ಬೈಲಹೊಂಗಲ

ಟಿವಿಎಸ್ ಮೋಟರ್ಸ ಕ್ಯಾಂಪಸ್ ಸಂದರ್ಶನ: 88 ವಿದ್ಯಾರ್ಥಿಗಳು ಆಯ್ಕೆ

ಟಿವಿಎಸ್ ಮೋಟರ್ಸ ಕ್ಯಾಂಪಸ್ ಸಂದರ್ಶನ: 88 ವಿದ್ಯಾರ್ಥಿಗಳು ಆಯ್ಕೆ

ಬೈಲಹೊಂಗಲ 10: ಪಟ್ಟಣದ ಕೆ. ಎಲ್‌. ಇ. ಸಂಸ್ಥೆಯ ಪಾಲಿಟೆಕ್ನಿಕ (ಡಿಪ್ಲೋಮಾ) ಕಾಲೇಜು ಬೈಲಹೊಂಗಲದಲ್ಲಿ ಪ್ರತಿಷ್ಟಿತ ಟಿ. ವಿ. ಎಸ್‌. ಮೋಟರ್ಸ ಕಂಪನಿ ಲಿಮಿಟೆಡ್ ಮೈಸೂರ ವತಿಯಿಂದ ಎಸ್‌.ಎಸ್‌.ಎಲ್‌.ಸಿ, ಡಿಪ್ಲೋಮಾ, ಐ.ಟಿ.ಐ ಮತ್ತು ಪದವಿ ಪಾಸಾದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನವನ್ನು ಎರಿ​‍್ಡಸಲಾಗಿತ್ತು. 

ಟಿವಿಎಸ್ ಮೋಟರ್ಸ ಸಂಸ್ಥೆಯ ಎಚ್ ಆರ್ ಮ್ಯಾನೇಜರ ಮನೀಷ ಮಾತನಾಡಿ ಟಿವಿಎಸ್ ಮೋಟರ್ಸ ಕಂಪನಿಯ ಹುಟ್ಟು ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು. 

ಟಿವಿಎಸ್ ಮೋಟರ್ಸ ಕಂಪನಿಯ ಇಂಜನೀಯರ ಜ್ಯೋತೆಪ್ಪ ಅವರು ಮಾತನಾಡಿ ಕಂಪನಿಗಳಲ್ಲಿ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಯಾವ ರಿತಿಯಲ್ಲಿ ಸರಕಾರದ ಮಾನದಂಡಗಳನ್ವಯ ಗುಣಮಟ್ಟ ಮಾರಿ​‍್ಡಸುವಲ್ಲಿ ನಡೇಯುವ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ. ಎಲ್‌. ಇ. ಪಾಲಿಟೆಕ್ನಿಕ್ (ಡಿಪ್ಲೊಮಾ) ಕಾಲೇಜಿನ ಪ್ರಾಚಾರ್ಯರಾದ ಪ್ರೋ. ಶ್ರೀಧರ ಬ. ನಿರಡಿ ಮಾತನಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಟಿವಿಎಸ್ ಮೋಟರ್ಸ ಕಂಪನಿಯು ನಮ್ಮ ಸಂಸ್ಥೆಯಲ್ಲಿ ಗ್ರಾಮಿಣ ಮಟ್ಟದಲ್ಲಿ ವಿದ್ಯಾರ್ಜಿಸಿದ ಅಭ್ಯರ್ಥೀಗಳಿಗೆ ಹಾಗೂ ಸುತ್ತಮುತ್ತಲಿನ ಅಭೈರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ಮಾಡುತ್ತಿರುವದು ನಮಗೆ ಸಂತಸವನ್ನುಂಟು ಮಾಡಿದೆ ಹಾಗೂ ಕಂಪನಿಯ ಎಲ್ಲ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿ ಅಭ್ಯರ್ಥಿಗಳು ಈ ಸಂದರ್ಶನದ ಸದೂಪಯೋಗವನ್ನು ಮಾಡಿಕೊಳ್ಳಬೇಕೆಂದರು. 

ಸಂದರ್ಶನದಲ್ಲಿ ವಿವಿಧ ಸ್ತಳಗಳಿಂದ ಸುಮಾರು 209 ವಿದ್ಯಾರ್ಥಿಗಳು ಭಾಗವಹಿಸಿದ್ದರು ಹಾಗೂ 88 ವಿದ್ಯಾರ್ಥಿಗಳನ್ನು ಆಯ್ಕೆಮಾಡಿದರು. 

ಕಾರ್ಯಕ್ರಮವನ್ನು ಕಾಲೇಜಿನ ತರಬೇತಿ ಮತ್ತು ಉದ್ಯೋಗ ಅಧಿಕಾರಿಗಳಾದ ಸತೀಶ ಪಾಟೀಲ ನೆರವೆರಿಸಿದರು, ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಎಸ್‌.ಎಸ್‌.ಶರಣಪ್ಪನವರ,  ಆಯ್‌.ಎನ್‌.ಹಾದಿಮನಿ, ಎಸ್‌.ಎಮ್‌.ಕಳಸಣ್ಣವರ, ವಿ.ಬಿ.ಪಾಟೀಲ, ಎ.ಎಮ್‌.ಪಾಟೀಲ, ಆರ್‌.ಪಿ.ದೊಡ್ಡಹುಬ್ಬಳ್ಳಿ ಹಾಗೂ ಐ.ಟಿ.ಐ ಮತ್ತು ಡಿಪ್ಲೊಮಾ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಹಾಜರಿದ್ದರು. 


ಸುದ್ದಿ ಓದಿ