ಕುರ್ಚಿಗಾಗಿ ತಾ.ಪಂ.ಅಧಿಕಾರಿ ಪ್ರತಿಭಟನೆ
ಇಂಡಿ,19: ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಹುದ್ದೆಗಾಗಿ ಒಂದೇ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ನಡುವೆ ತಿಕ್ಕಾಟ ನಡೆದ ಘಟನೆ ಇಂಡಿ ತಾಲೂಕು ಪಂಚಾಯತಿ ಆವರಣದಲ್ಲಿ ನಡೆದಿದೆ.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಬಾಬು ರಾಠೋಡ ಹಾಗೂ ಗುರುಶಾಂತಪ್ಪ ಬೆಳ್ಳುಂಡಗಿ ಈ ಇಬ್ಬರು ಅಧಿಕಾರಿಗಳು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಹುದ್ದೆಗಾಗಿ ತಿಕ್ಕಾಟಕ್ಕೆ ಇಳಿದ್ದಿದ್ದಾರೆ. ಗುರುಶಾಂತಪ್ಪ ಬೆಳ್ಳುಂಡಗಿ ಅವರನ್ನು ಜುಲೈ 29 ರಂದು ರಾಜ್ಯ ಸರ್ಕಾರ ಇಂಡಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಹುದ್ದೆಗೆ ನಿಯುಕ್ತಿಗೊಳಸಿದೆ.ಆದರೆ ಏಕಾಏಕಿ ಅಗಸ್ಟ್ 14 ರಂದು ಮತ್ತೆ ಕೊಡಗು ಜಿಲ್ಲೆಯ ಮಡಿಕೇರಿಗೆ ವರ್ಗಾವಣೆಗೊಳಸಿದೆ.ಈ ವರ್ಗಾವಣೆಯಲ್ಲಿ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿ ಗುರುಶಾಂತಪ್ಪ ಬೆಳ್ಳುಂಡಗಿ ಅವರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಕಾರ್ಯಾಲಯದ ಮುಂದೆ ಕುಂತು ಪ್ರತಿಭಟನೆ ಮಾಡಿದರು.ಈ ಹೈಡ್ರಾಮಾ ಸಾರ್ವಜನಿಕರು ನೋಡಲು ಪುಕ್ಕಟೆ ಮನರಂಜನೆ ಆಗಿದಂತು ಸುಳ್ಳಾಲ.