ಇಂಡಿ

5ರಂದು ಇಂಡಿಯಲ್ಲಿ ಶಿಕ್ಷಕರ ದಿನೋತ್ಸವ ಆಯೋಜನೆ

5ರಂದು ಇಂಡಿಯಲ್ಲಿ ಶಿಕ್ಷಕರ ದಿನೋತ್ಸವ ಆಯೋಜನೆ

ಇಂಡಿ 02: ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇಂಡಿ ಅವರ ವತಿಯಿಂದ ಭಾರತರತ್ನ ಡಾ.ಎಸ್ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವದ ಅಂಗವಾಗಿ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಸಪ್ಟೆಂಬರ್ 5 ರಂದು ಬೆಳಿಗ್ಗೆ 10 ಕ್ಕೆ ಪಟ್ಟಣದ ಗುರುಭವನದಲ್ಲಿ ಆಯೋಜಿಸಲಾಗಿದೆ. 

ಕಾತ್ರಾಳ-ಬಾಲಗಾಂವ ಗುರುದೇವಾಶ್ರಮದ ಡಾ.ಅಮೃತಾನಂದ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು.ಇಂಡಿ ಮತಕ್ಷೇತ್ರದ ಶಾಸಕರು ಹಾಗೂ ಅಂದಾಜುಗಳ ಸಮಿತಿಯ ಅಧ್ಯಕ್ಷರಾದ ಯಶವಂತರಾಯಗೌಡ ಪಾಟೀಲ ಅವರು ಅಧ್ಯಕ್ಷತೆ ವಹಿಸಿ ಸಮಾರಂಭವನ್ನು ಉದ್ಘಾಟಿಸುವರು.ಮುಖ್ಯ ಅತಿಥಿಗಳಾಗಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಎಂ ಬಿ ಪಾಟೀಲ, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ,ನವದೆಹಲಿ ಕರ್ನಾಟಕ ವಿಶೇಷ ಪ್ರತಿನಿಧಿ-2 ಹಾಗೂ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ,ವಿಜಯಪುರ ಲೋಕಸಭಾ ಸಂಸದರಾದ ರಮೇಶ ಜಿಗಜಿಣಗಿ, ರಾಜ್ಯಸಭೆಯ ಸಂಸದರಾದ ಸುಧಾ ಮೂರ್ತಿ, ನಾಗಠಾಣ ಮತಕ್ಷೇತ್ರದ ಶಾಸಕರಾದ ವಿಠ್ಠಲ ಕಟಕದೊಂಡ, ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ, ಪ್ರಕಾಶ ರಾಠೋಡ, ಸುನಿಲಗೌಡ ಪಾಟೀಲ, ಪಿ ಎಚ್ ಪೂಜಾರ, ಸಿಂದಗಿ ಮತಕ್ಷೇತ್ರದ ಶಾಸಕರಾದ ಅಶೋಕ ಮನುಗೂಳಿ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ,ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಇಂಡಿ ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಜಹಾಂಗೀರ ಸೌದಾಗರ ಅವರು ಅಗಮಿಸುವರು. 

ವಿಶೇಷ ಆವ್ಹಾನಿತರಾಗಿ ಇಂಡಿ ಉಪವಿಭಾಗಾಧಿಕಾರಿಗಳು, ಉಪವಿಭಾಗೀಯ ದಂಡಾಧಿಕಾರಿ ಅಬೀದ್ ಗದ್ಯಾಳ, ವಿಜಯಪುರದ ಉಪನಿರ್ದೇಶಕ ಎನ್ ಎಚ್ ನಾಗೂರ, ವಿಜಯಪುರದ ಡೈಟ್ ನ ಉಪನಿರ್ದೇಶಕ ಉಮಾದೇವಿ ಸೊನ್ನದ, ಇಂಡಿ ಪೊಲೀಸ್ ಉಪಾಧೀಕ್ಷಕ ಜಗದೀಶ ಎಚ್ ಎಸ್, ಇಂಡಿ ತಹಶೀಲ್ದಾರರು ಹಾಗೂ ತಾಲೂಕ ಕಾರ್ಯನಿರ್ವಾಹಕ ದಂಡಾಧಿಕಾರಿ ಬಿ ಎಸ್ ಕಡಕಭಾವಿ, ಇಂಡಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ ಅವರು ಆಗಮಿಸುವರು. 

ತಾಲೂಕಿನ ಎಲ್ಲ ಶಿಕ್ಷಕ ಸಂಘಗಳ, ಸರ್ಕಾರಿ ನೌಕರರ ಸಂಘ ಹಾಗೂ ವಿವಿಧ ಶಿಕ್ಷಕರ ಸಂಘಟನೆಗಳ, ಮಹಿಳಾ ಸಂಘಟನೆಗಳ, ಬೋಧಕೇತರ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು, ಶಿಕ್ಷಕರು, ಕಾರ್ಯಾಲಯದ ಸಿಬ್ಬಂದಿಯವರು, ಸಿಆರ್‌ಪಿ, ಬಿಆರ್‌ಪಿ, ಇಸಿಓ, ಬಿಐಆರ್ ಟಿ, ಪಿಈಓ ರವರು, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಅಭಿಮಾನಿಗಳು, ಶಿಕ್ಷಣ ಪ್ರೇಮಿಗಳು, ಪತ್ರಿಕಾ ಮಾಧ್ಯಮದವರು, ಟಿ ವಿ ಮಾಧ್ಯಮದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಇಂಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಎಸ್ ಆಲಗೂರ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ, ನೋಡಲ್ ಅಧಿಕಾರಿ ಎ ಓ ಹೂಗಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