ಚಿತ್ರ-ಚಿತ್ತಾರ ಕಲಾ ಹಬ್ಬಕ್ಕೆ ಶಿಕ್ಷಕ ಸಂತೋಷ ಬಂಡೆ ಚಾಲನೆ
ಇಂಡಿ: ಒಂದು ವಸ್ತುವನ್ನು ಸಾಧ್ಯವಾದಷ್ಟು ಬಾರಿ ಪುನರ್ ಬಳಕೆ ಮಾಡಿದಾಗ ಪರಿಸರ ಹಾನಿಯನ್ನು ಕಡಿಮೆ ಮಾಡಿದಂತಾಗುತ್ತದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ಶನಿವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್. ಶಾಲೆಯಲ್ಲಿ 2022-23ನೇ ಸಾಲಿನ ಮಳೆಬಿಲ್ಲು ಕಾರ‌್ಯಕ್ರಮದಲ್ಲಿ ಚಿತ್ರ-ಚಿತ್ತಾರ ಕಲಾ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾವು ವಸ್ತುಗಳನ್ನು ಒಂದು ಬಾರಿ ಬಳಸಿ, ಅದನ್ನು ಎಸೆಯುವುರಿಂದ ಅದು ಕಸವಾಗಿ ಮಾರ್ಪಟಟು ಪರಿಸರ ದೃಷ್ಟಿಯಲ್ಲಿ ಹಾನಿಯಾಗುತ್ತದೆ. ಹೀಗಾಗಿ ಕಸ ಆರಿಸು ಕಲಿಕೆಗೆ ಬಳಸುವ ಎಂಬ ತತ್ವದಡಿ ಅನುಪಯುಕ್ತ ವಸ್ತುಗಳಿಂದ ಶಾಲೆಯಲ್ಲಿ ಬಳಸುವ ಉಪಯುಕ್ತ ಕಲಿಕಾ ಮಾದರಿಗಳನ್ನು ತಯಾರಿಸುವ ಕಲೆ ಮಕ್ಕಳಲ್ಲಿ ಬೆಳೆಯುವಂತೆ ಪ್ರೋತ್ಸಾಹಿಸಬೇಕಾಗಿದೆ ಎಂದರು.
ಒಂದು ವಸ್ತು ಎರಡು ಅಥವಾ ಮೂರು ಬಾರಿ ಬಳಕೆ ಮಾಡಲು ಮುಂದಾಗಬೇಕು. ಪರಿಸರ ತಜ್ಞರ ಪ್ರಕಾರ ಬಳೆಕೆ ಮಾಡಿದ ವಸ್ತುವನ್ನು ಪುನರ್ ಬಳೆಕೆ ಮಾಡಿದಗ ಪರಿಸರ ಹಾನಿಯನ್ನ ಆಂಶಿಕವಾಗಿ ಕಡಿಮೆ ಮಾಡಬಹುದಾಗಿದೆ ಎಂದರು.
ಎಸ್.ಎಚ್. ಮೈದರಗಿ ಮಾತನಾಡಿ, ಮರುಬಳಕೆ ಜತೆಗೆ ಮನೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಕಾಂಪೋಸ್ಟ್ ಮಾಡುವ ಮೂಲಕ ಪರಿಸರ ಪ್ರಜ್ಞೆ ಮರೆಯಬಹುದಾಗಿದೆ ಎಂದು ಮಕ್ಕಳಿಗೆ ತಿಳಿ ಹೇಳಿದರು.
ಎನ್.ಬಿ. ಚೌಧರಿ, ಎಸ್.ಬಿ. ಪೂಜಾರಿ ಸೇರಿದಂತೆ ಅನೇಕ ಮಕ್ಕಳು ಕಾರ‌್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
.