ಶಾಸಕ ಶ್ರೀಮಂತ ಪಾಟೀಲ ಪ್ರಯತ್ನದಿಂದ ಬಾಂದಾರ ನಿರ್ಮಾಣ
ಲೋಕದರ್ಶನ ವರದಿ
ಸಂಬರಗಿ 22: ಜಂಬಗಿ ಗ್ರಾಮದ ಹೊರವಲಯದ ಶಾಸಕ ಶ್ರೀಮಂತ ಪಾಟೀಲ ಅವರ ಪ್ರಯತ್ನದಿಂದ ಬಾಂದಾರ ನಿರ್ಮಿಸುವುದರಿಂದ ಗ್ರಾಮದ ಅಕ್ಕಪಕ್ಕದ ರೈತರು ಎರಡು ಕಿ ಮೀ., ಅಂತರದಲ್ಲಿ ತೆರೆದ ಭಾವಿ ಹಾಗೂ ಕೊಳವೆ ಭಾವಿಗಳಿಗೆ ನೀರಿನ ಮಟ್ಟ ಹೆಚ್ಚಾಗುತ್ತದೆ.
ಶಾಸಕ ಶ್ರೀಮಂತ ಪಾಟೀಲ ಅವರ ಪ್ರಯತ್ನದಿಂದ 30 ಲಕ್ಷ ರೂಪಾಯ ಅನುದಾನ ಮಂಜೂರ ಮಾಡಿದ್ದಾರೆ, ಈ ಬಾಂದಾರದಿಂದ ಮಳೆಗಾಲದಲ್ಲಿ ನೀರು ಸಂಗ್ರಹವಾಗಿ ಬೇಸಿಗೆಯಲ್ಲಿ ಬಳಕೆಯಾಗುತ್ತದೆ, ಸದ್ಯ ಕಾಮಗಾರಿ ಪ್ರಗತಿಯಲ್ಲಿದ್ದು ಮುಂದಿನ ಮಳೆಗಾಲದಲ್ಲಿ ನೀರು ಸಂಗ್ರಹಿಸಲಾಗುವುದು. ನೀರಿನ ಮಟ್ಟ ಉಳಿಯತ್ತದೆ ಆದ್ದರಿಂದ ಈ ಬಾಂದಾರ ಬಲಪಡಿಸಲಾಗುವುದು. ಗಡಿ ಭಾಗದ ಅಗ್ರಣಿ ನದಿ ಸುತ್ತಮುತ್ತದಲ್ಲಿ 40 ಬಾಂದಾರಗಳನ್ನು ನಿರ್ಮಿಸಲಾಗಿದ್ದು ನೂರಾರು ಎಕರೆ ಜಮೀನು ನೀರಿನಿಂದ ಅನುಕೂಲವಾಗಿದೆ.
ಶಿರೂರ, ಸಂಬರಗಿ, ಪಾಂಡೆಗಾಂವ, ಅಜುರ,ತಾಂವಶಿ, ನಾಗನುರ, ಶಿವನುರ, ಕಲೊತ್ತಿ, ಅಬ್ಯಾಳ ಈ ಸುತ್ತಮುತ್ತ ಅಗ್ರಾಣಿ ತೀರದಲ್ಲಿ ಬಾಂದಾರ ನಿರ್ಮಾಣ ಮಾಡಿ ಅನುಕೂಲ ಮಾಡಿದ್ದಾರೆ. ಈಭಾಗದ ಭಾವಿಗಳಿಗೆ ನೀರು ಬಂದಿದೆ