ದೇವಾಲಯಗಳು ಮಾನಸಿಕ ನೆಮ್ಮದಿಯ ತಾಣಗಳಾಗಬೇಕು: ಸತೀಶ್ ಶೇಟ್
ರಾಣಿಬೆನ್ನೂರು: ಫೆ 26: ದೇವರು, ಧರ್ಮ ಜ್ಞಾನ, ಧಾರ್ಮಿಕ ಕ್ಷೇತ್ರಗಳು, ಪ್ರತಿಯೊಬ್ಬರಿಗೂ ಮಾನಸಿಕ ಶಾಂತಿ, ನೆಮ್ಮದಿ ನೀಡುವ ತಾಣಗಳಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋ ಜನಾಧಿಕಾರಿ ಸತೀಶ್ ಶೇಟ್ ಹೇಳಿದರು. ಅವರು ಇಲ್ಲಿನ ಕೋಟೆ ಭಾಗದ ಮಲ್ಲಿಕಾರ್ಜು ನ ದೇವಸ್ಥಾನ ಸಮುದಾಯ ಭವನ ನಿರ್ಮಾಣ ಜೀರ್ಣೋದ್ಧಾರ ಕಾಮಗಾರಿಗೆ, ಎಸ್ ಕೆ ಡಿ ಆರ್ ಡಿ ಪಿ ಯೋಜನೆಯಿಂದ ಮ0ಜೂರಾದ 3 ಲಕ್ಷ ರೂಗಳ ಅನುದಾನ ಪತ್ರವನ್ನು ವಿತರಿಸಿ ಮಾತನಾಡಿದರು.
ಧರ್ಮದ ಆಚರಣೆ ಭಾರತೀಯರ ಮೂಲ ಗುಣ ಧರ್ಮವಾಗಿದೆ, ಇದರಿಂದಾಗಿ ಪ್ರತಿಯೊಬ್ಬ ಭಾರತೀಯರು, ಸದಾಕಾಲ ಶಾಂತಿ ನೆಮ್ಮದಿ ಮತ್ತು ಆತ್ಮ ತೃಪ್ತಿಯಿಂದ ನೆಮ್ಮದಿಯ ಬದುಕನ್ನು ಸಾಗಿಸುವಂತಾಗಿದೆ ಎಂದರು. ದೇವಸ್ಥಾನ ಸಮಿತಿಯ ಅಧ್ಯಕ್ಷ ವಿ.ಎಸ್. ಕೆಂಪಣ್ಣನವರ್ ಅವರಿಗೆ ಸತೀಶ್ ಶೇಟ್ ಅವರು ಶ್ರೀ ಕ್ಷೇತ್ರದ ಚೆಕ್ಕನ್ನು ಹಸ್ತಾಂತರಿಸಿದರು. ಸಮಿತಿಯ ಉಪಾಧ್ಯಕ್ಷ ಎನ್.ಸಿ. ಮಲ್ಲೇಶಪ್ಪ, ಅಶೋಕ, ಮಾರುತಿ ನಗರ ವಲಯ ಮೇಲ್ವಿಚಾರಕಿ ಲಕ್ಷ್ಮಿ. ಪಿ, ಶೋಭಾ ಸೇರಿದಂತೆ ದೇವಸ್ಥಾನ ಸಮಿತಿಯ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು ವಲಯದ ಮೇಲ್ವಿಚಾರಕರು ಸೇವಾ ಪ್ರತಿನಿಧಿಯವರು ಮತ್ತಿತರರು ಉಪಸ್ಥಿತರಿದ್ದರ