ಮಾನಸಿಕ ಬೆಳವಣಿಗೆಗೆ ಕ್ರೀಡೆ ಅವಶ್ಯಕ: ಎಸ್ ಡಿ ಪಾಟೀಲ
ಇಂಡಿ 13: ಮಕ್ಕಳ ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಅತಿ ಅವಶ್ಯವಾಗಿವೆ ಎಂದು ಇಂಡಿ ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಸ್ ಡಿ ಪಾಟೀಲ ಹೇಳಿದರು.ಅವರು ಲಚ್ಯಾಣ ಗ್ರಾಮದಲ್ಲಿ ನಡೆದ ಲೋಣಿ ಕೆಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಲಚ್ಯಾಣ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಲಚ್ಯಾಣ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.ಕ್ರೀಡೆಗಳಿಂದ ಮಕ್ಕಳ ಮಾನಸಿಕ ವಿಕಾಸದ ಜೊತೆಗೆ ಶಾರೀರಿಕ ಬೆಳವಣಿಗೆಯು ಸಾಧ್ಯವಾಗುತ್ತದೆ ಅದಕ್ಕಾಗಿ ಪ್ರತಿ ಶಾಲೆಯಲ್ಲಿ ಇಂದು ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಬೇಕೆಂದು ಶಿಕ್ಷಕರಿಗೆ ಕರೆ ನೀಡಿದರು.
ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು ಇರುತ್ತದೆ ಎನ್ನುವ ಮಾತಿನಂತೆ ಮಕ್ಕಳು ಒಳ್ಳೆಯ ಆಹಾರ ಸೇವನೆಯ ಜೊತೆಗೆ ಹೆಚ್ಚಿನ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ದೈಹಿಕ ಬೆಳವಣಿಗೆಯನ್ನು ಹೆಚ್ಚಿಸಿಕೊಳ್ಳಬೇಕೆಂದು ಹೇಳಿದರು. ಲಚ್ಯಾಣ ವಲಯದಲ್ಲಿ ಬರುವ ಅಗರಖೇಡ, ಹಿರೇಬೇವನೂರ, ಆಳೂರ ಹಾಗೂ ಲಚ್ಯಾಣ ಸಮೂಹ ಸಂಪನ್ಮೂಲ ಕೇಂದ್ರಗಳಲ್ಲಿ ಬರುವ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ವಿವಿಧ ಕ್ರೀಡೆಗಳಿಗೆ ಭಾಗವಹಿಸಿ, ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಆರ್ ವಿ ಪಾಟೀಲ, ಲಚ್ಯಾಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶವಂತ ಬಿರಾದಾರ,ಎಂಪಿಎಸ್ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ದೊಡ್ಡಗೊಂಡಪ್ಪ ಬಿರಾದಾರ, ಲೋಣಿ ಕೆಡಿ ಎಸ್ ಡಿ ಎಂ ಸಿ ಅಧ್ಯಕ್ಷ ಸುರೇಶ ಜಾದವ,ಉಪಾಧ್ಯಕ್ಷ ಅಶೋಕ ಶಿವಪೂರೆ,ಸದಸ್ಯರಾದ ಬಸವರಾಜ ಪಾಟೀಲ,ಲಕ್ಷ್ಮಣ ಚೌಗಲೆ, ಹಣಮಂತ ಭೀಸೆ, ಭೈರ್ಪ ಜಾದವ,ಅಭಿಮನ್ಯು ಖರಾತ, ಭೀಮು ಬನಸೋಡೆ,ನಾನಾಗೌಡ ಪಾಟೀಲ, ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಸುರೇಶ ಪೋಲಾಸಿ,ರಾಜಶೇಖರ ನಿಂಬರಗಿ,ಮಂಗಳೂರ ಸರ್ ಅಗರಖೇಡ ಸಿ ಆರ್ ಪಿ, ಎಂ ಎಸ್ ಚವ್ಹಾಣ ಹಾಗೂ ಲಚ್ಯಾಣ ಸಿ ಆರ್ ಪಿ ಎಸ್ ಬಿ ಬಿರಾದಾರ ಉಪಸ್ಥಿತರಿದ್ದರು.ಕಾರ್ಯಕ್ರಮದ ಮುಕ್ತಾಯ ಹಂತದಲ್ಲಿ ಕ್ರೀಡಾಕೂಟದಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.