ಸುಣಕಲ್ ಬಿದರಿ : ಕಾಲೇಜಿಗೆ ಉತ್ತಮ ಫಲಿತಾಂಶ
ರಾಣೇಬೆನ್ನೂರು 26: ತಾಲೂಕಿನ ಸುಣಕಲಬಿದರಿ ಗ್ರಾಮದ ಸದ್ಗುರು ಶಿವಾನಂದ ಪ.ಪೂ, ಕಾಲೇಜಿನ ಫಲಿತಾಂಶವು,ಶೇ.71.15 ರಷ್ಟಾಗಿದೆ. 52 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 37 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2, ಉನ್ನತ ಶ್ರೇಣಿ,20,ಪ್ರಥಮ. 5, ದ್ವಿತೀಯ. ಹಾಗೂ 10 ತೃತೀಯ ಶ್ರೇಣಿ,ಕಾಲೇಜಿನ ವಿದ್ಯಾರ್ಥಿ ಧನಂಜಯ್ ಎಂ ಜಿ. ಅವರು(ಶೇ 86.84) ಪ್ರಥಮ. ವಿದ್ಯಾ ತಳವಾರ್ (ಶೇ. 85) ದ್ವಿತೀಯ ಹಾಗೂ ಜ್ಯೋತಿ ಒಗ್ಗರಣೆ(ಶೇ 84.50) ತೃತೀಯ. ಕಾಲೇಜಿಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೆ, ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕರು ಸಿಬ್ಬಂದಿ ಶುಭ ಹಾರೈಸಿದ್ದಾರೆ.