ಸ್ವಾಮಿ ಅಯ್ಯಪ್ಪ ಜಾತ್ರಾ ಮಹೋತ್ಸವ: ರಕ್ತದಾನ ಶಿಬಿರ
ಇಂಡಿ 25: ಪಟ್ಟಣದ ಚವಡಿಹಾಳ ರಸ್ತೆಯಲ್ಲಿರುವ ಸ್ವಾಮೀ ಅಯ್ಯಪ್ಪ ದೇವಸ್ಥಾನದ ಆವರಣದಲ್ಲಿ ಸ್ವಾಮಿ ಅಯ್ಯಪ್ಪನವರ 26 ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ, ನೇತ್ರದಾನ, ಕ್ಷಯರೋಗ ನಿರ್ಮೂಲನೆಯ ಬಗ್ಗೆ ಜಾಗೃತಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಶನಿವಾರ ಆಯೋಜಿಸಲಾಗಿತ್ತು.
ಡಾ. ರಾಜೇಶ ಕೋಳೆಕರ್, ಡಾ. ಪ್ರಶಾಂತ ಧೂಮಗೊಂಡ ಮಾತನಾಡಿ ಜಾತ್ರಾ ಮಹೋತ್ಸವದಲ್ಲಿ ರಾಯಲ್ ಗುರುಸ್ವಾಮಿಗಳ ಸಾಮಾಜಿಕ ಕಳಕಳಿಯ ಮೇರೆಗೆ ನಮ್ಮ ಇಲಾಖೆ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ 63 ಜನ ಯುವಕರು ರಕ್ತದಾನ ಮಾಡಿದರು, 25 ಜನ ಯುವಕರು ನೇತ್ರದಾನ ವಾಗ್ದಾನ ಮಾಡಿದರು, 40 ಜನ ಕೋವಿಡ್ ಪರೀಕ್ಷೆ ಮಾಡಿಸಿಕೊಂಡರು, 10 ಜನ ಕೋವಿಡ್ ಲಸಿಕೆ ಹಾಕಿಸಿಕೊಂಡರು, 45 ಜನ ಶುಗರ್, ಬಿ.ಪಿ. ಪರೀಕ್ಷೆಯನ್ನು ಮಾಡಿಸಿಕೊಂಡಿದ್ದಾರೆ ಎಂದರು.
ರಾಯಲ್ ಗುರುಸ್ವಾಮೀಜಿ ಮಾತನಾಡಿ ಸತತ 26 ವರ್ಷಗಳಿಂದ ಅಯ್ಯಪ್ಪಸ್ವಾಮೀಜಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳುತ್ತಿದ್ದೇವೆ. ಕಳೆದ ನಾಲ್ಕಾರು ವರ್ಷಗಳಿಂದ ದೇವಸ್ಥಾನದ ಜೀಣೋಧ್ಧಾರ ಮಾಡಲಾಗುತ್ತಿದ್ದು, ಭಕ್ತರ ಸಹಕಾರದಿಂದ ಜಾತ್ರೆ ಅದ್ದೂರಿಯಾಗಿ ಜರುಗುತ್ತಲಿದೆ. ನೂರಾರು ಮಾಲಾಧಾರಿಗಳು ಮಾಲೆ ಧರಿಸಿ ವೃತ ಮಾಡಿದ್ದಾರೆ. ಭಕ್ತರ ಆರೋಗ್ಯದ ಹಿತ ದೃಷ್ಠಿಯಿಂದ ಜಾತ್ರೆಯಲ್ಲಿ ಆರೋಗ್ಯ ತಪಾಸಣೆ ಶಿಬಿರ ಏರಿ್ಡಸಲಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಇಂಡಿ, ಸಾರ್ವಜನಿಕ ಆಸ್ಪತ್ರೆ ಇಂಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಚಿಕ್ಕಬೇವನೂರ, ರಕ್ತನಿಧಿ ಕೇಂದ್ರ ವಿಜಯಪುರ ಹಾಗೂ ಅಯ್ಯಪ್ಪಸ್ವಾಮಿ ಟ್ರಸ್ಟ ಕಮೀಟಿ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ರಾಯಲ್ ಗುರುಸ್ವಾಮಿಗಳ ನೇತೃತ್ವದಲ್ಲಿ ಡಾ. ಪ್ರಶಾಂತ ಧೂಮಗೊಂಡ, ಡಾ. ರಾಜೇಶ ಕೋಳೆಕರ್, ಬಸವರಾಜ ಪಾಟೀಲ, ಚಂದ್ರಾಮ ಮೇಡೇದಾರ, ಶಾಂತು ಹೊಸಮನಿ, ಸುಭಾಶ ಶೆಟ್ಟಿ, ಸುನೀಲಗೌಡ ಬಿರಾದಾರ, ರಾಚು ಬಡಿಗೇರ, ಆನಂದ ದೇವರ, ಪ್ರವೀಣ ಮಠ, ಸೇರಿದಂತೆ ಆಶಾ ಕಾರ್ಯಕರ್ತರು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.