ನಾಗಪ್ಪ ಮೆಟಿ ಅಭಿಮಾನಿ ಬಳಗದಿಂದ ಟಗರಿನ ಕಾಳಗ
ಬೈಲಹೊಂಗಲ 08: ಸಮೀಪದ ಮುತವಾಡ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ನಾಗಪ್ಪ ಮೆಟಿ ಅಭಿಮಾನಿ ಬಳಗದಿಂದ ಟಗರಿನ ಕಾಳಗ ನಡೆಯಿತು.
ಹಾಲು ಹಲ್ಲಿನ ಟಗರು, ಎರಡು ಹಲ್ಲಿನ ಟಗರು, ನಾಲ್ಕು ಹಲ್ಲಿನ ಟಗರುಗಳು ಸ್ಪಧರ್ಿಸಿ ತಮ್ಮ ಶಕ್ತಿ ಪ್ರದಶರ್ಿಸಿದವು. ಮೂರು ವಿಭಾಗಗಲ್ಲಿ ಸ್ಪಧರ್ಿಸಿದ ಟಗರುಗಳಿಗೆ ನಗದು ಬಹುಮಾನ, ಶೀಲ್ಡ್ ಕೊಡುಗೆ ನೀಡಲಾಯಿತು.
ಡಿಶೂಂ, ಡಿಶೂಂ ಆಟದಲ್ಲಿ ಶಕ್ತಿ ಪ್ರದಶರ್ಿಸಿದ ಟಗರುಗಳಿಗೆ ಪ್ರೇಕ್ಷಕ ಗ್ಯಾಲರಿಯಲ್ಲಿ ಕುಳಿತ್ತಿದ್ದ ಟಗರು ಕಾಳಗ ಅಭಿಮಾನಿಗಳು ಚಪ್ಪಾಳೆ ತಟ್ಟಿ, ಸಿಳ್ಳೆ ಹೊಡೆದು ಪ್ರೋತ್ಸಾಹಿಸಿದರು. ಮೈಲಾರಿ, ಕಾಲಬೈರವ್, ಸಿಂಧೂರ ಲಕ್ಷ್ಮಣ ಸೇರಿದಂತೆ ಅತ್ಯಾಕರ್ಷಕ ಹೆಸರಿನ ಟಗರುಗಳ ಹೆಸರುಗಳು ಕೇಳುಗರನ್ನು ಆಕಷರ್ಿಸಿದವು. ಶಕ್ತಿ ಮೀರಿ ಗುದ್ದಾಟ ಮಾಡಿದ ಟಗರುಗಳ ಕಾಳಗ ನೋಡುಗರನ್ನು ರಂಜಿಸಿತು.
ಹಾಲು ಹಲ್ಲಿನ ವಿಭಾಗದಲ್ಲಿ ಗೋವನಕೊಪ್ಪ ಟಗರು ಪ್ರಥಮ, ಮುರಗೋಡ ದ್ವಿತೀಯ, ಮಾಟೊಳ್ಳಿ ತೃತೀಯ, ಎರಡು ಹಲ್ಲಿನ ಕಾಳಗದಲ್ಲಿ ಬೇಡರಟ್ಟಿ ಪ್ರಥಮ, ಸೊಗಲ ದ್ವಿತೀಯ, ಯರಝವರ್ಿ ತೃತೀಯ ಸ್ಥಾನ, ನಾಲ್ಕು ಹಲ್ಲಿನ ಟಗರು ಕಾಳಗದಲ್ಲಿ ಬೈಲಹೊಂಗಲ ಪ್ರಥಮ, ಮಾರಿಹಾಳ ದ್ವಿತೀಯ, ಮಾಟೊಳ್ಳಿ ತೃತೀಯ ಸ್ಥಾನ ಪಡೆದವು.
ಸಂಘಟಕ ನಾಗಪ್ಪ ಮೆಟಿ ಉದ್ಘಾಟಿಸಿ ಸ್ಪಧರ್ೆ ಉದ್ಘಾಟಿಸಿ ಮಾತನಾಡಿ, 'ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ, ಬೆಳೆಸುವುದರ ಜೊತೆಗೆ ಮುನ್ನಡೆಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿಯಾಗಿದೆ. ಗ್ರಾಮೀನ ಕ್ರೀಡೆಗಳಿಗೆ ಎಲ್ಲರು ಪ್ರೋತ್ಸಾಹ ನೀಡಬೇಕು' ಎಂದರು. ಗ್ರಾಪಂ ಅಧ್ಯಕ್ಷ ಶಂಕರ ಬಾಗೇವಾಡಿ, ಶಿವಾನಂದ ಕನ್ನಪ್ಪನವರ, ಶಿವಾನಂದ ರಾಮದುರ್ಗ, ಮಹಾಂತೇಶ ಬಾಜಿ, ಇಂಚಲ, ಮುತವಾಡ ಗ್ರಾಮಸ್ಥರು ಇದ್ದರು.