ಇಂಡಿ

ಚುನಾವಣೆ ಕೇಂದ್ರಕ್ಕೆ ತೆರಳುತ್ತಿರುವ ಸಿಬ್ಬಂದಿಗಳು

ಚುನಾವಣೆ ಕೇಂದ್ರಕ್ಕೆ ತೆರಳುತ್ತಿರುವ ಸಿಬ್ಬಂದಿಗಳು
ಪಟ್ಟಣದ ಮಿನಿ ವಿಧಾನಸೌಧದಿಂದ ಚುನಾವಣೆ ಕೇಂದ್ರಕ್ಕೆ ತೆರಳುತ್ತಿರುವ ಸಿಬ್ಬಂದಿ.

ಇಂಡಿ: ಡಿ.10 ರಂದು ಜರುಗಲಿರುವ ವಿಜಯಪುರ ಬಾಗಲಕೋಟ ವಿಧಾನ ಪರಿಷತ್  ಮತಕ್ಷೇತ್ರದ ಚುನಾವಣೆ-2021ರ ಪ್ರಯುಕ್ತ ಕರ್ತವ್ಯ ನಿರ್ವಹಿಸಲು ನಿಯೋಜಿತ ಸಿಬ್ಬಂದಿ  ಇಂಡಿಯಿಂದ ಬೆಳಗ್ಗೆ 11 ಗಂಟೆಗೆ  ತೆರಳಿದರು. 

ಇಂಡಿಯಿಂದ ಮತಗಟ್ಟೆ ಸಿಬ್ಬಂದಿ ಮಸ್ಟರಿಂಗ ಕೇಂದ್ರ ಮಿನಿ ವಿಧಾನಸೌಧದಿಂದ ಚುನಾವಣೆ ಸಾಮಗ್ರಿ ಪಡೆದು ನಂತರ ಮತದಾನ ಕೇಂದ್ರಕ್ಕೆ ಹೋದರು. 

ಇಂಡಿಯಿಂದ 38 ಗ್ರಾಪಂ ಮತ್ತು ಇಂಡಿ ಪಟ್ಟಣದ ಪುರಸಭೆ ತೆರಳಿದರು. 

ನಂತರ ಮತದಾನ ಮುಗಿದ ಮೇಲೆ ಮತ್ತೆ ಮಿನಿ ವಿಧಾನಸೌಧಕ್ಕೆ ಬಂದು ಮತದಾನದ ಸಾಮಗ್ರಿಗಳನ್ನು ಒಪ್ಪಿಸುವರು 

ಇಂಡಿಯ ಮಿನಿ ವಿಧಾನಸೌಧದಿಂದ  ಚುನಾವಣೆಗೆ 120 ಸಿಬ್ಬಂದಿ , 5 ಬಸ್ಸು ಮತ್ತು 7 ಕ್ರೂಸರ ಗಳಲ್ಲಿ ಹೋದರು. 

ಇಂಡಿಯ ತಹಸೀಲ್ದಾರ ಬಸವರಾಜ. ಐ.ಈ, ಶಿರಸ್ತೆದಾರ ಎಸ್‌.ಎಸ್‌.ಗುನ್ನಾಪುರ, ಕಂದಾಯ ನೀರಿಕ್ಷಕ    ಬಸವರಾಜ ರಾವೂರ, ಗ್ರಾಮ ಲೆಕ್ಕಾಧಿಕಾರಿ ಸಿದ್ದರಾಮ ಪೂಜಾರಿ, ಎಮ್‌.ಆರ್‌.ರಾಠೋಡ, ಪ್ರಕಾಶ ಚವಡಿಹಾಳ    ಪಾಲ್ಗೊಂಡಿದ್ದರು. 

ಸುದ್ದಿ ಓದಿ