ರಾಣೆಬೆನ್ನೂರ

ಶ್ರೀ ಸಿದ್ಧಾರೂಢರು ಇಂದಿಗೂ ಅಜರಾಮರರೂ: ಡಾ. ಶಿವಾನಂದ ಭಾರತಿ ಸ್ವಾಮೀಜಿ

ಶ್ರೀ ಸಿದ್ಧಾರೂಢರು ಇಂದಿಗೂ ಅಜರಾಮರರೂ: ಡಾ. ಶಿವಾನಂದ ಭಾರತಿ ಸ್ವಾಮೀಜಿ

ರಾಣಿಬೆನ್ನೂರ27:  ದುಷ್ಟನ್ನು ಮತ್ತು ಶಿಷ್ಟರನ್ನು ಸಮಾನ ದೃಷ್ಠಿಯಲ್ಲಿ ಕಂಡವರು ಶ್ರೀಸಿದ್ಧಾರೂಢರು. ಕೃತಾಯುಗದಲ್ಲಿ ವಿಷ್ಣು, ತ್ರೈತಾಯುಗದಲ್ಲಿ ಶ್ರೀರಾಮಚಂದ್ರ, ದ್ವಾಪಾರ ಯುಗದಲ್ಲಿ ಶ್ರೀಕೃಷ್ಣ ಮರಮಾತ್ಮ ದುಷ್ಠರನ್ನು ಸಂಹರಿಸಿ ಶಿಷ್ಟರನ್ನು ಕಾಪಾಡಿದ್ದನ್ನು ಈ ಮೂರು ಪುರಾಣಗಳಲ್ಲಿ ಕಂಡಿದ್ದೇವೆ. ಆದರೆ ಕಲಿಯುಗದಲ್ಲಿ ಶ್ರೀಸಿದ್ಧಾರೂಡರು ದುಷ್ಠರ ಮತ್ತು ಶಿಷ್ಠರ ಕಲ್ಯಾಣ ಬಯಸಿದವರು ಇಂದಿಗೂ ಅಜರಾಮರವಾಗಿದ್ದಾರೆ ಎಂದು ಇಂಚಲ ಶಿವಯೋಗಿಶ್ವರ ಸಾಧು ಸಂಸ್ಥಾನಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.

  ತಾಲೂಕಿನ ಸುಕ್ಷೇತ್ರ ಖಂಡೇರಾಯನಹಳ್ಳಿ  ಸಿದ್ಧಾರೂಢ ಮಠದಲ್ಲಿ ಏರ್ಪಡಿಸಿದ್ದ ಸದ್ಗುರು ಸಿದ್ಧಾರೂಢ ಸ್ವಾಮಿಯವರ ಜಯಂತಿ ಅಂಗವಾಗಿ 26ನೇಯ ವೇದಾಂತ ಪರಿಷತ್ ಸಮಾರಂಭದಲ್ಲಿ ಪ್ರಕಾಶ ಚನ್ನಗೌಡ್ರ ಅವರು ಸಿದ್ಧಾರೂಡರ ಭಾವಚಿತ್ರಗಳನ್ನು ಮುದ್ರಿಸಿದ ಭಾವಚಿತ್ರಗಳನ್ನು ಬಿಡುಗಡ ಮಾಡಿ ಮಾತನಾಡಿದರು. 

    ಶಿವಾವತಾರಿ ಭೂಲೋಕ ವಾಸಿಯಾದ  ಸಿದ್ಧಾರೂಢರು ಸರ್ವ ಜೀವಿಗಳಿಗೂ ಮಾಮಧೇನು ಕಲ್ಪ ವೃಕ್ಷವಿದ್ದಂತೆ. ಅವರ ಭಾವಚಿತ್ರ ನಿಮ್ಮ ಮನೆಯಲ್ಲಿ ಇದ್ದರೆ ಸಾಕು ಸುಖ, ಶಾಂತಿ, ನೆಮ್ಮದಿ ಲಭಿಸುತ್ತದೆ. ಶಿವಾವತಾರಿ ಸಿದ್ಧಾರೂಢರು ಜಾತಿ, ಮತ, ಪಂಥಗಳ ಬೇಧವಿಲ್ಲದೆ ಶಾಂತಿ ಮಂತ್ರವನ್ನು ಬೋಧಿಸಿದ ಮಹಾತ್ಮರು. ಅವರ ಭಾವಚಿತ್ರಕ್ಕೆ ಒಂದು ಬಾರಿ ನಮಿಸಿದರೆ ಸಾಕು ಜಾತಿಯ ಸೋಂಕು ತಗುಲದೆ ಸರ್ವರೂ ಒಂದಾಗಿ ಬಾಳಲು ಸಾಧ್ಯ ಎಂದು ಶ್ರೀಗಳು ನುಡಿದರು. 

   ಮಾಕನೂರ ಗ್ರಾಮದ ಪ್ರಕಾಶ ಚನ್ನಗೌಡ್ರ ಅವರು ಶ್ರೀಸಿದ್ಧಾರೂಡರ ಭಾವ ಚಿತ್ರಗಳನ್ನು ಮುದ್ರಿಸಿ ಉಚಿತವಾಗಿ ವಿತರಿಸಲು ಮುಂದಾಗಿರುವುದು ಅವರ ಭಕ್ತಿಗೆ ಕೈಗನ್ನಡಿಯಾಗಿದೆ ಇವರ ನಿಸ್ವಾರ್ಥ ಸೇವೆಯ ಲಾಭವನ್ನು ಎಲ್ಲ ಭಕ್ತರು ಪಡೆದುಕೊಳ್ಳಬೇಕು. ಸಿದ್ಧಾರೂಢರು ಭೌತಿಕವಾಗಿ ನಮ್ಮ ಜೊತೆ ಇಲ್ಲದಿದ್ದರೂ ಅವರ ಆತ್ಮ ಇಲ್ಲಿಯೇ ಇದ್ದು ಅವರ ಅಂತಃಕರುಣೆ ನಮ್ಮ ಮನಸ್ಸನ್ನು ಚಂಚಲಗೊಳಸದೆ ಸಂರಕ್ಷಿಸುತ್ತೆದೆ ಎಂದು ಶ್ರೀಗಳು ತಿಳಿಸಿದರು.

     ಶ್ರೀಮಠದ ಪೀಠಾಧಿಪತಿ ನಾಗರಾಜಾನಂದ ಮಹಾಸ್ವಾಮಿಜಿ,  ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಶ್ರೀಗಳು, ದಾವಣಗೇರಿಯ ಜಡಿಸಿದ್ದೇಶ್ವರ ಮಠದ ಶಿವಾನಂದ ಶ್ರೀಗಳು, ಇಂಚಲದ ಪ್ರರ್ಣಿ ನಂದ ಭಾರತಿ ಶ್ರೀಗಳು, ಹುಬ್ಬಳ್ಳಿ ಸಚ್ಚಿದಾನಂದ ಸ್ವಾಮೀಜಿ, ಹದಡಿಯ ಚಂದ್ರಗಿರಿ ಮಠದ ಮುರಳೀಧರ ಶ್ರೀಗಳು, ಗೋಕಾಕ ತಾಲೂಕ ಹಡಗಿನಾಳದ ಸುಜ್ಞಾನ ಕುಟೀರದ ಮಲ್ಲೇಶ್ವರ ಶರಣರು ಉಪಸ್ಥಿತರಿದ್ದರು.


ಸುದ್ದಿ ಓದಿ