ಧಾರವಾಡ - ಹುಬ್ಬಳ್ಳಿ

ಕೇಂದ್ರ ಸರ್ಕಾರದ ಅನುಮತಿ ನೀಡಿದ ತಕ್ಷಣವೇ ರಾಜ್ಯ ಸರ್ಕಾರ ಕಾಮಗಾರಿ ಪ್ರಾರಂಭಿಸುತ್ತೇವೆ: ಸಿಎಂ

ಕೇಂದ್ರ ಸರ್ಕಾರದ ಅನುಮತಿ ನೀಡಿದ ತಕ್ಷಣವೇ ರಾಜ್ಯ ಸರ್ಕಾರ ಕಾಮಗಾರಿ ಪ್ರಾರಂಭಿಸುತ್ತೇವೆ: ಸಿಎಂ

ನವಲಗುಂದ 21 : ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನೀರಾವರಿ ಸಚಿವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕೇಂದ್ರ ಸರ್ಕಾರ ಅನುಮತಿ ನೀಡುವ ನೀರೀಕ್ಷೆಯ ಮೇಲೆ ಕಳಸಾ-ಬಂಡೂರಿ ನಾಲಾ ತಿರುವ ಯೋಜನೆಗಳಿಗೆ (ಲಿಫ್ಟ್‌ ಯೋಜನೆಗಳು) ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಿ ಕೇಂದ್ರ ಸರ್ಕಾರ ಅರಣ್ಯ ಮತ್ತು ರಾಷ್ಟ್ರೀಯ ವನ್ಯಜೀವಿ ಪರಿಸರ ಇಲಾಖೆಯಿಂದ ಅನುಮೋದನೆ ಪಡೆದ ತಕ್ಷಣ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡು ಕಳಸಾ-ಬಂಡೂರಿ  ಕಾಮಗಾರಿ ಪ್ರಾರಂಭಿಸಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದರು.  

ನವಲಗುಂದ-ನರಗುಂದ ರೈತ ಬಂಡಾಯದ ರೈತ ಹುತಾತ್ಮ ದಿನಾಚರಣೆ ಆಚರಣೆ ಮಾಡಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಧಾರವಾಡ, ಬೆಳಗಾವಿ, ಗದಗ ಹಾಗೂ ಬಾಗಲಕೋಟ 4 ಜಿಲ್ಲೆಗಳ 13 ತಾಲ್ಲೂಕುಗಳು ಕುಡಿಯುವ ನೀರಿನ ಈ ಯೋಜನೆಗೆ ಪ್ರಧಾನ ಮಂತ್ರಿಗಳು ಮಧ್ಯ ಪ್ರವೇಶಿಸಿ ನ್ಯಾಯಾಲಯದ ಆದೇಶದ ಪ್ರಕಾರ ನ್ಯಾಯ ನೀಡಬೇಕೆಂದು ಕೋನರಡ್ಡಿ ಮನವಿ ಮಾಡಿದರು.  

