ಧಾರವಾಡ - ಹುಬ್ಬಳ್ಳಿ

ಉಪ್ಪಿನಬೆಟಗೇರಿ ಹೆಸರು, ಉದ್ದು ಖರೀದಿ ಕೇಂದ್ರಕ್ಕೆ ತಹಶಿಲ್ದಾರ ಭೇಟಿ; ನೋಂದಣಿಗೆ ಅನಧಿಕೃತ ಹಣ ಪಡೆಯದಂತೆ ಎಚ್ಚರಿಕೆ

ಉಪ್ಪಿನಬೆಟಗೇರಿ ಹೆಸರು, ಉದ್ದು ಖರೀದಿ ಕೇಂದ್ರಕ್ಕೆ ತಹಶಿಲ್ದಾರ ಭೇಟಿ;  ನೋಂದಣಿಗೆ ಅನಧಿಕೃತ ಹಣ ಪಡೆಯದಂತೆ ಎಚ್ಚರಿಕೆ
Tahsildar visits Uppinabetageri name, Uddu purchase center; warns against receiving unauthorized mon

ಉಪ್ಪಿನಬೆಟಗೇರಿ ಹೆಸರು, ಉದ್ದು ಖರೀದಿ ಕೇಂದ್ರಕ್ಕೆ ತಹಶಿಲ್ದಾರ ಭೇಟಿ;  ನೋಂದಣಿಗೆ ಅನಧಿಕೃತ ಹಣ ಪಡೆಯದಂತೆ ಎಚ್ಚರಿಕೆ 

ಧಾರವಾಡ ಅ.27: ಬೆಂಬಲ ಬೆಲೆ ಯೋಜನೆಯಡಿ ಕಾಳು ಖರೀದಿಸಲು ನೋಂದಣಿಗೆ ರೈತರಿಂದ ನೋಂದಣಿ ಕೇಂದ್ರಗಳಲ್ಲಿ ಅನಧಿಕೃತವಾಗಿ ಹಣ ವಸೂಲು ಮಾಡುತ್ತಿರುವ ಬಗ್ಗೆ ದೂರು ಬಂದಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಉಚಿತ ನೋಂದಣಿಗೆ ಹಣ ಪಡೆದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುದಾಗಿ ಎಚ್ಚರಿಕೆ ನೀಡಿದ್ದಾರೆ. ದೂರು ಬಂದ ಹಿನ್ನಲೆಯಲ್ಲಿ ಧಾರವಾಡ ತಹಶಿಲ್ದಾರ ಡಾ.ಡಿ.ಎಚ್‌. ಹೂಗಾರ ಅವರು ಇಂದು (ಅ.27) ಬೆಳಿಗ್ಗೆ ಉಪ್ಪಿನಬೆಟಗೇರಿ ಪ್ರಾಥಮಿಕ  ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿ, ಪರೀಶೀಲಿಸಿದರು. 

ಉಪ್ಪಿನಬೆಟಗೇರಿಯ ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದಲ್ಲಿ ಬೀಜ, ಗೊಬ್ಬರ ಮಾರಾಟ ಹಾಗೂ ಕೃಷಿ ಉತ್ಪನ್ನ ಖರೀದಿ ಕೇಂದ್ರದಲ್ಲಿ ಹೆಚ್ಚುವರಿ ಹಣ ವಸೂಲಿ ಬಗ್ಗೆ ಪರೀಶೀಲಿಸಿ, ಸಭೆ ಜರುಗಿಸಿದರು.  ಕೃ.ಪ.ಸ.ಸಂಘದ ಅಭಿವೃದ್ದಿ ನಿಧಿ ಹಾಗೂ ಕಟ್ಟಡ ಭವಿಷ್ಯತ್ ನಿಧಿಗೆ 100 ಹೆಚ್ಚುವರಿ ಶುಲ್ಕ ವಿಧಿಸಿ ರಶೀದಿ ನೀಡಿದ್ದು ಇರುತ್ತದೆ. ಇದಕ್ಕೆ ಆಕ್ಷೇಪಣೆ ಬಂದ ಹಿನ್ನೆಲೆಯಲ್ಲಿ ಇನ್ನು ಮುಂದೆ ಹೆಚ್ಚುವರಿ ಶುಲ್ಕ ತೆಗೆದುಕೊಳ್ಳುವುದನ್ನು ಈ ಕೂಡಲೇ ನಿಲ್ಲಿಸುವದಾಗಿ ಸಹಕಾರಿ ಸಂಘದ ಕಾರ್ಯದರ್ಶಿ ಹಾಗೂ ಅಧ್ಯಕ್ಷರು, ಸದಸ್ಯರು ತಿಳಿಸಿದರು.ಈ ಸಂದರ್ಭದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ಅನಗೌಡರ, ಅಮ್ಮಿನಭಾವಿ ಕಂದಾಯ ನೀರೀಕ್ಷಕ  ಗುರು ಒಡೆಯರ, ಸೊಸೈಟಿಯ ಸದಸ್ಯರು, ಹಾಗೂ ರೈತರು ಹಾಜರಿದ್ದರು. 


ಸುದ್ದಿ ಓದಿ