ವಿದ್ಯಾರ್ಥಿಗಳು ಕನಕದಾಸರ ಆದರ್ಶ ತತ್ವಗಳನ್ನು ಅಳವಡಿಸಿಕೊಳ್ಳಿ: ಮಾಳಣ್ಣವರ
ಬೈಲಹೊಂಗಲ22: ಸಮಾಜದಲ್ಲಿ ಜಾತಿ ವ್ಯವಸ್ಥೆಯ ಕುರಿತು ಇರುವ ತಾರತಮ್ಯದ ಅದರ ನಿರ್ಮೂಲನ ಹೇಗೆ ಮಾಡಬೇಕೆಂದು ಕನದಾಸರು ಬದುಕಿ ತೋರಿಸಿದ್ದಾರೆ ಅವರ ಆದರ್ಶ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾದ್ಯಾಯ ಎನ್ ಆರ್ ಮಾಳಣ್ಣವರ ಹೇಳಿದರು.
ಅವರು ಸೋಮವಾರ ಸರಕಾರಿ ಪ್ರೌಢ ಶಾಲೆ ನಯಾನಗರದಲ್ಲಿ ಬೈಲಹೊಂಗಲದ ಕಿತ್ತೂರು ರಾಣಿ ಚೆನ್ನಮ್ಮ ಶಿಕ್ಷಣ ಸಂಸ್ಥೆಯ, ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಸಮೂಹ ಬೋಧನಾ ಶಿಬಿರದಲ್ಲಿ ಕನಕದಾಸರ 512 ನೆಯ ಜಯಂತಿ ನಿಮಿತ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ ಶಿಕ್ಷಕರಾದ ಬಿವ್ಹಿಪತ್ತಾರ , ವ್ಹಿವ್ಹಿ ಕಡಕೋಳ ಮಾತನಾಡಿ, ವಿದ್ಯಾರ್ಥಿಗಳು ಕನಕದಾಸರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.
ಪ್ರಶಿಕ್ಷಣಾರ್ಥಿ ಸವಿತಾ ನಾನನ್ನವರ ಕನಕದಾಸರು ಸಮಾಜಕ್ಕೆ ನೀಡಿದ ಕೊಡುಗೆಗಳ ಕುರಿತು ಸವಿವರವಾಗಿ ತಿಳಿಸಿದರು.
ಸಮೂಹ ಬೋಧನಾ ಶಿಬಿರದ ಮಾರ್ಗದರ್ಶಕರಾದ ಎನ್ ಡಿ ಚಿನ್ನಪ್ಪಗೌಡರ, ಭೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜ್ಯೋತಿ ಅಂದಾನಶೆಟ್ಟಿ ಸ್ವಾಗತಿಸಿದರು, ಶೃತಿ ಜೋಗೋಜಿ ವಂದಿಸಿದರು, ಪೂಜಾ ವಿರಕ್ತಮಠ ನಿರೂಪಿಸಿದರು.