ಕುಡಿಯುವ ನೀರಿನ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಿ: ಶಾಸಕ ಸವದಿ
ಅಥಣಿ 29: ಮಳೆ ಕೊರತೆಯಿಂದ ಕೃಷ್ಣಾ ನದಿ ಸಂಪೂರ್ಣ ಬತ್ತಿದ್ದು, ಅಥಣಿ ಪಟ್ಟಣದ ಜನತೆಗೆ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಎಲ್ಲ ಅಗತ್ಯ ಕ್ರಮ ಜರುಗಿಸಿ ಎಂದು ಶಾಸಕ ಲಕ್ಷ್ಮಣ ಸವದಿ ಪುರಸಭಾ ಮುಖ್ಯಾಧಿಕಾರಿ ಹಾಗೂ ಚುನಾಯಿತ ಪುರಸಭಾ ಸದಸ್ಯರಿಗೆ ಸೂಚಿಸಿದರು.
ಅವರು ಅಥಣಿ ಪುರಸಭಾ ಭವನದಲ್ಲಿ ಆಯೋಜಿಸಿದ್ದ ಪುರಸಭೆಯ ಸಿಬ್ಬಂದಿ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡುತ್ತಿದ್ದರು. ಮಹಾರಾಷ್ಟ್ರ ದಲ್ಲಿ ಮಳೆ ಕೊರತೆ ಉಂಟಾಗಿದ್ದರಿಂದ ಕೃಷ್ಣಾ ನದಿಗೆ ನೀರು ಬರಲು ವಿಳಂಬವಾಗುವ ಸಾಧ್ಯತೆ ಇದ್ದುದರಿಂದ ಇಂದಿನಿಂದಲೇ ಅಥಣಿ ಪಟ್ಟಣದ ಎಲ್ಲ 27 ವಾರ್ಡಗಳಲ್ಲಿ ಕುಡಿಯುವ ನೀರಿಗಾಗಿ ಲಭ್ಯ ಇರುವ ಕೊಳವೆ ಹಾಗೂ ತೆರೆದ ಭಾವಗಳಿಗೆ ವಿದ್ಯುತ್ ಮೋಟಾರ ಹಾಗೂ ಪೈಪಲೈಲನ್ ಅಳವಡಿಸಿ ನೀರು ಕೊಡಿ ಜೊತೆಗೆ ಯಾರಾದರೂ ಖಾಸಗಿ ವ್ಯಕ್ತಿಗಳು ಕೊಳವೆ ಭಾವಿ ಮೂಲಕ ನೀರು ಕೊಡಲು ಮುಂದಾದಲ್ಲಿ ಅವರ ವಿದ್ಯುತ್ ಬಿಲ್ಲ ಪುರಸಭೆಯಿಂದ ಪಾವತಿಸಿ ಹಾಗೂ ಅವಶ್ಯ ಎನಿಸಿದಲ್ಲಿ ಟ್ಯಾಂಕರಗಳ ಮೂಲಕವು ನೀರು ಪೂರೈಸಿ ಎಂದು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಪುರಸಭೆಯ ಸದಸ್ಯರ ಗಮನಕ್ಕೆ ತರದೆ ನಗರೋತ್ಥಾನ ಯೋಜನೆಯ ಕಾಮಗಾರಿಗಳಿಗೆ ಟೆಂಡರ್ ಮಂಜೂರು ಮಾಡಲಾಗಿದೆ ಅಲ್ಲದೆ ಈ ಕಾಮಗಾರಿಗಳು ಅವೈಜ್ಞಾನಿಕ ವಾಗಿದ್ದರಿಂದ ಈ ಯೋಜನೆಯ ಟೆಂಡರ್ ರದ್ದು ಮಾಡಿ ಎಲ್ಲ 27 ವಾರ್ಡಗಳ ಸದಸ್ಯರ ಅಭಿಪ್ರಾಯ ಪಡೆದು ಹೊಸ ಟೆಂಡರ್ ಕರೆದು ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಅಭಿಯಂತರ ವರ್ಧಮಾನ ಹುದ್ದಾರ ಇವರಿಗೆ ಸೂಚಿಸಿದರು.