ಗವಿಮಠದ ಸ್ವಾಮಿಗಳಾದ ಬಸವಲಿಂಗ ಮಹಾಸ್ವಾಮಿಗಳು, ಮೇಲುಕೋಟೆ ಶಾಸಕ ದರ್ಶನ ಪುಟ್ಟಣ್ಣಯ್ಯ, ಪರಿಸರವಾದಿ ಸುರೇಶ ಹೆಭ್ಳೀಕರ, ಸಂಯುಕ್ತ ಕಿಸಾನ ಮೋರ್ಚಾ ಅಧ್ಯಕ್ಷ ಬಸವರಾಜಪ್ಪ, ಪ್ರೋ ಹುದ್ದಾರ, ಸುರೇಶ ಕುಲಕರ್ಣಿ, ಡಿ.ಕೆ. ಹಳ್ಳದ, ಲೋಕನಾಥ ಹೆಬಸೂರ, ಶಂಕರ ಅಂಬಲಿ, ಸುಭಾಸಚಂದ್ರಗೌಡ ಪಾಟೀಲ, ಯಲ್ಲಪ್ಪ ದಾಡಿಬಾಯಿ, ಆರಿ​‍್ಡ. ನಡುವಿನಮನಿ, ಮುರಗಯ್ಯಜ್ಜ ವೀರಕ್ತಮಠ, ಸುದಗೌಡ ಪಾಟೀಲ, ಮಾಂತೇಶ ಹಂಚಿನಾಳ, ದ್ಯಾಮನಗೌಡ ಪಾಟೀಲ (ಬಲ್ಲರವಾಡ), ಎಂ.ಎಸ್‌. ರೋಣದ, ಮಲ್ಲಪ್ಪ ಕುರಹಟ್ಟಿ, ಗೀರೀಶ ಮಾಸ್ತಿ, ಸೋಮಣ್ಣ ಬಳಿಗೇರ, ಸೈಫುದ್ದೀನ ಅವರಾದಿ, ಬಿ.ಎಲ್‌. ಜೈನರ, ವೀರಣ್ಣ ಹಡಪದ, ಮಲ್ಲಿಕಾಜಿ ಕಾಲವಾಡ, ಯಲ್ಲಪ್ಪ ಗಾಣಿಗೇರ, ಸಿದ್ದಲಿಂಗಪ್ಪ ಅಂಗಡಿ, ಅರುಣಕುಮಾರ ಮಜ್ಜಗಿ, ಶಿವಾನಂದ ಚಿಕ್ಕನರಗುಂದ, ನಿಂಗಪ್ಪ ಮರಿನಾಯ್ಕರ, ಭಗವಂತ ಪುಟ್ಟಣ್ಣವರ, ಶಿವಣ್ಣ ಹುಬ್ಬಳ್ಳಿ, ದೇವಪ್ಪ ವಗ್ಗರ, ದಾವಲಸಾಬ ದರವಾನಿ, ಪ್ರಕಾಶ ಕೊಣ್ಣೂರ, ಭೀಮಪ್ಪ ಮುಳ್ಳೂರ, ಬಾಬಾಜಾನ ಮುಲ್ಲಾನವರ, ಶ್ರೀನಿವಾಸ ಬೂದಿಹಾಳ, ಪರಶುರಾಮ ಹೊನಕೇರಿ, ಚಾಂದು ನದಾಫ, ಶಶಿ ಚಾಕಲಬ್ಬಿ, ಎಂ.ಎಂ. ಮುಲ್ಲಾನವರ, ಶರಣು ಹಿರೇಮಠ (ಯಮನೂರ), ಶಂಕರು ಗಾಣಿಗೇರ, ಕರಿಯಪ್ಪ ಕೋಟೂರ, ಕಿರಣ ಉಳ್ಳಿಗೇರಿ, ಶಿವಾಂದ ಬಂಡಿವಾಡ, ಬಸು ಓಲೆಕಾರ, ಮಹಮ್ಮದಅಲಿ ಜಿಗಳೂರ, ಶ್ರೀಮತಿ ಶಾಂತಾ ಚಿಕ್ಕನರಗುಂದ ವಕೀಲಕರು, ನಂದಿನಿ ಹಾದಿಮನಿ, ಪುರಸಭೆ ಸದಸ್ಯರುಗಳಾದ ಜೀವನ ಪವಾರ, ಮಂಜು ಜಾಧವ, ಮಹಾಂತೇಶ ಭೋವಿ, ಶಿವಾನಂದ ತಡಸಿ, ಮೊದೀನಸಾಬ ಶಿರೂರ, ಸುರೇಶ ಮೇಟಿ, ಹನಮಂತ ವಾಲಿಕಾರ ಹಾಗೂ ಇತರೇ ರೈತ ಮುಖಂಡರುಗಳು ಉಪಸ್ತಿತರಿದ್ದರು. 


ಸುದ್ದಿ ಓದಿ