ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿಂದ ಸ್ವಾಸ್ಥ್ಯೆ ಸಂಕಲ್ಪ ಕಾರ್ಯಕ್ರಮ
ಬೈಲಹೊಂಗಲ 08: ದುಶ್ಚಟಗಳಿಂದ ದೂರ ಉಳಿದು ಉತ್ತಮ ಭವಿಷ್ಯ ನಿಮರ್ಾಣ ಮಾಡಿಕೊಳ್ಳುವದರೊಂದಿಗೆ ಸಮಾಜದಲ್ಲಿ ಗೌರವಾನ್ವಿತರಾಗಿ ಬಾಳಬೇಕೆಂದು ವೈಧ್ಯ ಸಾಹಿತಿ ಡಾ. ಶಿವಶಂಕರಪ್ರಸಾದ ಎಸ್.ದೇವಲಾಪೂರ ಹೇಳಿದರು.
ಅವರು ಪಟ್ಟಣದ ಚನ್ನಮ್ಮ ಸಮಾಧಿ ರಸ್ತೆಯಲ್ಲಿನ ಗಣಾಚಾರಿ ಶಿಕ್ಷಣ ಸಂಸ್ಥೆಯ ಶ್ರೀ ಬಸವೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಯ ಹಾಗೂ ಅಕ್ಕ ಮಹಾದೇವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಮತ್ತು ಬೈಲಹೊಂಗಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ ಆಶ್ರಯದಲ್ಲಿ ಸಂಸ್ಥೆಯ ಸಭಾಭವನದಲ್ಲಿ ಮಂಗಳವಾರ ನಡೆದ ವಿದ್ಯಾಥರ್ಿಗಳಿಗಾಗಿ ಸ್ವಾಸ್ತ್ಯೆ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹಲವಾರು ಚಟಗಳಿಂದ ಜನರ ಆರೋಗ್ಯಗಳು ಹಾಳಾಗುತ್ತಿದ್ದು ವಿದ್ಯಾಥರ್ಿಗಳು ಅಧ್ಯಯನದತ್ತ ಹೆಚ್ಚಿನ ಗಮನ ಹರಿಸಬೇಕೆಂದರು.
ಸಂಸ್ಥೆಯ ಪ್ರಾಚಾರ್ಯ ಡಾ.ಸಿ.ಬಿ.ಗಣಾಚಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಜನ ಜಾಗೃತಿ ವೇದಿಕೆಯ ನಿದರ್ೇಶಕ ಮಹೇಶ ಕೋಟಗಿ, ಜಗದೀಶ ಜಕ್ಕಪ್ಪನವರ, ವಲಯ ಮೇಲ್ವಚಾರಕಿ ಅನ್ನಪೂರ್ಣ ನವಲಗುಂದ, ಪ್ರಾಚಾರ್ಯ ಎಂ.ಎಸ್.ಹಾದಿಮನಿ, ಸೇವಾ ಪ್ರತಿನಿಧಿ ಸುಮಾ ಹಿರೇಮಠ, ಕಜಾಪ ವಕ್ತಾರ ಮಹಾಂತೇಶ ರಾಜಗೋಳಿ, ಸಂಗಮೇಶ್ವರ ಕುಲಕಣರ್ಿ ವೇದಿಕೆ ಮೇಲಿದ್ದರು.
ಉಪನ್ಯಾಸಕ ಎಂ.ಎಫ.ಎಡತ್ತಿನ ಸ್ವಾಗತಿಸಿದರು. ವಿದ್ಯಾಥರ್ಿನಿ ಶ್ರೀದೇವಿ ಹಿರೇಮಠ ನಿರೂಪಿಸಿದರು. ದುಶ್ಚಟಗಳಿಂದ ದೂರ ಉಳಿಯುವಂತೆ ವಿದ್ಯಾಥರ್ಿಗಳಿಂದ ಇದೇ ಸಂದರ್ಭದಲ್ಲಿ ಸಂಕಲ್ಪ ಮಾಡಿಸಲಾಯಿತು.