ಇಂಡಿ

ಅದ್ದೂರಿಯಾಗಿ ನಡೆದ ಶ್ರೀ ಮರುಳಸಿದ್ದೇಶ್ವರ ಪಲ್ಲಕ್ಕಿ ಉತ್ಸವ

ಅದ್ದೂರಿಯಾಗಿ ನಡೆದ ಶ್ರೀ ಮರುಳಸಿದ್ದೇಶ್ವರ ಪಲ್ಲಕ್ಕಿ ಉತ್ಸವ

ಇಂಡಿ 2:  ತಾಲ್ಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ  ಮರುಳಸಿದ್ದೇಶ್ವರ ಪಲ್ಲಕ್ಕಿ ಉತ್ಸವ  ಅಭಿನವ ರಾಚೋಟೇಶ್ವರ ಶಿವಾಚಾರ್ಯರ ದಿವ್ಯ ಸಾನ್ನಿಧ್ಯದಲ್ಲಿ ಅದ್ದೂರಿಯಾಗಿ ನಡೆಯಿತು. ಬೆಳಗೆ  ಮರುಳಸಿದ್ದೇಶ್ವರ ದೇವರಿಗೆ ರುದ್ರಾಭಿಷೇಕ ಮಾಡಿ ವಿಶೇಷ ಪೂಜೆ ಮಾಡಲಾಯಿತು.ನಂತರ ಭಕ್ತರು ಸರದಿ ಸಾಲಿನಲ್ಲಿ ನಿಂತು  ಮರುಳಸಿದ್ದೇಶ್ವರ ದೇವರ ದರ್ಶನ ಪಡೆದರು.ಅನೇಕ ಭಕ್ತರು ದೀರ್ಘದಂಡ ನಮಸ್ಕಾರ ಹಾಕಿದರು,ನಂತರ ಮದ್ಯಾಹ್ನ ಮೂರು ಘಂಟೆ  ಮರುಳಸಿದ್ದೇಶ್ವರ ಪಲ್ಲಕ್ಕಿ ಉತ್ಸವ ಸಂಗೀತ ನೃತ್ಯ ವಾದ್ಯ -ವೈಭವದೊಂದಿಗೆ ಪಟಾಕ್ಷಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ,ನೆರೆದ ಭಕ್ತರು ಕಿಲೋಮೀಟರ ವರಿಗೆ ಸರದಿಯಲ್ಲಿ ನಿಂತು ಹೊಸ ಬಟ್ಟೆ ತೊಟ್ಟು ಉರುಳು ಸೇವೆ ಮಾಡುತ್ತಾರೆ.ಅವರ ಮೇಲೆ ಪಲ್ಲಕ್ಕಿ ಹೊತ್ತು ಪೂಜಾರಿ ಹಾದು ಹೋಗುತ್ತಾರೆ.ಇದರಿಂದ ಮರುಳಸಿದ್ದೇಶ್ವರ ಆರ್ಶಿವಾದ ನಮ್ಮ ಮೇಲೆ ಸದಾ ಆಗಿರಲಿ ಎಂದು ಬೇಡಿಕೊಳ್ಳುತ್ತಾರೆ.  

ನಂತರ  ಮರುಳಸಿದ್ದೇಶ್ವ ಪಲ್ಲಕ್ಕಿಯು ಇಂಡಿ-ವಿಜಯಪೂರ ರಾಜ್ಯ ಹೆದ್ದಾರಿಯ ಬಳಿ ಇರುವ ಜೋಡಗುಡಿಗೆ ಹೋಗುತ್ತದೆ.ಅಲ್ಲಿ ಕೂಡಾ ಸಾವಿರಾರು ಜನ ಭಕ್ತರು  ಮರುಳಸಿದ್ದೇಶ್ವರ ಪಲ್ಲಕ್ಕಿ ಆಗಮನಕ ಆಗುತ್ತಿದ್ದಂತೆ ಜನರ ಜೈಕಾರ ಹಾಕುತ್ತಾರೆ, ಮರುಳಸಿದ್ದೇಶ್ವರ ಪಲ್ಲಕ್ಕಿಯು ಮರಳಿ ತಡವಲಗಾ ಗ್ರಾಮಕ್ಕೆ ಬಂದು ಬಲಭೀಮ ದೇವಸ್ಥಾನದಲ್ಲಿ ವಾಸ್ತವ್ಯ ಇರುತ್ತದೆ.ಪಲ್ಲಕ್ಕಿ ವಾಸ್ತವ್ಯದ ನಿಮಿತ್ತವಾಗಿ ಗೀ ಗೀ ಪದಗಳು ಜರಗುವವು. ಜಾತ್ರೆಗೆ ಬಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.ಈ ಬಾರಿ ಮರುಳಸಿದ್ದೇಶ್ವರ ಪಲ್ಲಕ್ಕಿ ಉತ್ಸವ ಶಾಂತಿಯುತವಾಗಿ ನಡೆಯಲು ಹೋರ್ತಿ ಪೋಲಿಸ್ ಠಾಣೆ ಪಿಎಸ್‌ಐ ದೀಪಿಕಾ ಗೋಡೆಕಾರ ಅವರ ನೇತೃತ್ವದಲ್ಲಿ ವ್ಯಾಪಕ ಪೋಲಿಸ್ ಬಂದು ಬಸ್ತ ಕೈಗೊಳ್ಳಲಾಯಿತು. 


ಸುದ್ದಿ ಓದಿ