ನೇಸರಗಿ ಭಾಗದಲ್ಲಿ ಜನೋಪಕಾರಿ ಕೆಲಸಗಳಿಂದ ಹೆಸರು ವಾಸಿಯಾಗಿದ್ದಾರೆಂದರು.

                ಸಾಹಿತಿ, ಪತ್ರಕರ್ತ ಸಿ.ವಾಯ್‌.ಮೆಣಸಿನಕಾಯಿ ಮಾತನಾಡಿ, ಜನ ಸೇವಕರಾಗಿ ಗುರುತಿಸಿಕೊಂಡಿರುವ ನಿಂಗಪ್ಪ ಅರಕೇರಿಯವರು ಈ ಭಾಗದ ಉತ್ತಮ  ಕೆಲಸ ಕಾರ್ಯಗಳಿಗೆ ಕೈಜೋಡಿಸುತ್ತಾ, ಜನರ ನೆರವಿಗೆ ಬಂದಿದ್ದಾರೆ. 

              ಅವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಿ ಸರಕಾರ ತಮ್ಮ ಹೊಣೆಗಾರಿಗೆ ಮೆರೆದಿದೆ ಎಂದರು. ಮಾಜಿ ತಾ.ಪಂ ಸದಸ್ಯ ಮುದಕಪ್ಪ ಮರಡಿ, ದುರೀಣ ಚನಗೌಡ ಪಾಟೀಲ, ಬಸನಗೌಡ ಪಾಟೀಲ, ವೀರಭದ್ರ ಸೋಮಣ್ಣವರ, ಮಾಜಿ ಗ್ರಾ.ಪಂ ಸದಸ್ಯ ಸಿದ್ದಪ್ಪ ಮಿಂಡೊಳ್ಳಿ, ಕಲ್ಲಪ್ಪ ತಿರಕನ್ನವರ, ಯಲ್ಲಪ್ಪ ಕೋಮಾರ, ಅದೃಷ್ಯ ಈರಯ್ಯನವರ, ಯಮನಪ್ಪ ಕಸಳ್ಳಿ, ಪ್ರವೀಣ ಕೋಮಾರ, ಸಿದ್ದಪ್ಪ ಕಿಲಾರಿ, ಸತೀಶ ಪಾಟೀಲ, ಸಿದ್ದಪ್ಪ ಬನೆನ್ನವರ, ಹಣಮಂತ ಪೂಜೇರಿ, ಚೈತ್ರಾ ಮಡ್ಡೆಪ್ಪಗೋಳ, ಮೊದಲಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