ಎರಡನೇ ಬಾರಿಗೆ ಮಾರಿಹಾಳ ಪಿಕೆಪಿಎಸ್ ಗೆ ಉತ್ತಮ ಸಹಕಾರಿ ಸಂಘ ಪ್ರಶಸ್ತಿ
ಬೆಳಗಾವಿ 17: ಮಾರಿಹಾಳ ಪಿಕೆಪಿಎಸ್ಗೆ ರಾಜ್ಯ ಮಟ್ಟದ ಎರಡನೆ ಬಾರಿಗೆ ಉತ್ತಮ ಸಹಕಾರ ಸಂಘ ಪ್ರಶಸ್ತಿ ದೊರೆತಿರುವದು ಸಹಕಾರ ಕ್ಷೇತ್ರದಲ್ಲಿ ಹೆಮ್ಮೆಯ ಸಾಧನೆ ಎಂದು ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ ಹೇಳಿದರು.
ಸೋಮವಾರ ಅಥಣಿಯಲ್ಲಿ ನಡೆದ 73ನೇ ಸಹಕಾರ 2026್ಘ ಸಂದರ್ಭದಲ್ಲಿ ಮಾರಿಹಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರಾಜ್ಯ ಸಹಕಾರ ಸಚಿವ ಲಕ್ಷ್ಮಣ ಸವದಿ ಪ್ರತಿಷ್ಠಿತ ಉತ್ತಮ ಸಹಕಾರ ಸಂಘ ಪ್ರಶಸ್ತಿ ನೀಡಿ ಗೌರವಿಸಿದ ಸಂದರ್ಭದಲ್ಲಿ ಮಾತನಾಡಿ, ಪ್ರಶಸ್ತಿ ದೊರೆತಿರುವದು ಅತ್ಯಂತ ಸಂತೋಷದ ಹಾಗೂ ಹೆಮ್ಮೆಯ ಸಂಗತಿಯಾಗಿದೆ.
ಈ ಮಹತ್ವದ ಪ್ರಶಸ್ತಿಯನ್ನು ನೀಡಿ ಸಂಘದ ಕಾರ್ಯಚಟುವಟಿಕೆಗಳು, ಸಾಧನೆ ಹಾಗೂ ಸಹಕಾರ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆಯನ್ನು ಗುರುತಿಸಿ ಗೌರವಿಸಿದ ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಯ ಎಲ್ಲ ಸದಸ್ಯರಿಗೆ ಸಂಘದ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಪ್ರಶಸ್ತಿಯು ಕೇವಲ ಒಂದು ಸಂಘಕ್ಕೆ ಸಂದ ಗೌರವವಲ್ಲ, ಸಂಘದ ಮೇಲೆ ನಂಬಿಕೆಯಿಟ್ಟು ವ್ಯವಹರಿಸುತ್ತಿರುವ ರೈತರು, ಸದಸ್ಯರು, ಠೇವಣಿದಾರರು ಹಾಗೂ ಹಿತೈಷಿಗಳ ವಿಶ್ವಾಸಕ್ಕೆ ಸಂದ ಗೌರವವಾಗಿದೆ.ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷರು ಹಾಗೂ ಎಲ್ಲ ನಿರ್ದೇಶಕರು ಸಂಘದ ಅಭಿವೃದ್ಧಿಗಾಗಿ ತೋರಿರುವ ಬದ್ಧತೆ, ದೂರದೃಷ್ಟಿ, ಪಾರದರ್ಶಕ ಆಡಳಿತ ಮತ್ತು ಪರಿಶ್ರಮ ನಿಜಕ್ಕೂ ಅಭಿನಂದನೀಯ.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಸಂಘದ ಪ್ರತಿಯೊಬ್ಬ ಸದಸ್ಯರ ಸಹಕಾರ ಮತ್ತು ಸಮರಾ್ಣ ಮನೋಭಾವವೂ ಈ ಸಾಧನೆಯ ಹಿಂದೆ ಪ್ರಮುಖ ಪಾತ್ರ ವಹಿಸಿದೆ.ನಮ್ಮ ಆಡಳಿತಮಂಡಳಿಯಲ್ಲಿಯೆ ಎರಡನೆ ಅವಕಾಶ ದೊರೆತಿರುವದು ಶ್ಲಾಘನೀಯ. ಕಳೆದ ಸಾಲಿನಲ್ಲಿ 119ಕೋಟಿ ರೂಪಾಯಿ ವ್ಯವಹಾರ ಮಾಡಿ 72 ಲಕ್ಷ ರೂಪಾಯಿ ಲಾಭಗಳಿಸಿದೆ.
ಸಹಕಾರ ಸಂಘಗಳು ಕೇವಲ ಹಣಕಾಸಿನ ವ್ಯವಹಾರಗಳಿಗೆ ಸೀಮಿತವಾಗದೆ ರೈತರ ಆರ್ಥಿಕ ಸಬಲೀಕರಣ, ಗ್ರಾಮೀಣ ಅಭಿವೃದ್ಧಿ ಹಾಗೂ ಸ್ವಾವಲಂಬಿ ಸಮಾಜ ನಿರ್ಮಾಣದ ಪ್ರಮುಖ ಕೇಂದ್ರಗಳಾಗಬೇಕು. ಈ ನಿಟ್ಟಿನಲ್ಲಿ ಮಾರಿಹಾಳ ಪಿಕೆಪಿಎಸ್ ಪಡೆದಿರುವ ಪ್ರಶಸ್ತಿಯು ಇತರ ಸಹಕಾರ ಸಂಘಗಳಿಗೂ ಪ್ರೇರಣೆಯಾಗಲಿ.
ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಪಾರದರ್ಶಕ ಆಡಳಿತ, ಜನಪರ ಕಾರ್ಯಚಟುವಟಿಕೆಗಳು ಹಾಗೂ ರೈತಪರ ಸೇವೆಗಳ ಮೂಲಕ ಮಾರಿಹಾಳ ಪಿಕೆಪಿಎಸ್ ಇನ್ನಷ್ಟು ಎತ್ತರಕ್ಕೆ ಬೆಳೆಸಲು ಸಂಘಟಿತ ಕಾರ್ಯಚಟುವಟಿಕೆ ಹಮ್ಮಿಕೊಳ್ಳುತ್ತೆವೆ ಎಂದರು.ಈ ಪ್ರಶಸ್ತಿ ಸಂಘದ ಮುಂದಿನ ಸಾಧನೆಗಳಿಗೆ ಹೊಸ ಸ್ಫೂರ್ತಿ ಮತ್ತು ಜವಾಬ್ದಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಹದೇವ್ ಧನಾಯಿ, ನಿರ್ದೇಶಕರಾದ ಶಂಕರಗೌಡ ನಿರ್ವಾನಿ, ಸಂಜಯ ಚಾಟೆ, ಕಲಗೌಡ ಅಗಸಗಿ , ವಿನೋದ್ ಚೌಹಾನ್, ರಾಮಪ್ಪ ಹನ್ನೂರ್, ಗುರುನಾಥ ಅಕ್ಕತಂಗೇರಹಾಳ, ಸವಿತಾ ಧರ್ಮೋಜಿ, ಗಿರಿಜಾ ಪಾಟೀಲ್, ಸುಗಂಧ ಪೂಜಾರಿ, ಸಿಇಓ ರುದ್ರ್ಪ ಚೆನ್ನನವರ ಇದ್ದರು