ನೂರಾರು ಬೆಂಬಲಿಗರೊಂದಿಗೆ ತಮ್ಮಣ್ಣಾ ಪೂಜಾರಿ ಬಿಜೆಪಿ ಸೇರೆ್ಡ
ಅಥಣಿ 26: ಹಿಂದುತ್ವದ ಪ್ರಭಾವ, ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಜನಪರ ಕಾಳಜಿ ಮೆಚ್ಚಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರೆ್ಡಯಾಗಿರುವೆ ಎಂದು ತಮ್ಮಣ್ಣಾ ಪೂಜಾರಿ ಹೇಳಿದರು. ಅವರು ತಮ್ಮ ನೂರಾರು ಬೆಂಬಲಿಗರೊಂದಿಗೆ ಶ್ರೀಮಂತ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಸೇರೆ್ಡಯಾಗಿ ಮಾತನಾಡುತ್ತಿದ್ದರು.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಳೆದ 9 ವರ್ಷಗಳಿಂದ ರೈತ, ಬಡ, ನಿರ್ಗತಿಕರ ಪರವಾಗಿ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನ ಗೊಳಿಸುತ್ತಿದ್ದು, ಕಾಗವಾಡ ಮತಕ್ಷೇತ್ರದಲ್ಲಿಯೂ ಸಹ ಶ್ರೀಮಂತ ಪಾಟೀಲರು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನ ಗೊಳಿಸುವ ಮೂಲಕ ಮೋದಿಯವರ ಕೈ ಬಲ ಪಡಿಸುತ್ತಿದ್ದಾರೆ ಎಂದ ಅವರು ನಾನು ಕಳೆದ 20 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ ಆದರೆ ಇಲ್ಲಿಯ ಜನಪರ ಕಾಳಜಿ ಮೆಚ್ಚಿ ಬಿಜೆಪಿ ಸೇರೆ್ಡಯಾಗಿರುವೆ ಎಂದು ಹೇಳಿದರು.
ಇದಕ್ಕೂ ಮುನ್ನ ಅಥಣಿ ಶುಗರ್ಸ ಆವರಣದಲ್ಲಿ ತಮ್ಮಣ್ಣ ಪೂಜಾರಿ ಇವರ ನೂರಾರು ಅಭಿಮಾನಿಗಳು ಬೈಕ್ ರಾ್ಯಲಿ ನಡೆಸಿದರು. ಬಿಜೆಪಿ ಯುವ ಮುಖಂಡರಾದ ಶ್ರೀನಿವಾಸ ಪಾಟೀಲ, ಸುಶಾಂತ ಪಾಟೀಲ, ಈಶ್ವರ ಕುಂಬಾರೆ, ಅಪ್ಪಾಸಾಹೇಬ ಮಳಮಳಸಿ, ಆರ್.ಎಮ್.ಪಾಟೀಲ, ಶಿದ್ದಪ್ಪ ಕಿರಣಗಿ, ಸುರೇಶ ಆಜೂರ, ಸುಖದೇವ ನಾಯಿಕ, ಗೌಡಪ್ಪ ಪಾಟೀಲ, ರಾಕೇಶ ಪಾಟೀಲ, ಪಾವಾಡಿ ಜಮಶೇಟ್ಟಿ, ಸಂಜು ನಾಯಿಕ, ಪರಸಪ್ಪ ನಾಯಿಕ, ದಯಾನಂದ ನಾಯಿಕ, ಅರ್ಜುನ ನಾಯಿಕ, ಶ್ರೀಕಾಂತ ನಾಯಿಕ, ರಾವಸಾಬ ಯಶವಂತ ಬೇವನೂರ, ರವಿ ಬೇವನೂರ, ಸಾಗರ ಬೇವನೂರ, ಬಸಪ್ಪ ಬೇವನೂರ, ವಿನೋದ ಬೇವನೂರ, ಕರಸಿದ್ದ ಬೇವನೂರ, ಅಣ್ಣಪ್ಪ ಬೇವನೂರ, ಮಾನಸಿದ್ದ ಬೇವನೂರ, ಅರುಣ ವಾಘಮೋಡೆ, ಲಕ್ಷ್ಮಣ ಬೇವನೂರ, ಬಾಳಪ್ಪ ನಾಯಿಕ, ಸುರೇಶ ಸನದಿ, ಗಿರಮಲ್ಲ ಸವದಿ, ಮಹಾದೇವ ಸನದಿ, ಮುದಕಪ್ಪ ನಂದಗಾಂವ, ಅಣ್ಣಪ್ಪ ನಾಯಿಕ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.