ಅಥಣಿ ಗ್ರಾಮೀಣ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ಹೊಸ ನಿವೇಶನಗಳನ್ನು ಪುರದಭಾ ವ್ಯಾಪ್ತಿಗೆ ಸೇರೆ್ಡ ಮಾಡಿಕೊಳ್ಳುವಾಗ ಆ ನಿವೇಶನಗಳಲ್ಲಿ ಕಾನೂನಿನ ನಿಯಮಾನುಸಾರ ಅಭಿವೃದ್ಧಿ ಆಗಿದೆಯಾ ಅಥವಾ ಇಲ್ಲವೋ ಎನ್ನುವುದನ್ನು ಗಮನಿಸಿ ಪುರಸಭಾ ವ್ಯಾಪ್ತಿಗೆ ಸೇರೆ್ಡ ಮಾಡಿಕೊಳ್ಳಿ ಎಂದು ಸಲಹೆ ನೀಡಿದ ಅವರು ಅಥಣಿ ಪಟ್ಟಣದ ಮಧ್ಯ ಭಾಗದಲ್ಲಿರುವ ಜೋಡು ಕೆರೆಗಳ ಅಭಿವೃದ್ಧಿಗಾಗಿ ವಿಶೇಷ ಯೋಜನೆಯನ್ನು ಅನುಷ್ಠಾನಗೊಳಿಸುವ ಯತ್ನ ಮಾಡುವೆ ಎಂದು ಹೇಳಿದರು.
ಪುರಸಭೆಯನ್ನು ಮೇಲ್ದರ್ಜೆಗೆರಿಸಿ ನಗರ ಸಭೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಈಗಿದ್ದ ಪುರಸಭೆಯ ವ್ಯಾಪ್ತಿಯನ್ನು ಹೆಚ್ಚಿಸಿ ಆ ಪ್ರದೇಶವನ್ನು ಸೇರೆ್ಡಗೊಳಿಸಲು ಅಗತ್ಯ ಕ್ರಮ ಜರುಗಿಸಿ ಆಗ ಮಾತ್ರ ಜನಸಂಖ್ಯೆಯ ಪ್ರಮಾಣವೂ ಕೂಡ ಹೆಚ್ಚಾಗಿ ಪುರಸಭೆಯನ್ನು ನಗರ ಸಭೆಯನ್ನಾಗಿ ಮೇಲ್ದರ್ಜೆಗೆ ಹೆಚ್ಚಿಸಲು ಸಾಧ್ಯವಾಗುತ್ತದೆ ಇದರಿಂದ ಅಥಣಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬರಲು ಸಾಧ್ಯ ಎಂದರು.
ಪುರಸಭೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಸರಕಾರದ ಮಟ್ಟದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಕೆಲವೇ ದಿನಗಳಲ್ಲಿಯೇ ಹೊಸ ಕಟ್ಟಡಕ್ಕೆ ರಾಜ್ಯ ಸರಕಾರದಿಂದ ಅನುಮೊದನೆ ಸಿಗಲಿದ್ದು, ಈ ನಿಟ್ಟಿನಲ್ಲಿ ನಾನು ಪ್ರಯತ್ನಿಸುವೆ ಎಂದ ಅವರು ಅಥಣಿ ಪುರಸಭೆಯ ವ್ಯಾಪ್ತಿಯಲ್ಲಿ ಪುರಸಭೆಯ ಆಸ್ತಿಗಳು ಅತಿಕ್ರಮಣ ಆಗದಂತೆ ಎಚ್ಚರ ವಹಿಸಿ ಎಂದರು.
