ಬೈಲಹೊಂಗಲ

ಸುನೀಲ ಮರಕುಂಬಿ ಪಿಕೆಪಿಎಸ್ ಅಧ್ಯಕ್ಷರಾಗಿ ಆಯ್ಕೆ

ಸುನೀಲ ಮರಕುಂಬಿ ಪಿಕೆಪಿಎಸ್ ಅಧ್ಯಕ್ಷರಾಗಿ ಆಯ್ಕೆ

ಬೈಲಹೊಂಗಲ 16: ಸಮೀಪದ  ಆನಿಗೋಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸುನೀಲ ಮರಕುಂಬಿ, ಉಪಾಧ್ಯಕ್ಷರಾಗಿ ನಾಗಪ್ಪ ಜಕಾತಿ ಸತತ ಎರಡನೇ ಭಾರಿಗೆ ಅವಿರೋಧವಾಗಿ ಆಯ್ಕೆಯಾದರು.  

ಪಿಕೆಪಿಎಸ್ ಅಧ್ಯಕ್ಷ ಸುನೀಲ ಮರಕುಂಬಿ, ಉಪಾಧ್ಯಕ್ಷ ನಾಗಪ್ಪ ಜಕಾತಿ ಅವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಸುನೀಲ ಮರಕುಂಬಿ ಅವರು ಗ್ರಾಮದ ರೈತರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಾ, ಸಂಘದ ಶ್ರೇಯೋಭಿವೃದ್ದಿಗೆ ಶ್ರಮಿಸುವದಾಗಿ ಹೇಳಿದರು. 

ನಿರ್ದೇಶಕರಾದ ಆರೂಢ ಕೆಸಪ್ಪನಟ್ಟಿ,ದುಂಡಪ್ಪ ಸುಣಗಾರ, ಬಸಲಿಂಗಯ್ಯ ಚಿಕ್ಕಮಠ, ಮಾರುತಿ ಮಾದರ, ಯಲ್ಲಪ್ಪ ಉಪ್ಪಾರ, ಮಂಜುನಾಥ ಆದೆಣ್ಣವರ, ಮಲ್ಲೆಶಪ್ಪ ಕುರಿ, ಈರವ್ವ ಹಿರೇಮಠ, ತಾಯವ್ವ ಆದೆಣ್ಣವರ, ಚುನಾವಣಾ ಅಧಿಕಾರಿ ಎಸ್‌.ಎ. ರಾಯಬಾಗ, ಸಂಘದ ವ್ಯವಸ್ಥಾಪಕ ಈರಣ್ಣ ಆದೆನ್ನವರ ಸಿಬ್ಬಂದಿ, ಕೆಎಂಎಪ್ ನಿರ್ದೇಶಕರು,ಗ್ರಾಪಂ ಹಾಲಿ, ಮಾಜಿ ಸದಸ್ಯರು,ಗ್ರಾಮದ ಹಿರಿಯರು ಇದ್ದರು. 


ಸುದ್ದಿ ಓದಿ