ಸಮೂಹ ಬೋಧನಾ ಶಿಬಿರದ ಮುಕ್ತಾಯ
ಲೋಕದರ್ಶನ ವರದಿ
ಬೈಲಹೊಂಗಲ 27: ಪ್ರಶಿಕ್ಷಣಾರ್ಥಿಗಳು ಸಮೂಹ ಬೋಧನಾ ಶಿಬಿರದಲ್ಲಿನ ಅನುಭವಗಳನ್ನು ನಿಮ್ಮ ವೃತ್ತಿ ಬದುಕಿನಲ್ಲಿ ಅಳವಡಿಸಿಕೊಂಡು ಯಶಸ್ವಿ ಶಿಕ್ಷಕರಾಗಿ ಎಂದು ನಯಾನಗರ ಪ್ರೌಡಶಾಲಾ ಮುಖ್ಯೋಪಾಧ್ಯಾಯ ಎನ್.ಆರ್.ಮಾಳನ್ನವರ ಹೇಳಿದರು.
ಅವರು ತಾಲೂಕಿನ ಸರಕಾರಿ ಪ್ರೌಢ ಶಾಲೆ ನಯಾನಗರದಲ್ಲಿ ಬೈಲಹೊಂಗಲದ ಕಿತ್ತೂರು ರಾಣಿ ಚೆನ್ನಮ್ಮ ಶಿಕ್ಷಣ ಸಂಸ್ಥೆಯ, ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳ ಎರಡು ವಾರಗಳ ಸಮೂಹ ಬೋಧನಾ ಶಿಬಿರದ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಕ ವೆಂಕಟೇಶ್ ಬಾಗಲ ಅವರು ನೀತಿ ಕಥೆಗಳ ಮೂಲಕ ಬದುಕನ್ನು ಹೇಗೆ ಯಶಸ್ಸಿನತ್ತ ಮುನ್ನಡೆಸಿಕೊಂಡು ಹೋಗಬೇಕೆಂದು ತಿಳಿಸಿಕೊಟ್ಟರು.
ಶಿಬಿರದ ಮಾರ್ಗದರ್ಶಿಯಾದ ಎನ್ ಡಿ ಚಿನ್ನಪ್ಪಗೌಡರ ಮಾತನಾಡಿ, ಸ್ಥಳೀಯ ಚರಿತ್ರೆಯನ್ನು ತಿಳಿಸಿಕೊಟ್ಟು ವಿದ್ಯಾರ್ಥಿಗಳು ಮತ್ತು ಪ್ರಶಿಕ್ಷಣಾರ್ಥಿಗಳು ಭಾವಿ ಜೀವನದಲ್ಲಿ ಮಾದರಿ ವ್ಯಕ್ತಿಗಳಾಗಿ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ವ್ಹಿ. ವ್ಹಿ. ಕಡಕೋಳ, ಪ್ರೌಢಶಾಲೆ ಶಿಕ್ಷಕರಾದ ಹಾದಿಮನಿ, ಕಡ್ಲಿಬುಡ್ಡಿ, ಪತ್ತಾರ, ಹಿರೇಮಠ, ಅಂಗಡಿ ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿ ಸವಿತಾ ನಾನನ್ನವರ ಸಮೂಹ ಬೋಧನಾ ಶಿಬಿರದ ಅನುಭಗಳನ್ನು ಹಂಚಿಕೊಂಡರು.
ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಯೀನ ನದಾಫ ಪ್ರಾರ್ಥನಾ ಗೀತೆ ಹಾಡಿದರು, ಜ್ಯೋತಿ ಅಂದಾನಶೆಟ್ಟಿ ಸ್ವಾಗತಿಸಿದರು, ಸಂತೋಷ ಸಾಳುಂಕೆ ವರದಿ ವಾಚನ ಮಾಡಿದರು, ಶೃತಿ ಜೋಗೋಜಿ ವಂದಿಸಿದರು, ಶಿಬಿರದ ಮುಖ್ಯ ಪ್ರತಿನಿಧಿ ಅಕ್ಷತಾ ಗುಗ್ಗರಿ ಕಾರ್ಯಕ್ರಮ ನಿರೂಪಿಸಿದರು.