ಅಥಣಿ ಪಟ್ಟಣದ ಅಭಿವೃದ್ಧಿಗಾಗಿ ಮಾತನಾಡಿದ ಪುರಸಭಾ ಸದಸ್ಯ ದತ್ತಾ ವಾಸ್ಟರ್, ಅಥಣಿ ಪಟ್ಟಣದ ರಾಜ್ಯ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದರಿಂದ ಶಾಲಾ ಮಕ್ಕಳಿಗೆ ಹಾಗೂ ವಯಸ್ಸಾದವರಿಗೆ ರಸ್ತೆ ದಾಟುವಾಗ ತೊಂದರೆಯಾಗುತ್ತಿದ್ದು, ಅಂಬೇಡ್ಕರ ವೃತ್ತ ಮತ್ತು ಹಳೆ ತಹಶೀಲ್ದಾರ ಕಛೇರಿ ಹತ್ತಿರ ಫ್ಲೈ ಓವ್ಹರ ನಿರ್ಮಿಸಬೇಕು ಮತ್ತು ಪಟ್ಟಣ ಪ್ರವೇಶಿಸುವ ನಾಲ್ಕು ರಸ್ತೆಗಳಲ್ಲಿ ಶಿವಯೋಗಿಗಳ ಹೆಸರಿನಿಂದ ಮಹಾದ್ವಾರ ನಿರ್ಮಿಸಿ ಎಂದರು.
ಪುರಸಭಾ ಸದಸ್ಯರಾದ ರಾವಸಾಹೇಬ ಐಹೊಳೆ, ಮಲ್ಲೇಶ ಹುದ್ದಾರ, ವೀಲೀನ್ ಯಳಮಲಿ, ಪ್ರಮೋದ ಬಿಳ್ಳೂರ, ವೆಂಕಟೇಶ ದೇಶಪಾಂಡೆ, ಸಂತೋಷ ಸಾವಡಕರ, ಆಸೀಫ್ ತಾಂಬೊಳಿ, ಕಲ್ಲೇಶ ಮಡ್ಡಿ, ಬೀರ್ಪ ಯಂಕಂಚಿ ಮಾತನಾಡಿದರು.
ಪುರಸಭಾ ಮುಖ್ಯಾಧಿಕಾರಿ ಈರಣ್ಣಾ ದಡ್ಡಿ ಮಾತನಾಡಿ, ನೀರಿನ ಕೊರತೆ ನೀಗಿಸಲು ಎಲ್ಲ 27 ವಾರ್ಡಗಳಲ್ಲಿ ಅಗತ್ಯ ಕ್ರಮ ಜರುಗಿಸಲಾಗಿದೆ ಎಂದ ಅವರು ಅವಶ್ಯ ಬಿದ್ದಲ್ಲಿ ಟ್ಯಾಂಕರ ಮೂಲಕವೂ ಕುಡಿಯುವ ನೀರು ಪೂರೈಕೆ ಮಾಡುತ್ತೇವೆ ಎಂದರು. ಕುಡಿಯುವ ನೀರು ಪೂರೈಕೆಗಾಗಿ ಪುರಸಭಾ ಸಿಬ್ಬಂದಿಗಳು ಹಗಲು ರಾತ್ರಿ ಎನ್ನದೆ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಸಭೆಯಲ್ಲಿ ಪುರಸಭಾ ಸದಸ್ಯರಾದ ದೀಲೀಪ ಲೋಣಾರೆ, ರಾಜಶೇಖರ ಗುಡೊಡಗಿ, ಬಾಬು ಖೆಮಲಾಪುರ, ಮೃಣಾಲಿನಿ ದೇಶಪಾಂಡೆ, ಭುವನೇಶ್ವರ ಯಕ್ಕಂಚಿ, ವಿದ್ಯಾ ಐಹೊಳೆ, ಮಲ್ಲಿಕಾರ್ಜುನ ಬುಟಾಳಿ, ಬಾಬು ಖೆಮಲಾಪುರ, ವಿದ್ಯಾ ಹಳದಮಳ, ಸೈಯ್ಯದ ಅಮೀನ್ ಗದ್ಯಾಳ, ತಿಪ್ಪಣ್ಣಾ ಭಜಂತ್ರಿ ಸೇರಿದಂತೆ ಪುರಸಭಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ನೂತನ ಶಾಸಕ ಲಕ್ಚ್ಮಣ ಸವದಿ ಇವರನ್ನು ಪುರಸಭಾ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಸತ್ಕರಿಸಿ ಗೌರವಿಸಿದರು.