ಬೈಲಹೊಂಗಲ

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಸೂರ್ಯನ್ ನಾರಾಯಣ ಜೋಶಿ

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಸೂರ್ಯನ್ ನಾರಾಯಣ ಜೋಶಿ

ಬೈಲಹೊಂಗಲ 08: ಪಟ್ಟಣದ 3 ವರ್ಷ, 6 ತಿಂಗಳು ವಯಸ್ಸಿನ ಸೂರ್ಯನ್ ನಾರಾಯಣ ಜೋಶಿ ತನ್ನ ಅಮೋಘ ಜ್ಞಾಪಕ ಶಕ್ತಿಯಿಂದಾಗಿ ಇಂಡಿಯಾ ಬುಕ್ ಆಫ್ ರೆಕಾಡ್ಸರ್್ ಸೇರುವ ಮೂಲಕ ನಾಡಿಗೆ ಕೀತರ್ಿ ತಂದಿದ್ದಾನೆ. 

ಸಾಧನೆ ಏನು?: ಸೌರಮಂಡಲದ ಎಲ್ಲ ಗ್ರಹಗಳನ್ನು ಗುರುತಿಸುವುದು,  ಶ್ಲೋಕಗಳ ಪಠಣ, ಇಂಗ್ಲಿಷ, ಕನ್ನಡ ನರ್ಸರಿ ರಾಯಿಮ್ಸ್ ಹೇಳುವುದು, ಬಾಸ್ಕೆಟಬಾಲ್ ಆಡುವುದು, ಕನ್ನಡ  ಇಂಗ್ಲಿಷ ವರ್ಣಮಾಲೆ ಹೇಳುವುದು ಅದರೊಟ್ಟಿಗೆ ಶಬ್ದ ಗುರುತಿಸುವುದು. ಕನ್ನಡ, ಇಂಗ್ಲಿಷ್ ಸಂಖ್ಯೆಗಳನ್ನು ಪಟಪಟನೆ ಹೇಳುವುದು, ಇಂಗ್ಲಿಷ್ನಲ್ಲಿ ಕ್ರಿಯಾಪದ ಹೇಳುವ ಜತೆ ಅವುಗಳ ಅನುಕರಣೆ ಮಾಡುವುದು. ಆಕಾರಗಳ ಹೆಸರು, ಇಂಗ್ಲಿಷ್ನಲ್ಲಿ ದೇಹದ ಭಾಗಗಳನ್ನು ಹೇಳುವುದು, ಅವುಗಳನ್ನು ಗುರುತಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾಡ್ಸರ್್ ಸೇರಿದ್ದಾನೆ.  

ಪ್ರಶಸ್ತಿ: ಸೂರ್ಯನ್ ಗೆ  ಪ್ರಶಸ್ತಿ ಪತ್ರ, ಮೆಡಲ್, ಒಂದು ಬೆಲೆಬಾಳುವ ಪೆನ್, ಗುರುತಿನ ಚೀಟಿ ನೀಡಿ ಗೌರವಿಸಲಾಗಿದೆ. ಹೊಸದಿಲ್ಲಿಯ ಇಂಡಿಯಾ ಬುಕ್' ಆಫ್ ರೆಕಾಡ್ಸರ್್ ಸಂಸ್ಥೆಯವರು ಮಕ್ಕಳ ಜಾಯ ಕುರಿತು ಪರೀಕ್ಷೆ ನಡೆಸಿ ಈ ಪ್ರಶಸ್ತಿ ನೀಡುತ್ತಾರೆ. ಸೂರ್ಯನ್ ಜಾಣ್ಮೆ ನೋಡಿ ಪಾಲಕರು ಪರೀಕ್ಷೆಗೆ ಒಳಪಡಿಸಿದ್ದರು. ಅದರಲ್ಲಿ ಸೈ ಎನಿಸಿಕೊಂಡಿರುವ ಸೂರ್ಯನ್  2023 ಜುಲೈ. 8 ರಂದು ಪ್ರಶಸ್ತಿಗೆ ಆಯ್ಕೆಯಾಗಿದ್ದನು. ಪಟ್ಟಣದ ಕುಲಕಣರ್ಿ ಗಲ್ಲಿ ನಾರಾಯಣ ಜೋಶಿ ಅವರ ಪುತ್ರನಾಗಿದ್ದು ಪಟ್ಟಣದ ಸೇವಾಭಾರತಿ ಶಿಕ್ಷಣ  ಸಂಸ್ಥೆಯಲ್ಲಿ  ನರ್ಸರಿ ಓದುತ್ತಿದ್ದಾನೆ. 


 

ಸುದ್ದಿ ಓದಿ