ಬೈಲಹೊಂಗಲ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಿಗೆ ತಹಶಿಲ್ದಾರ ನಾಗರಾಳ ಭೇಟಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಿಗೆ ತಹಶಿಲ್ದಾರ ನಾಗರಾಳ ಭೇಟಿ

ಲೋಕದರ್ಶನ ವರದಿ 


ಬೈಲಹೊಂಗಲ 29: ಬೈಲಹೊಂಗಲ ತಾಲೂಕಿನಲ್ಲಿ ಸೋಮವಾರ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಿಗೆ ತಹಶಿಲ್ದಾರ ಬಸವರಾಜ ನಾಗರಾಳ ಭೆೇಟಿ ನೀಡಿ ಪರೀಶೀಲಿಸಿದರು. 

ತಾಲೂಕಿನಲ್ಲಿ ಒಟ್ಟು 18 ಪರೀಕ್ಷಾ ಕೇಂದ್ರಗಳಿದ್ದು (17 ಸರಕಾರಿ + 1 ಖಾಸಗಿ ) ಒಟ್ಟು 4266 ವಿದ್ಯಾರ್ಥಿಗಳ ಪೈಕಿ 32 ವಿಧ್ಯಾರ್ಥಿಗಳು ಗೈರು ಹಾಜರಿದ್ದರು. ಇದರಲ್ಲಿ 2159 ಗಂಡು ಮಕ್ಕಳು ಹಾಗೂ 2107 ಹೆಣ್ಣು ಮಕ್ಕಳು ಇದ್ದರು. 

ತಾಲೂಕಿನಲ್ಲಿ 18 ಕೇಂದ್ರಗಳನ್ನು ತೆರೆಯಲಾಗಿದ್ದು,  18 ಕೇಂದ್ರಗಳಿಗೂ ಸುಪರವೈಸರ್, ಪರೀಕ್ಷಾ ಅಧಿಕ್ಷಕರು, ಮಾರ್ಗಾಧಿಕಾರಿ, ಮೊಬೈಲ ಸ್ಕಾಡ ನ್ನು ನೇಮಕ ಮಾಡಲಾಗಿದೆ ಎಂದು  ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್ ಪ್ಯಾಟಿ ತಿಳಿಸಿದರು. 


ಸುದ್ದಿ ಓದಿ